ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರದ ಅನೇಕ ಸಚಿವರ ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿಗಳು ಮೇಕೆದಾಟು ಅಣೆಕಟ್ಟು ವಿಚಾರ ಸೇರಿದಂತೆ ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ವರದಿಯಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಲೋಕಸಭೆ ಸಂಸದ ತೇಜಸ್ವಿ ಸೂರ್ಯ, ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದ ಎಲ್ಲ ಸಂಸದರ ನಿಯೋಗ ಇಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದ ನೀರಾವರಿ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಂಬಂಧಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.
ಬೊಮ್ಮಾಯಿ ಜೊತೆ ಸಂಸದರಾದ ಶಿವಕುಮಾರ್ ಉದಾಸಿ, ಉಮೇಶ್ ಜಾಧವ್ ಹಾಗೂ ಮಾಜಿ ಸಚಿವರಾಗಿರುವ ಆರ್.ಅಶೋಕ್ ಹಾಗೂ ಉಮೇಶ್ ಕತ್ತಿ ಸಾಥ್ ನೀಡಿದ್ದರು.
-
ಮುಖ್ಯಮಂತ್ರಿ @BSBommai ರವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ @gssjodhpur ರವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ವಿಷಯಗಳ ಕುರಿತು ಚರ್ಚಿಸಿದರು.
— CM of Karnataka (@CMofKarnataka) July 30, 2021 " class="align-text-top noRightClick twitterSection" data="
ಸಂಸದರಾದ @shivkumarudasi, @UmeshJadhav_BJP, ಮಾಜಿ ಸಚಿವರಾದ @RAshokaBJP,@UMESH_V_KATTI ಜೊತೆಗಿದ್ದರು.@MoJSDoWRRDGR @JalShaktiAbhyan pic.twitter.com/JgFvGZ3QkB
">ಮುಖ್ಯಮಂತ್ರಿ @BSBommai ರವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ @gssjodhpur ರವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ವಿಷಯಗಳ ಕುರಿತು ಚರ್ಚಿಸಿದರು.
— CM of Karnataka (@CMofKarnataka) July 30, 2021
ಸಂಸದರಾದ @shivkumarudasi, @UmeshJadhav_BJP, ಮಾಜಿ ಸಚಿವರಾದ @RAshokaBJP,@UMESH_V_KATTI ಜೊತೆಗಿದ್ದರು.@MoJSDoWRRDGR @JalShaktiAbhyan pic.twitter.com/JgFvGZ3QkBಮುಖ್ಯಮಂತ್ರಿ @BSBommai ರವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ @gssjodhpur ರವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ವಿಷಯಗಳ ಕುರಿತು ಚರ್ಚಿಸಿದರು.
— CM of Karnataka (@CMofKarnataka) July 30, 2021
ಸಂಸದರಾದ @shivkumarudasi, @UmeshJadhav_BJP, ಮಾಜಿ ಸಚಿವರಾದ @RAshokaBJP,@UMESH_V_KATTI ಜೊತೆಗಿದ್ದರು.@MoJSDoWRRDGR @JalShaktiAbhyan pic.twitter.com/JgFvGZ3QkB
ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿದ್ದಂತೆ ಮೇಕೆದಾಟು ಆಣೆಕಟ್ಟು ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಬೊಮ್ಮಾಯಿ, ಈ ಯೋಜನೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು. ಈ ಹಿಂದೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಸಂದರ್ಭದಲ್ಲೂ ಮೇಕೆದಾಟು ಯೋಜನೆ ಮಾಡಿಯೇ ಸಿದ್ಧ ಎಂದು ತಿಳಿಸಿದ್ದರು.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದರು.