ETV Bharat / bharat

ವರುಣ್​ ಸಿಂಗ್​ಗೆ ಬೆಂಗಳೂರಿನಲ್ಲಿ ಚಿಕಿತ್ಸೆ.. ಆಸ್ಪತ್ರೆಗೆ ರಾಜ್ಯಪಾಲ ಗೆಹ್ಲೋಟ್,​ ಸಿಎಂ ಬೊಮ್ಮಾಯಿ ಭೇಟಿ - ಥಾವರ್​ಚಂದ್​ ಗೆಹ್ಲೋಟ್​, ಬಸವರಾಜ ಬೊಮ್ಮಾಯಿ ಕಮಾಂಡರ್​ ಆಸ್ಪತ್ರೆಗೆ

ವರುಣ್​ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಸೇನಾ ಆಸ್ಪತ್ರೆಗೆ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಹಾಗೂ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಭೇಟಿ ನೀಡಿ ವರುಣ್​ ಪ್ರತಾಪ್​ ಸಿಂಗ್​ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.

karnataka
ಆಸ್ಪತ್ರೆಗೆ ರಾಜ್ಯಪಾಲ
author img

By

Published : Dec 9, 2021, 9:40 PM IST

Updated : Dec 9, 2021, 9:55 PM IST

ಹೈದರಾಬಾದ್​: ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿರುವ ಗ್ರೂಪ್​ ಕ್ಯಾಪ್ಟನ್​ ವರುಣ್​ ಪ್ರತಾಪ್​ ಸಿಂಗ್​ ​ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಏರ್​ಫೋರ್ಸ್​ ಕಮಾಂಡ್​ ಆಸ್ಪತ್ರೆಗೆ ತರಲಾಗಿದೆ. ಅಲ್ಲದೇ, ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮಧ್ಯೆಯೇ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಹಾಗೂ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ಸೇನಾ ಆಸ್ಪತ್ರೆಗೆ ಭೇಟಿ ನೀಡಿ ವರುಣ್​ ಪ್ರತಾಪ್​ ಸಿಂಗ್​ ಅವರ ಆರೋಗ್ಯದ ಸ್ಥಿತಿಗಿತಿ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ವರುಣ್​ ಸಿಂಗ್​ ಅವರಿಗೆ ತಮಿಳುನಾಡಿನ ವೆಲ್ಲಿಂಗ್ಟನ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸೂಲೂರು ಏರ್‌ಬೇಸ್‌‌‌‌ನಿಂದ ವಿಶೇಷ ಏರ್‌ ಆಂಬ್ಯುಲೆನ್ಸ್ ಮೂಲಕ ಇಂದು ಮಧ್ಯಾಹ್ನ ಹೆಚ್​ಎಎಲ್‌ ವಿಮಾನ ನಿಲ್ದಾಣಕ್ಕೆ ತಂದು ಬಳಿಕ ಅಲ್ಲಿಂದ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಹೆಲಿಕಾಪ್ಟರ್​ ಪತನ: ದೆಹಲಿ ತಲುಪಿದ ಯೋಧರ ಪಾರ್ಥಿವ ಶರೀರ, ಅಂತಿಮ ದರ್ಶನ ಪಡೆದ ರಾಜನಾಥ್​ ಸಿಂಗ್​​​

ಸಿಡಿಎಸ್​ ಬಿಪಿನ್​ ರಾವತ್​ ಮತ್ತು ಅವರ ಪತ್ನಿ ಸೇರಿದಂತೆ 13 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ಕೂನೂರಿನ ನೀಲಗಿರಿ ಶ್ರೇಣಿಯಲ್ಲಿ ಪತನಗೊಂಡಿತ್ತು. ದುರ್ಘಟನೆಯಲ್ಲಿ ಎಲ್ಲಾ 13 ಜನರು ಮೃತಪಟ್ಟಿದ್ದರೆ, ಹೆಲಿಕಾಪ್ಟರ್​ ಪೈಲಟ್​ ಆಗಿದ್ದ ವರುಣ್​ ಪ್ರತಾಪ್​ ಸಿಂಗ್​ ಅವರು ಮಾತ್ರ ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

Last Updated : Dec 9, 2021, 9:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.