ETV Bharat / bharat

ಬಿಎಸ್​ವೈ ಕೆಳಗಿಳಿಸಲು ಹೈಕಮಾಂಡ್ ಹಿಂದೇಟು: ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಇಲ್ಲಿದೆ!

author img

By

Published : Jan 7, 2021, 5:44 PM IST

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಹಾಗೂ ಮುಖ್ಯಮಂತ್ರಿ ಬದಲಾವಣೆ ಆಗಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿದ್ದು, ಇದೆಲ್ಲದಕ್ಕೂ ಸದ್ಯ ಉತ್ತರ ಲಭ್ಯವಾಗಿದೆ.

CM BSY
CM BSY

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದ ಗಂಭೀರವಾಗಿ ಕೇಳಿ ಬರುತ್ತಿವೆ. ಆದರೆ ಇದೀಗ ಲಭ್ಯವಾಗಿರುವ ಮಹತ್ವದ ಮಾಹಿತಿ ಪ್ರಕಾರ ಅವರ ಕುರ್ಚಿ ಭದ್ರವಾಗಿದೆ ಎಂದು ತಿಳಿದು ಬಂದಿದೆ.

ಸದ್ಯದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಬಿಜೆಪಿ ಬಯಸುತ್ತಿಲ್ಲ ಎಂಬುದು ವಿಶ್ವಾಸಾರ್ಹ ಮೂಲಗಳು ಹೇಳುತ್ತಿವೆ. ಮುಖ್ಯಮಂತ್ರಿ ಆಗಿ ಅವರು ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ. ಆದರೆ ಮುಂದಿನ ಚುನಾವಣೆಗೂ ಮುನ್ನವೇ ಅವರನ್ನು ಬದಲಾವಣೆ ಮಾಡಿ ಹೊಸ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲು ಹೈಕಮಾಂಡ್​ ಮುಂದಾಗಿದೆ.

Karnataka cM With Nadda
ಜೆ.ಪಿ.ನಡ್ಡಾ ಜತೆ ಬಿಎಸ್​ವೈ

ವಿಶ್ವಾಸಾರ್ಹ ಮೂಲಗಳಿಂದ ಈಟಿವಿ ಭಾರತಗೆ ಮಾಹಿತಿ ಲಭ್ಯವಾಗಿದ್ದು, ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಯಾವುದೇ ಯೋಜನೆ ಕೇಂದ್ರದ ಮುಂದಿಲ್ಲ. ಯಡಿಯೂರಪ್ಪ ಅವರನ್ನು ತೆಗೆದುಹಾಕಲು ಸಂಘ ಪರಿವಾರ ಕೇಂದ್ರದ ಮೇಲೆ ಸಾಕಷ್ಟು ಒತ್ತಡ ಹೇರಿದೆ ಎನ್ನಲಾಗಿದೆ. ಆದರೆ ಹೈಕಮಾಂಡ್​ ಇದಕ್ಕೆ ಸಿದ್ಧವಾಗಿಲ್ಲ ಎನ್ನಲಾಗಿದೆ.

ಓದಿ: ತೆಲಂಗಾಣ ಸಿಎಂಗೆ ಶ್ವಾಸಕೋಶದ ನೋವು, ಉರಿಯೂತದ ಬಾಧೆ; ಆಸ್ಪತ್ರೆಯಲ್ಲಿ ತಪಾಸಣೆ

ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ!?

ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗುತ್ತದೆ ಎಂಬುದು ಕೇವಲ ವಿಪಕ್ಷಗಳ ವದಂತಿಯಾಗಿದೆ. ಕ್ಯಾಬಿನೆಟ್ ವಿಸ್ತರಣೆ ವಿಳಂಬದ ಹಿಂದೆ ಬೇರೆ ಕಾರಣ ಇದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಕೃಷಿ ಕಾನೂನಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದು, ತದನಂತರ ಬಿಹಾರ ಕ್ಯಾಬಿನೆಟ್​ ವಿಸ್ತರಣೆ ಬಗ್ಗೆ ಗಮನ ಹರಿಸಲಿದೆ. ಇದಾದ ಬಳಿಕ ಕರ್ನಾಟಕದ ಸರದಿ ಬರಲಿದೆ ಎಂದು ತಿಳಿಸಿದೆ.

ಕಳೆದ ಜನವರಿಯಿಂದಲೂ ಕರ್ನಾಟಕದಲ್ಲಿ ಕ್ಯಾಬಿನೆಟ್​ ವಿಸ್ತರಣೆ ವಿಷಯ ಹೆಚ್ಚು ಚರ್ಚೆಗೆ ಒಳಗಾಗಿದ್ದು, ಬಿಎಸ್​ವೈ ದೆಹಲಿಗೂ ತೆರಳಿದ್ದರು. ಆದರೆ ಹೈಕಮಾಂಡ್​ ಹೆಸರು ಅಂತಿಮಗೊಳಿಸಿಲ್ಲ. ಕಳೆದ ನವೆಂಬರ್​ ತಿಂಗಳಲ್ಲೂ ಬಿಎಸ್​ವೈ ದೆಹಲಿಗೆ ತೆರಳಿ ಜೆ.ಪಿ.ನಡ್ಡಾ ಅವರನ್ನ ಭೇಟಿಯಾಗಿದ್ದರು. ಇನ್ನು ಮುಂದಿನ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಕ್ಯಾಬಿನೆಟ್​ ವಿಸ್ತರಣೆಯಾಗಬಹುದು ಎನ್ನಲಾಗಿದೆ. ಅಮಿತ್​ ಷಾ ಕರ್ನಾಟಕದಲ್ಲಿನ ಪರಿಸ್ಥಿತಿ ಗ್ರಹಿಸಲು ವಿವಿಧ ನಾಯಕರನ್ನ ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ. ಇದಾದ ಬಳಿಕ ಕ್ಯಾಬಿನೆಟ್​ ವಿಸ್ತರಣೆಗೆ ಗ್ರೀನ್ ಸಿಗ್ನಲ್​ ಸಿಗಬಹುದು.

ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೆ 77 ವರ್ಷ ವಯಸ್ಸು. ಆದರೆ ಪಕ್ಷದ ನಿಯಮದ ಪ್ರಕಾರ 75 ವರ್ಷಕ್ಕಿಂತ ಮೇಲ್ಪಟ್ಟ ನಾಯಕರಿಗೆ ನಿವೃತ್ತಿ ನೀಡಲಾಗುತ್ತಿದೆ. 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಬೇರೆ ಅಭ್ಯರ್ಥಿಯನ್ನ ಸಿಎಂ ಆಗಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.