ETV Bharat / bharat

ವಾಸ್ಕೋಡಿಗಾಮ ಮೊದಲು ಭಾರತಕ್ಕೆ ಬಂದಿಳಿದ ಕಪ್ಪಾದ್ ಬೀಚ್ - ಕೇರಳದ ಕೋಯಿಕೋಡ್ ಜಿಲ್ಲೆಯ ಕಪ್ಪಾದ್ ಬೀಚ್

ಪ್ರವಾಸಿಗರಿಂದಾಗಿ ಬೀಚ್ ಸದಾ ಗದ್ದಲದಿಂದ ಕೂಡಿರುತ್ತದೆ. ಇದರಿಂದ ಇಲ್ಲಿರುವ ಅಂಗಡಿ ಮಾಲೀಕರು ಸಹ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕಪ್ಪಾದ್ ಪ್ರವಾಸೋದ್ಯಮ ಕೇಂದ್ರ ಸಂಪೂರ್ಣವಾಗಿ ಬದಲಾಗುತ್ತಿದ್ದಂತೆ, ಕಾಡು ಪೊದೆಗಳಿಂದ ಮುಚ್ಚಲಾಗಿದ್ದ ವಾಸ್ಕೋಡಿಗಾಮ ಸ್ಮಾರಕವನ್ನು ಈಗ ತೆರೆಯಲಾಗಿದೆ.

Kappad Beach, the land where Portuguese explorer Vasco Da Gama landed
ವಾಸ್ಕೋಡಗಾಮ ಮೊದಲು ಭಾರತಕ್ಕೆ ಬಂದಿಳಿದ ಕಪ್ಪಾದ್ ಬೀಚ್
author img

By

Published : Mar 6, 2021, 6:09 AM IST

ಕೋಯಿಕೋಡ್: 1498 ರಲ್ಲಿ ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ ಕೇರಳದ ಇಂದಿನ ಕೋಯಿಕೋಡ್ ಜಿಲ್ಲೆಯ ಕಪ್ಪಾದ್ ಕರಾವಳಿಗೆ ಮೊದಲ ಬಾರಿ ಬಂದಿಳಿದ ಎಂದು ಇತಿಹಾಸ ಹೇಳುತ್ತೆ. ಅಂದಿನಿಂದ ಭಾರತದಲ್ಲಿ ವಿದೇಶಿಗರ ಆಕ್ರಮಣ ಆರಂಭವಾಯಿತು ಅನ್ನೋದನ್ನು ನಾವು ಇತಿಹಾಸದಲ್ಲಿ ಓದುತ್ತೇವೆ.

ವಾಸ್ಕೋಡಿಗಾಮ ಮೊದಲು ಭಾರತಕ್ಕೆ ಬಂದಿಳಿದ ಕಪ್ಪಾದ್ ಬೀಚ್

ಹೀಗೆ ದೇಶದ ಚರಿತ್ರೆಯೊಂದಿಗೆ ಥಳುಕು ಹಾಕಿಕೊಂಡಿರುವ ಈ ಕಪ್ಪಾದ್ ಬೀಚ್ ಇಂದು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ. ಕೋಯಿಕೋಡ್ ಜಿಲ್ಲೆಯ ಚೆಮಂಚೇರಿ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಕಪ್ಪಾದ್ ಬೀಚ್‌ ಸೌಂದರ್ಯ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. 2020ರಲ್ಲಿ ಪರಿಸರ ಸ್ನೇಹಿ ಕಡಲತೀರಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡಲಾಯಿತು. ಈ ವೇಳೆ ಕಪ್ಪಾದ್​ ಬೀಚ್​ಗೆ ಬ್ಲ್ಯೂ ಫ್ಲ್ಯಾಗ್​ ಪ್ರಮಾಣೀಕರಣ ದೊರೆತಿದೆ. ಕೇರಳ ಸರ್ಕಾರ 99 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರೀನ್ ಕಾರ್ಪೆಟ್ ಯೋಜನೆಯನ್ನು ಇಲ್ಲಿ ಜಾರಿಗೆ ತಂದಿದೆ.

ಕಪ್ಪಾದ್ ಬೀಚ್‌ನಲ್ಲಿ ಬೆಂಚುಗಳನ್ನು ಹಾಕಿದ್ದು ಪ್ರವಾಸಿಗರಿಗೆ ಕುಳಿತು ರಮಣೀಯ ಕಡಲ ಕಿನಾರೆಯನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕುಡಿಯುವ ನೀರಿನ ಸೌಲಭ್ಯ, ವಿಶ್ರಾಂತಿ ಕೊಠಡಿಗಳು, ಸಿಸಿಟಿವಿ ಕ್ಯಾಮರಾಗಳು, ಆಟದ ಉಪಕರಣ, ವಾಕಿಂಗ್​ ಮಾರ್ಗ, ಸ್ನ್ಯಾಕ್ ಬಾರ್ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಲು ವಿಶೇಷ ವೇದಿಕೆಯನ್ನು ಸಿದ್ಧಪಡಿಸಲಾಗಿದೆ.

ಕಪ್ಪಾದ್‌ ಬೀಚ್​ನಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸುವಾಗ ಇಲ್ಲಿ ನಡೆದ ಕಾಮಗಾರಿಯೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಹೊಸ ಕಾಂಕ್ರೀಟ್ ನಿರ್ಮಾಣ ಕಾರ್ಯವನ್ನು ಸಾಧ್ಯವಾದಷ್ಟು ತಪ್ಪಿಸಲಾಗಿದೆ. ಬದಲಾಗಿ, ದೆಹಲಿಯಿಂದ ತಂದ ಬಿದಿರುಗಳನ್ನು ನಿರ್ಮಾಣ ಸಾಮಗ್ರಿಯಾಗಿ ಬಳಸಲಾಗಿದೆ. ಕಡಲತೀರದ ಪಾಲನೆ ಮತ್ತು ನಿರ್ವಹಣೆಗಾಗಿ 30 ಸಿಬ್ಬಂದಿ ನೇಮಿಸಲಾಗಿದೆ. ಬೀಚ್​ನ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ವಯಸ್ಕರಿಗೆ 25 ರೂ ಮತ್ತು 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ 10 ರೂ. ಪ್ರವೇಶ ಶುಲ್ಕ ಪಡೆಯಲಾಗುತ್ತದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉಚಿತವಾಗಿ ಪ್ರವೇಶ ಲಭ್ಯವಿದೆ.

ಪ್ರವಾಸಿಗರಿಂದಾಗಿ ಬೀಚ್ ಸದಾ ಗದ್ದಲದಿಂದ ಕೂಡಿರುತ್ತದೆ. ಇದರಿಂದ ಇಲ್ಲಿರುವ ಅಂಗಡಿ ಮಾಲೀಕರು ಸಹ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಕಪ್ಪಾದ್ ಪ್ರವಾಸೋದ್ಯಮ ಕೇಂದ್ರ ಸಂಪೂರ್ಣವಾಗಿ ಬದಲಾಗುತ್ತಿದ್ದಂತೆ, ಕಾಡು ಪೊದೆಗಳಿಂದ ಮುಚ್ಚಲಾಗಿದ್ದ ವಾಸ್ಕೋಡಿಗಾಮ ಸ್ಮಾರಕವನ್ನು ಈಗ ತೆರೆಯಲಾಗಿದೆ.

ಕಪ್ಪಾದ್ ಬೀಚ್​ಗೆ ಹೀಗೆ ಹೋಗಿ..

ರಸ್ತೆ ಮೂಲಕ ಕಪ್ಪಾದ್ ಬೀಚ್​ಗೆ ಹೋಗುವುದಾದರೆ, ರಾಷ್ಟ್ರೀಯ ಹೆದ್ದಾರಿ 66 ರ ಕೋಯಿಕೋಡ್ - ಕಣ್ಣೂರು ಮಾರ್ಗವಾಗಿ ತಿರುವಂಗೂರಿನ ಎಡಭಾಗದಲ್ಲಿ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. ಕಪ್ಪಾದ್‌ಗೆ ನಿರ್ದೇಶನಗಳನ್ನು ಹೆದ್ದಾರಿಯಲ್ಲಿಯೇ ಗೋಚರಿಸುವ ತಾಣಗಳ ಮೇಲೆ ಸ್ಪಷ್ಟವಾಗಿ ಇರಿಸಲಾಗಿದೆ. ಉತ್ತರ ಭಾಗದಿಂದ ಕೋಯಿಕೋಡ್ ಕಡೆಗೆ ಬರುವವರು ಕೊಯಿಲಾಂಡಿ ಪಟ್ಟಣದ ನಂತರ ಪೂಕಾಡ್ ಜಂಕ್ಷನ್‌ನಿಂದ ಬಲಕ್ಕೆ ಹೋಗಿ ಕಪ್ಪಾದ್​ ಬೀಚ್‌ಗೆ ಹೋಗಬಹುದು.

ರೈಲು ಮೂಲಕ ಕಪ್ಪಾದ್ ಬೀಚ್‌ಗೆ ಹತ್ತಿರದ ರೈಲ್ವೆ ನಿಲ್ದಾಣ ಕೊಯಿಲಾಂಡಿ. ಇದು ಬೀಚ್​ನಿಂದ 8 ಕಿಲೋಮೀಟರ್ ದೂರದಲ್ಲಿದೆ. ಕೊಯಿಲಾಂಡಿಯಲ್ಲಿ ಇಳಿದ ನಂತರ ಕಪ್ಪಾದ್‌ಗೆ ರಸ್ತೆ ಮೂಲಕ ಹೋಗಬೇಕು.

ಕೊಯಿಲಾಂಡಿ ರೈಲ್ವೆ ನಿಲ್ದಾಣವು ಮಂಗಳೂರು-ಮದ್ರಾಸ್ ರೈಲು ಮಾರ್ಗದ ಪ್ರಮುಖ ರೈಲು ನಿಲ್ದಾಣವಾದ ಕೋಯಿಕೋಡ್ ರೈಲ್ವೆ ನಿಲ್ದಾಣದಿಂದ 26 ಕಿಲೋಮೀಟರ್ ದೂರದಲ್ಲಿದೆ.

ವಿಮಾನದಲ್ಲಿ ಹೋಗುವುದಾದರೆ, ಕರಿಪುರದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕು. ಇದು ಕಪ್ಪಾದ್ ಬೀಚ್ ತಲುಪಲು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿಳಿದ ನಂತರ ಕರಿಪುರದಿಂದ 44 ಕಿಲೋಮೀಟರ್ ದೂರದಲ್ಲಿರುವ ಕಪ್ಪಾದ್‌ಗೆ ರಸ್ತೆ ಮೂಲಕ ಹೋಗಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.