ETV Bharat / bharat

ಕಾನ್ಪುರ ಹಿಂಸಾಚಾರ: ಪ್ರಮುಖ ಆರೋಪಿ ಖಾತೆಯಲ್ಲಿ ಕೋಟ್ಯಂತರ ರೂ. ವಹಿವಾಟು..ಬೆಚ್ಚಿಬಿದ್ದ ಅಧಿಕಾರಿಗಳು! - ಪ್ರಮುಖ ಆರೋಪಿ ಹಯಾತ್‌ ಜಾಫರ್‌ ಹಶ್ಮಿ ಬ್ಯಾಂಕ್​ ವಹಿವಾಟು

ಕಾನ್ಪುರ ಹಿಂಸಾಚಾರ ಪ್ರಕರಣ ಪ್ರಮುಖ ಆರೋಪಿ ಹಯಾತ್ ಜಾಫರ್ ಹಶ್ಮಿ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದನ್ನು ಎಟಿಎಸ್ ತಂಡದ ಅಧಿಕಾರಿಗಳು ಪತ್ತೆ ಮಾಡಿದ್ದು, ತನಿಖೆ ಮುಂದುವರಿಸಿದೆ.

mastermind hayat jafar hashmi  kanpur violence  kanpur today news  hayat jafar hashmi bank account  ಕಾನ್ಪುರ ಹಿಂಸಾಚಾರ ಪ್ರಕರಣ ಪ್ರಮುಖ ಆರೋಪಿ ಬ್ಯಾಂಕ್​ ಖಾತೆ  ಪ್ರಮುಖ ಆರೋಪಿ ಹಯಾತ್‌ ಜಾಫರ್‌ ಹಶ್ಮಿ ಬ್ಯಾಂಕ್​ ವಹಿವಾಟು  ಕಾನ್ಪುರ ಹಿಂಸಾಚಾರ ಸುದ್ದಿ
ಮುಖ ಆರೋಪಿ ಖಾತೆಯಲ್ಲಿ ಕೋಟ್ಯಾಂತರ ರೂ. ವಹಿವಾಟು
author img

By

Published : Jun 9, 2022, 1:04 PM IST

ಕಾನ್ಪುರ: ಮಹಾನಗರದ ಪರೇಡ್‌ ಸ್ಕ್ವೇರ್‌ನಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಟಿಎಸ್‌ ತಂಡದ ಅಧಿಕಾರಿಗಳು ಘಟನೆಯ ಪ್ರಮುಖ ಆರೋಪಿ ಹಯಾತ್‌ ಜಾಫರ್‌ ಹಶ್ಮಿ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹಿಂಸಾಚಾರದ ಪ್ರಮುಖ ಆರೋಪಿ ಹಶ್ಮಿ ಕಳೆದ ಮೂರು ವರ್ಷಗಳಲ್ಲಿ ನಾಲ್ಕು ವಿವಿಧ ಖಾತೆಗಳಿಂದ ಸುಮಾರು 50 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿಯೂ ಈ ವಿಚಾರವನ್ನು ಬಹಿರಂಗವಾಗಿ ಮಾತನಾಡಲು ಸಿದ್ಧರಿಲ್ಲ.

ಓದಿ: ಕಾನ್ಪುರ ಹಿಂಸಾಚಾರ ಪ್ರಕರಣ: 40 ಗಲಭೆಕೋರರ ಚಿತ್ರ ಇರುವ ಪೋಸ್ಟರ್​ ಬಿಡುಗಡೆ

ಹಯಾತ್ ಜಾಫರ್ ಹಶ್ಮಿ ತನ್ನ ಸಂಸ್ಥೆಯ ಹೆಸರಿನಲ್ಲಿ ಬ್ಯಾಂಕ್​ ಖಾತೆಗಳನ್ನು ತೆರೆದಿದ್ದಾರೆ. ಇವುಗಳಲ್ಲಿ, ಪೊಲೀಸರು ಮತ್ತು ಎಟಿಎಸ್ ತಂಡವು ಬಾಬುಪುರ್ವಾ, ಕರ್ನಲ್‌ಗಂಜ್ ಒಂದೊಂದು ಬ್ಯಾಂಕ್​ ಖಾತೆಯಿದ್ದು, ಬೆಕ್‌ಗಂಜ್‌ನಲ್ಲಿ ಎರಡು ಬ್ಯಾಂಕ್​ಗಳಲ್ಲಿ​ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಸಹ ಹೊಂದಿದೆ. ಖಾತೆಗಳಿಗೆ ಇಷ್ಟೊಂದು ಮೊತ್ತ ಎಲ್ಲಿಂದ ಬಂತು, ಎಲ್ಲಿಗೆ ವಹಿವಾಟು ನಡೆಸಲಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಹಯಾತ್ ಜಾಫರ್ ಹಶ್ಮಿಯ ಮೊಬೈಲ್, ಬ್ಯಾಂಕ್ ಖಾತೆ ಸೇರಿದಂತೆ ಹಲವು ಚಟುವಟಿಕೆಗಳ ಬಗ್ಗೆ ಎಟಿಎಸ್ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರತಿಯೊಂದು ಅಂಶವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ವಿಜಯ್ ಸಿಂಗ್ ಮೀನಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.