ಔರಂಗಾಬಾದ್(ಮಹಾರಾಷ್ಟ್ರ): ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದಗಳ ಮಧ್ಯೆ ಮರಾಠಿ ವೈದ್ಯರೊಬ್ಬರು ಕರ್ನಾಟಕದ ವೃದ್ಧ ರೋಗಿಯನ್ನು ಚಿಕಿತ್ಸಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಔರಂಗಾಬಾದ್ ಜಿಲ್ಲಾಸ್ಪತ್ರೆಯಲ್ಲಿ 27 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ ವ್ಯಕ್ತಿ ಕರ್ನಾಟಕದವರಾಗಿದ್ದರು. ಇವರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಆದರೆ ಅಲ್ಲೊಂದು ಭಾವನಾತ್ಮಕ ಸಂಬಂಧ ಏರ್ಪಟ್ಟಿತ್ತು. ವೃದ್ಧ ಚಿಕಿತ್ಸೆ ಮುಗಿಸಿ ವಾಪಸ್ ತೆರಳುವಾಗ ವೈದ್ಯರೂ ಭಾವುಕರಾದರು.
ನವೆಂಬರ್ 3ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಡಾ.ಬಾಳಸಾಹೇಬ ಶಿಂಧೆ ಎಂಬ ವೈದ್ಯ, ಗಡ್ಡ ಬಿಟ್ಟು, ಕೊಳಕು ಬಟ್ಟೆ ಧರಿಸಿದ್ದ ವೃದ್ಧನನ್ನು ಕಂಡರು. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಅವರನ್ನು ತಮ್ಮ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅವರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಅವರ ಬಗ್ಗೆ ಶಿಂಧೆ ವಿಚಾರಿಸಿದರೂ ಏನನ್ನೂ ಹೇಳಲು ವೃದ್ಧನಿಗೆ ಸಾಧ್ಯವಾಗಲಿಲ್ಲ. ಅವರಿಗೆ ನಡೆಯಲೂ ಸಾಧ್ಯವಾಗದ ಕಾರಣ ವಿವಿಧ ಪರೀಕ್ಷೆಗಳನ್ನು ಮಾಡಿಸಲಾಯಿತು. ಭಾಷೆ ಬರದ ಕಾರಣ ಚಿಕಿತ್ಸೆ ನೀಡುವಾಗ ವೈದ್ಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಬಳಿಕ ಕನ್ನಡ ಭಾಷೆ ಮಾತನಾಡಬಲ್ಲ ವಿಜಯಶ್ರೀ ಗಡಾಖ್ ಎಂಬವರನ್ನು ಕರೆಸಿ ವೃದ್ಧನೊಂದಿಗೆ ಮಾತಾಡಿಸಿದರು.
ಈ ವೇಳೆ, ಮೂರು ವರ್ಷಗಳ ಹಿಂದೆ ನನ್ನ ಮಗನೇ ಔರಂಗಾಬಾದ್ ರೈಲ್ವೇ ನಿಲ್ದಾಣದಲ್ಲಿ ನನ್ನನ್ನು ಬಿಟ್ಟು ಹೋಗಿದ್ದ. ನನ್ನ ಹೆಸರು ರಾಜು ರಾಮ ಗೌಡ. ನಾನು ಕರ್ನಾಟಕ ರಾಜ್ಯದ ಬಚಾಡಿ ಬಸವಕಲ್ಯಾಣ ನಿವಾಸಿ. ನಾನು ನನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಇದೀಗ ಅವರ ಚಿಕಿತ್ಸೆ ಮುಗಿದಿದ್ದು, ಎಲ್ಲಿಗೆ ಕಳುಹಿಸುವುದು ಎಂದು ವೈದ್ಯರು ಚಿಂತಿತರಾಗಿದ್ದರು. ಬಳಿಕ ಅವರನ್ನು ಪದ್ಮಜಾ ಸರಾಫ್ ಮಾರ್ಗದರ್ಶನದಲ್ಲಿ ಬೋಧಿ ಮಲ್ಟಿ ಪರ್ಪಸ್ ಚಾರಿಟೇಬಲ್ ಸಂಸ್ಥೆ ನಡೆಸುತ್ತಿರುವ ಸಂತ ಗಾಡ್ಗೆ ಮಹಾರಾಜರ ನಗರ ವಸತಿ ರಹಿತ ಆಶ್ರಯಕ್ಕೆ ಕಳುಹಿಸಿಕೊಡಲಾಯಿತು. ಈ ವೇಳೆ ವೃದ್ಧ ಸೇರಿದಂತೆ ಆಸ್ಪತ್ರೆಯ ವೈದ್ಯರು, ನರ್ಸ್ಗಳು, ಇತರ ರೋಗಿಗಳು ಭಾವುಕರಾದರು.
ಇದನ್ನೂ ಓದಿ:ಮಹಾರಾಷ್ಟ್ರ ಗ್ರಾಮಸ್ಥರ ನೀರಿನ ಬವಣೆ ನೀಗಿಸುತ್ತಿರುವ ಕರ್ನಾಟಕ: ಸ್ಥಳೀಯರಿಂದ ಮೆಚ್ಚುಗೆ