ETV Bharat / bharat

'ಆಧುನಿಕ ರಾವಣರನ್ನು ಸೋಲಿಸುವವರನ್ನು ಭೇಟಿಯಾದೆ': ಇಸ್ರೇಲ್ ರಾಯಭಾರಿ ಭೇಟಿ ಮಾಡಿದ ನಟಿ ಕಂಗನಾ ರಣಾವತ್ - ಈಟಿವಿ ಭಾರತ ಕರ್ನಾಟಕ

ನಟಿ ಕಂಗನಾ ರಣಾವತ್ ಅವರು ಇಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನೌರ್ ಗಿಲಾನ್ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಚರ್ಚೆ ನಡೆಸಿದರು.

Etv Bharkangana-ranaut-met-with-israels-ambassador-of-india-naor-gilonat
ಇಸ್ರೇಲ್ ರಾಯಭಾರಿಯನ್ನು ಭೇಟಿ ಮಾಡಿದ ನಟಿ ಕಂಗನಾ ರಣಾವತ್
author img

By ETV Bharat Karnataka Team

Published : Oct 25, 2023, 4:46 PM IST

ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಬುಧವಾರ ಇಸ್ರೇಲ್ ರಾಯಭಾರಿ ನೌರ್ ಗಿಲಾನ್ ಅವರನ್ನು ಭೇಟಿ ಮಾಡಿ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಇಸ್ರೇಲ್​ ವಿಜಯಶಾಲಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ತನ್ನ ಮುಂದಿನ ಸಿನಿಮಾ 'ತೇಜಸ್' ಪ್ರಚಾರದಲ್ಲಿರುವ ನಟಿ, ಇಸ್ರೇಲ್​ ರಾಯಭಾರಿಯೊಂದಿಗೆ ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ನಡೆಸಿದ ಸಂವಾದದ ಫೋಟೋ ಹಾಗು ವಿಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ಭಾರತದಲ್ಲಿನ ಇಸ್ರೇಲ್ ರಾಯಭಾರಿ ನಾರ್ ಗಿಲೋನ್ ಜಿ ಅವರೊಂದಿಗೆ ಅತ್ಯಂತ ಭಾವಪೂರ್ಣ ಚರ್ಚೆ ನಡೆಸಿದ್ದೇನೆ. ಇಂದು ಇಡೀ ಜಗತ್ತು, ವಿಶೇಷವಾಗಿ ಇಸ್ರೇಲ್ ಮತ್ತು ಭಾರತವು ಭಯೋತ್ಪಾದನೆಯ ವಿರುದ್ಧ ಸಂಘರ್ಷ ನಡೆಸುತ್ತಿದೆ. ಮಂಗಳವಾರ ನಾನು ರಾವಣನ ಪ್ರತಿಕೃತಿ ದಹನಕ್ಕಾಗಿ ದೆಹಲಿಗೆ ಬಂದಾಗ, ಇಸ್ರೇಲ್ ರಾಯಭಾರ ಕಚೇರಿಗೆ ಭೇಟಿ ನೀಡಿದೆ. ಇಂದಿನ ಆಧುನಿಕ ರಾವಣ ಮತ್ತು ಹಮಾಸ್‌ನಂತಹ ಭಯೋತ್ಪಾದಕರನ್ನು ಸೋಲಿಸುವವರನ್ನು ಭೇಟಿಯಾಗಬೇಕು ಎಂದು ನನಗನ್ನಿಸಿತು" ಎಂದು ರಾಷ್ಟ್ರ ರಾಜಧಾನಿಯ ಪ್ರಸಿದ್ಧ ಲವ್ ಕುಶ್ ರಾಮಲೀಲಾದಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿ ಕಂಗನಾ ಪೋಸ್ಟ್‌ನಲ್ಲಿ ಬರೆದಿದ್ದಾರೆ.

"ಸಣ್ಣ ಮಕ್ಕಳು ಮತ್ತು ಮಹಿಳೆಯರ ಮೇಲಿನ ಹಮಾಸ್ ಉಗ್ರರ ದೌರ್ಜನ್ಯ ಹೃದಯ ವಿದ್ರಾವಕವಾಗಿದೆ. ಭಯೋತ್ಪಾದನೆ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್ ಜಯಗಳಿಸಲಿದೆ ಎಂದು ನನಗೆ ಸಂಪೂರ್ಣ ಭರವಸೆ ಇದೆ. ನಾನು ಅವರೊಂದಿಗೆ ನನ್ನ ಮುಂಬರುವ ಚಿತ್ರ 'ತೇಜಸ್' ಮತ್ತು ಭಾರತದ ಸ್ವಾವಲಂಬಿ ಯುದ್ಧ ವಿಮಾನ ತೇಜಸ್ ಬಗ್ಗೆ ಚರ್ಚಿಸಿದ್ದೇನೆ. ನನ್ನ ಹೃದಯವು ಇಸ್ರೇಲ್​ಗಾಗಿ ಮಿಡಿಯುತ್ತಿದೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನೂರ್ ಗಿಲಾನ್ ಅವರೊಂದಿಗಿನ ನನ್ನ ಸಂಭಾಷಣೆ ಇಲ್ಲಿದೆ" ಎಂದು ತಿಳಿಸಿದ್ದಾರೆ.

"ಚಲನಚಿತ್ರದ ಪ್ರಚಾರಕ್ಕಾಗಿ ದೆಹಲಿಯಲ್ಲಿದ್ದ @KanganaTeam ಅವರನ್ನು ಭೇಟಿಯಾಗುವುದು ಮತ್ತು @Israelಗೆ ಬೆಂಬಲ ನೀಡಲು ಅವರು ನಮ್ಮ ರಾಯಭಾರ ಕಚೇರಿಗೆ ಭೇಟಿ ನೀಡಿದ್ದು ಸಂತಸವಾಗಿದೆ. ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಅಚಲ ಬೆಂಬಲ ನೀಡಿದ ಅವರಿಗೆ ಮಾತ್ರವಲ್ಲ, ಪ್ರಧಾನಿ @narendramodi ಜಿ ಮತ್ತು ನಮ್ಮ ಭಾರತೀಯ ಸ್ನೇಹಿತರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದೇನೆ" ಎಂದು ಗಿಲಾನ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಂಗನಾ ರಣಾವತ್ ಅವರ ಚಿತ್ರ "ತೇಜಸ್" ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಂಗನಾ ರಣಾವತ್ ಭಾರತೀಯ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ರಾವಣ ದಹನ ಮಾಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ನಟಿ ಕಂಗನಾ ರಣಾವತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.