ETV Bharat / bharat

ಪ್ರೀತಿಯ ಪುತ್ರನ ಸವಿನೆನಪಿಗಾಗಿ ಪ್ರತಿಮೆ ನಿರ್ಮಿಸಿದ ವೃದ್ಧ ಪೋಷಕರು - ಕಾಂಚೀಪುರಂನಲ್ಲಿ ಮಗನ ನೆನಪಿಗೆ ಪ್ರತಿಮೆ ನಿರ್ಮಾಣ

ತಮಿಳುನಾಡಿನ ಕಾಂಚೀಪುರಂನಲ್ಲಿ ವರ್ಷದ ಹಿಂದೆ ಹೃದಯಾಘಾತದಿಂದ ಮೃತಪಟ್ಟ ಮಗನ ಪ್ರತಿಮೆಯನ್ನು ವೃದ್ಧ ದಂಪತಿ ನಿರ್ಮಿಸಿ, ಪುತ್ರ ವಾತ್ಸಲ್ಯ ಮೆರೆದಿದ್ದಾರೆ.

Kancheepuram: Parents puts up statue in memory of their beloved son
ಪ್ರೀತಿಯ ಪುತ್ರನ ನೆನಪಿಗಾಗಿ ಪ್ರತಿಮೆ ನಿರ್ಮಿಸಿದ ವೃದ್ಧ ದಂಪತಿ
author img

By

Published : May 12, 2022, 1:29 PM IST

ಕಾಂಚೀಪುರಂ(ತಮಿಳುನಾಡು): ಮಗನ ಮೇಲಿನ ಪ್ರೀತಿಗೋಸ್ಕರ ಪೋಷಕರು ಪ್ರತಿಮೆ ನಿರ್ಮಿಸಿ ಪುತ್ರ ಪ್ರೇಮ ಮೆರೆದಿರುವ ಘಟನೆ ಕಾಂಚೀಪುರದಲ್ಲಿ ಬೆಳಕಿಗೆ ಬಂದಿದೆ. 80 ವರ್ಷದ ನಿವೃತ್ತ ಶಿಕ್ಷಕ ಕರುಣಾಕರನ್ ಮತ್ತು ಅವರ ಪತ್ನಿ ಹಾಗೂ ನಿವೃತ್ತ ಜಿಲ್ಲಾ ಕಂದಾಯ ಅಧಿಕಾರಿಯಾಗಿರುವ ಶಿವಗಾಮಿ (75) ತಮ್ಮ ಪುತ್ರ ಹರಿಕರನ್ (48) ಸ್ಮರಣಾರ್ಥ ಪ್ರತಿಮೆ ನಿರ್ಮಿಸಿದ್ದಾರೆ.

ಕಳೆದ ವರ್ಷ ಮೇ 10ರಂದು ಮಗ ಹರಿಕರನ್ ಹೃದಯಾಘಾತದಿಂದ ನಿಧನರಾಗಿದ್ದರು. ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದ ದಂಪತಿ ಆತನ ಪ್ರತಿಮೆ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದಾರೆ. ನಂತರ ಅವರು ಮಹಬಲಿಪುರಂನಲ್ಲಿರುವ ಶಿಲ್ಪಿಯನ್ನು ಸಂಪರ್ಕಿಸಿ 2.5 ಲಕ್ಷ ರೂಪಾಯಿ ಖರ್ಚು ಮಾಡಿ 5.3 ಅಡಿ ಪ್ರತಿಮೆ ಮಾಡಿದ್ದಾರೆ. ಹರಿಕರನ್​ಗೆ ಪ್ರಿಯವಾದ ಬಣ್ಣದ ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಪ್ರತಿಮೆಗೆ ತೊಡಿಸಿ, ಮನೆಯ ಮುಂದೆ ಇರಿಸಿದ್ದಾರೆ.

Kancheepuram: Parents puts up statue in memory of their beloved son

ಕರುಣಾಕರನ್ ಅವರ ಮನೆಯಲ್ಲಿ ಮೊದಲ ವರ್ಷದ ಪುಣ್ಯಸ್ಮರಣೆಯ ಭಾಗವಾಗಿ, ಸ್ನೇಹಿತರು ಮತ್ತು ಸಂಬಂಧಿಗಳ ಸಮ್ಮುಖದಲ್ಲಿ ಮೇ 9ರಂದು ಹರಿಕರನ್ ಅವರ ಪ್ರತಿಮೆಯನ್ನು ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು. ಪ್ರತಿಮೆಯ ಮುಂದೆ ಪ್ರತಿದಿನ ಕುಟುಂಬಸ್ಥರಿಂದ ಪ್ರಾರ್ಥನೆ ಜರುಗುತ್ತದೆ.

ಇದನ್ನೂ ಓದಿ: ಹಸಿವು ತಾಳದೆ ಪದೆ ಪದೇ ಭಿಕ್ಷೆ ಬೇಡಿದ ಬಾಲಕ.. ಕತ್ತು ಹಿಸುಕಿ ಕೊಂದೇಬಿಟ್ಟ ಹೆಡ್​ ಕಾನ್ಸ್​ಟೇಬಲ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.