ETV Bharat / bharat

ಪ್ಯೂನ್ ಆಗಿ ಕೆಲಸ ಮಾಡುತ್ತಲೇ ವಿವಿಯ ಪ್ರಾಧ್ಯಾಪಕನಾದ ಸಾಧಕ - peon in Bhagalpur

ಟಿಎಂಬಿಯುನ ಅಂಬೇಡ್ಕರ್ ವಿಚಾರ ವಿಭಾಗದಲ್ಲಿ ಪ್ಯೂನ್ ಮತ್ತು ಕಾವಲುಗಾರ ಕೆಲಸ ಮಾಡಿಕೊಂಡಿದ್ದ, ಬಿಹಾರದ ಕಮಲ್ ಕಿಶೋರ್ ಮಂಡಲ್ ಎಂಬ ಯುವಕ ಇದೀಗ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಬಿಹಾರದ ಕಮಲ್ ಕಿಶೋರ್ ಮಂಡಲ್
ಬಿಹಾರದ ಕಮಲ್ ಕಿಶೋರ್ ಮಂಡಲ್
author img

By

Published : Oct 13, 2022, 6:30 PM IST

ಭಾಗಲ್ಪುರ (ಬಿಹಾರ): ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಬಿಹಾರದ ಕಮಲ್​ ಕಿಶೋರ್​ ಮಂಡಲ್​ ಉತ್ತಮ ಉದಾಹರಣೆಯಾಗಿದ್ದಾರೆ. ಹೌದು, ಇವರು ವಾಚ್​​ಮ್ಯಾನ್​ ಕೆಲಸ ಮಾಡಿಕೊಂಡು, ಓದಿ ಇದೀಗ ತಿಲಕಮಾಂಜಿ ಭಾಗಲ್ಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾರೆ.

ಹಗಲು ರಾತ್ರಿ ಕೆಲಸ ಮಾಡಿಕೊಂಡು, ಓದಿ ಪಿಎಚ್‌ಡಿ ಮುಗಿಸಿದ್ದಾರೆ. ಇದೀಗ ಇವರು ಬಿಹಾರ್ ಸ್ಟೇಟ್ ಯೂನಿವರ್ಸಿಟಿ ಸರ್ವಿಸ್ ಕಮಿಷನ್‌ ಅರ್ಹತಾ ಪರೀಕ್ಷೆಯನ್ನು ಪಾಸ್​ ಮಾಡಿದ್ದಾರೆ. ಭಾಗಲ್ಪುರ ಪಟ್ಟಣದ ಮುಂಡಿಚಕ್ ಪ್ರದೇಶದ ನಿವಾಸಿ 42 ವರ್ಷದ ಕಮಲ್ ಕಿಶೋರ್ ಮಂಡಲ್ ಅವರು, 2003 ರಲ್ಲಿ 23ನೇ ವಯಸ್ಸಿನಲ್ಲಿ ಮುಂಗೇರ್‌ನ ಆರ್‌ಡಿ ಮತ್ತು ಡಿಜೆ ಕಾಲೇಜಿನಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸಕ್ಕೆ ಸೇರಿಕೊಂಡರು.

ತಿಲಕಮಾಂಜಿ ಭಾಗಲ್ಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ
ತಿಲಕಮಾಂಜಿ ಭಾಗಲ್ಪುರ ವಿಶ್ವವಿದ್ಯಾಲಯದ

ಕಾವಲುಗಾರನಾಗಿ ಕೆಲಸ: ರಾಜ್ಯಶಾಸ್ತ್ರದಲ್ಲಿ ಪದವಿಯನ್ನು ಅವರು ಪಡೆದಿದ್ದರು. ಆದ್ರೆ ಹಣದ ಅವಶ್ಯಕತೆ ಇದ್ದ ಕಾರಣ ಕಾವಲುಗಾರರಾಗಿ ಕೆಲಸಕ್ಕೆ ಸೇರಿಕೊಂಡರು. ಕರ್ತವ್ಯಕ್ಕೆ ಸೇರಿದ ಒಂದು ತಿಂಗಳ ನಂತರ ತಿಲ್ಕಾ ಮಾಂಝಿ ಭಾಗಲ್ಪುರ್ ವಿಶ್ವವಿದ್ಯಾನಿಲಯದ (ಟಿಎಂಬಿಯು) ಅಂಬೇಡ್ಕರ್ ವಿಚಾರ ಮತ್ತು ಸಮಾಜ ಕಾರ್ಯ ವಿಭಾಗಕ್ಕೆ (ಸ್ನಾತಕೋತ್ತರ ಪದವಿ) ಅವರನ್ನು ಡೆಪ್ಯೂಟೇಶನ್‌ನಲ್ಲಿ ಪ್ಯೂನ್​ ಆಗಿ ಕಳುಹಿಸಿದಾಗ ಅವರ ಬದುಕು ಮಹತ್ವದ ತಿರುವು ಪಡೆದುಕೊಂಡಿತು. 2008 ರಲ್ಲಿ, ಅವರಿಗೆ ಪ್ಯೂನ್ ಹುದ್ದೆ ನೀಡಲಾಯಿತು.

2019 ರಲ್ಲಿ ಪಿಎಚ್‌ಡಿ ಪದವಿ: ಅಂಬೇಡ್ಕರ್ ಚಿಂತನ ಮತ್ತು ಸಮಾಜಕಾರ್ಯ ವಿಭಾಗಕ್ಕೆ ಬಂದ ನಂತರ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭೇಟಿ ಮಾಡಿದರು. ವಿದ್ಯಾರ್ಥಿಗಳನ್ನು ಕಂಡೊಡನೆ ಅವರ ಮನಸ್ಸಿನಲ್ಲಿ ಮುಂದೆ ಓದುವ ಕುತೂಹಲ ಹೆಚ್ಚಾಗತೊಡಗಿದ್ದು, ಪಿಜಿ ಮಾಡಿದರು. ಅವರು 2013 ರಲ್ಲಿ ಪಿಎಚ್‌ಡಿಗಾಗಿ ಸ್ವತಃ ನೋಂದಾಯಿಸಿಕೊಂಡರು ಮತ್ತು 2017 ರಲ್ಲಿ ಪ್ರಬಂಧವನ್ನು ಸಲ್ಲಿಸಿದರು. ಅವರಿಗೆ 2019 ರಲ್ಲಿ ಪಿಎಚ್‌ಡಿ ಪದವಿ ನೀಡಲಾಯಿತು. ಈ ನಡುವೆ ಅವರು ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಅನ್ನು ಸಹ ಪಾಸ್​ ಮಾಡಿದ್ದಾರೆ.

ಇದನ್ನೂ ಓದಿ: ಏನಪ್ಪಾ.. ಇಲ್ಲೊಂದು ಪ್ಲೇಟ್​ ಪಾನಿಪುರಿ ಕೊಡು.. ಗೋಲ್​ಗಪ್ಪ ತಿಂದು ಎಂಜಾಯ್​ ಮಾಡಿದ ಗಜರಾಜ

2009 ರಲ್ಲಿ ಪಿಎಚ್‌ಡಿ ಮಾಡಲು ಅನುಮತಿ ಕೇಳಿದೆ, ಆದರೆ ಮೂರು ವರ್ಷಗಳ ನಂತರ 2012 ರಲ್ಲಿ ಇಲಾಖೆ ಒಪ್ಪಿಗೆ ನೀಡಿತು. ನನ್ನ ಅಧ್ಯಯನಕ್ಕೆ ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳು ಅಡ್ಡಿಯಾಗಲು ನಾನು ಎಂದಿಗೂ ಅವಕಾಶ ನೀಡಲಿಲ್ಲ. ನಾನು ಬೆಳಗ್ಗೆ ತರಗತಿಗಳಿಗೆ ಹಾಜರಾಗಿದ್ದೇನೆ ಮತ್ತು ಮಧ್ಯಾಹ್ನ ಡ್ಯೂಟಿ ಮಾಡಿದ್ದೇನೆ. ರಾತ್ರಿಯ ಸಮಯದಲ್ಲಿ ತರಗತಿಯಲ್ಲಿ ಮಾಡಿದ ಅಧ್ಯಯನವನ್ನು ಪುನರಾವರ್ತಿಸಿದ್ದೇನೆ ಎಂದು ಕಮಲ್ ಕಿಶೋರ್ ಮಂಡಲ್ ಹೇಳಿದ್ದಾರೆ.

ಕಮಲ್ ಕಿಶೋರ್ ಮಂಡಲ್ ಅವರಿಗೆ ತಿಲಕಮಾಂಜಿ ಭಾಗಲ್ಪುರ ವಿಶ್ವವಿದ್ಯಾಲಯದ (ಟಿಎಂಬಿಯು) ಪ್ರಾಧ್ಯಾಪಕ ರಮೇಶ್ ಕುಮಾರ್ ಶುಭ ಹಾರೈಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.