ಕಾಳಿಯಗಂಜ್ (ಪಶ್ಚಿಮ ಬಂಗಾಳ): ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದು, ಪ್ರತಿಭಟನಾಕಾರರು ಕಲಿಯಾಗಂಜ್ ಠಾಣಾ ವ್ಯಾಪ್ತಿಯ ಕಲಿಯಾಗಂಜ್ -ದುರ್ಗಾಪುರ ರಾಜ್ಯ ರಸ್ತೆಯಲ್ಲಿ ಶುಕ್ರವಾರ ಟೈಯರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಬಾಲಕಿಯ ಮೃತದೇಹ ಪತ್ತೆಯಾದ ಬೆನ್ನಲ್ಲೆ ಘಟನೆಯಿಂದಾಗಿ ಕಲಿಯಾಗಂಜ್ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಶುಕ್ರವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಈ ಪ್ರದೇಶದ ಹತ್ತಿರ ಬಾಳೆ ಎಲೆಗಳನ್ನು ಕಡಿಯಲು ಬಂದಿದ್ದಾನೆ. ಬಾಲಕಿಯ ಶವ ಕಂಡ ಆತ ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ಕಲಿಯಗಂಜ್ ಪೊಲೀಸರು ಆಗಮಿಸಿದ್ದರು.
ಮರಣೋತ್ತರ ಪರೀಕ್ಷೆಗೆ ಸ್ಥಳೀಯರಿಂದ ತಡೆ: ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸದಂತೆ ಸ್ಥಳೀಯರು ತಡೆದರು. ಉದ್ರಿಕ್ತರು ಕಲಿಯಾಗಂಜ್ -ದುರ್ಗಾಪುರ ರಾಜ್ಯಸಾದ್ ಮೇಲೆ ಟೈಯರ್‌ಗಳನ್ನು ಸುಟ್ಟು ಪ್ರತಿಭಟನೆ ಆರಂಭಿಸಿದರು. ಕುಟುಂಬದ ಮೂಲಗಳ ಪ್ರಕಾರ, ಬಾಲಕಿ ಗುರುವಾರ ಮಧ್ಯಾಹ್ನ ಮನೆಯಿಂದ ಹೋಗಿದ್ದು ಮತ್ತೆ ಹಿಂತಿರುಗಿರಲಿಲ್ಲ. ಭಯಗೊಂಡ ಕುಟುಂಬಸ್ಥರು ವಿವಿಧೆಡೆ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: 2003ರಲ್ಲಿ ಯುವತಿ ವಿಷಯವಾಗಿ ಗೆಳೆಯನ ಕೊಲೆ: 2023ರಲ್ಲಿ ಆರೋಪಿ ತಪ್ಪೊಪ್ಪಿಗೆ.. ಮೂಳೆಗಳು ಹೊರಕ್ಕೆ
ಸುವೇಂದು ಅಧಿಕಾರಿ ಗಂಭೀರ ಆರೋಪ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದು, "ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ'' ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: 18 ವರ್ಷಗಳಿಂದ ಕಳ್ಳತನವೇ ಕಾಯಕ; ಕದ್ದ ಮಾಲನ್ನೇ ಟಿಪ್ಸ್ ನೀಡುತ್ತಿದ್ದ ಚಾಲಕಿ ಸೆರೆ