ETV Bharat / bharat

ಚಲಿಸುತ್ತಿದ್ದ ರೈಲಿನಲ್ಲೇ ಕಬಡ್ಡಿ ಆಟಗಾರ್ತಿ ಮೇಲೆ ರೇಪ್​... ಶೌಚಾಲಯದಲ್ಲಿ ದುಷ್ಕೃತ್ಯ - ಕಬಡ್ಡಿ ಆಟಗಾರ್ತಿ ಮೇಲೆ ರೇಪ್​

ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿ ಕಬಡ್ಡಿ ಪ್ಲೇಯರ್ ಮೇಲೆ ಅತ್ಯಾಚಾರವೆಸಗಿರುವ ಘಟನೆ ಹರಿಯಾಣದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

kabaddi player raped in train
kabaddi player raped in train
author img

By

Published : Apr 25, 2022, 3:58 PM IST

ಭಿವಾನಿ(ಹರಿಯಾಣ): ಚಲಿಸುತ್ತಿದ್ದ ರೈಲಿನಲ್ಲೇ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ರೈಲಿನ ಶೌಚಾಲಯದಲ್ಲಿ ಈ ದುಷ್ಕೃತ್ಯ ಎಸಗಲಾಗಿದ್ದು, ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

ಹರಿಯಾಣದ ದಂಗರ್​ ಗ್ರಾಮದ ನಿವಾಸಿ ಮೋನು ಎಂಬಾತ ತನ್ನ ಮಗಳನ್ನ ಕಬಡ್ಡಿ ತರಬೇತಿಗೋಸ್ಕರ ಕಳೆದ ಫೆಬ್ರವರಿ ತಿಂಗಳಲ್ಲಿ ಇಂದೋರ್​ನಲ್ಲಿರುವ ಅಕಾಡೆಮಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಕೆಲ ತಿಂಗಳ ನಂತರ ಅಲ್ಲಿನ ವಾತಾವರಣ ಸರಿ ಬಾರದ ಕಾರಣ ತಮ್ಮ ಮಗಳನ್ನ ವಾಪಸ್ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ರೈಲಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಆರೋಪಿಯೋರ್ವ ನಶೆ ಬರುವ ಪದಾರ್ಥ ನೀಡಿದ್ದಾನೆ. ಇದರ ಬೆನ್ನಲ್ಲೇ ಆಕೆಯನ್ನ ಶೌಚಾಲಯದೊಳಗೆ ಕರೆದುಕೊಂಡು ಹೋಗಿ, ದುಷ್ಕೃತ್ಯವೆಸಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಾಯಿ ದೂರು ದಾಖಲು ಮಾಡಿದ್ದು, ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

ಇದನ್ನೂ ಓದಿ: ಮುಂದುವರೆದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಸಸ್ಪೆನ್ಸ್​​.. ಕುತೂಹಲ ಮೂಡಿಸಿದ ಸೋನಿಯಾ ನಡೆ!

ದೂರಿನ ಪ್ರಕಾರ, 12ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳು ಕಬಡ್ಡಿ ಆಟಗಾರ್ತಿ ಆಗಿದ್ದು, ಆಕೆಯ ಮೇಲೆ ರೈಲಿನಲ್ಲಿ ಅತ್ಯಾಚಾರ ನಡೆದಿದೆ. ಈ ವೇಳೆ ಆರೋಪಿ ಬೆದರಿಕೆ ಸಹ ಹಾಕಿದ್ದಾನೆಂದು ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.