ETV Bharat / bharat

ಕಾಂಗ್ರೆಸ್​ನಲ್ಲಿದ್ದಿದ್ರೆ ಸಿಎಂ ಆಗ್ತಿದ್ರು ಎಂಬ ರಾಹುಲ್​ ಹೇಳಿಕೆಗೆ ಸಿಂಧಿಯಾ ತಿರುಗೇಟು ಹೀಗಿದೆ..

ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​​ನಲ್ಲಿ ಇದ್ದಿದ್ದರೆ ಮುಖ್ಯಮಂತ್ರಿಯಾಗಬಹುದಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದರು.

Jyotiraditya Scindia
Jyotiraditya Scindia
author img

By

Published : Mar 9, 2021, 3:39 PM IST

ನವದೆಹಲಿ: ಕಳೆದೊಂದು ವರ್ಷದಲ್ಲಿ ನಾನು ನಿರ್ದಿಷ್ಟ ಮಟ್ಟ ಕಾಯ್ದುಕೊಂಡಿದ್ದೇನೆ. ಯಾವಾಗಲೂ ಆ ಮಟ್ಟಕ್ಕಿಂತಲೂ ಹೆಚ್ಚಾಗಿ ನಿಲ್ಲುತ್ತೇನೆ. ಹಾಗಾಗಿ, ರಾಹುಲ್​ ಗಾಂಧಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

ಜ್ಯೋತಿರಾದಿತ್ಯ ಸಿಂಧಿಯಾ ತಿರುಗೇಟು

ಇದನ್ನೂ ಓದಿ: ನಾವೀಗ ಗಡಿ ರಹಿತ ಸಮರಕ್ಕೆ ಸಿದ್ಧರಾಗಬೇಕಿದೆ: ರಾಹುಲ್​ ಗಾಂಧಿ

ನಾನು ಕಾಂಗ್ರೆಸ್​​ನಲ್ಲಿದ್ದಾಗಲೇ ಅವರು ಈ ರೀತಿ ಕಾಳಜಿ ವಹಿಸಿದ್ದರೆ ಹೇಗಿರುತ್ತಿತ್ತು? ಎಂದು ಸುದ್ದಿಗಾರರಿಗೆ ಪ್ರಶ್ನೆ ಮಾಡಿರುವ ಸಿಂಧಿಯಾ, ನಾನೀಗ ಆ ಪಕ್ಷದಲ್ಲಿಲ್ಲ ಎಂಬ ಮಾತ್ರಕ್ಕೆ ಅವರು ಈ ರೀತಿಯಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್​​ ಪಕ್ಷದಲ್ಲಿದ್ದಾಗ ನನ್ನ ಬಗ್ಗೆ ಇಷ್ಟೊಂದು ಕಾಳಜಿ ವಹಿಸಬೇಕಾಗಿತ್ತು ಎಂದರು.

ನಿನ್ನೆ ದೆಹಲಿಯಲ್ಲಿ ನಡೆದ ಯುವ ಕಾಂಗ್ರೆಸ್​ ರಾಷ್ಟ್ರೀಯ ಪದಾಧಿಕಾರಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಸಿಂಧಿಯಾ ಕಾಂಗ್ರೆಸ್​​ ಜೊತೆ ಇರುತ್ತಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದರು. ಆದರೆ ಬಿಜೆಪಿಯಲ್ಲಿ ಬ್ಯಾಕ್​ ಬೆಂಚರ್​ ಆಗಿದ್ದಾರೆ ಎಂದು ಹೇಳಿದರು.

ಕಳೆದ ವರ್ಷದ ಮಾರ್ಚ್​ ತಿಂಗಳಲ್ಲಿ ಸಿಂಧಿಯಾ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.