ನವದೆಹಲಿ: ಸುಪ್ರೀಂ ಕೋರ್ಟ್ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ನೇಮಕಗೊಂಡಿದ್ದು ಆಗಸ್ಟ್ 27ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನಿವೃತ್ತಿಯಾಗಲಿರುವ ಕಾರಣ ಅವರ ಸ್ಥಾನಕ್ಕೆ ನೂತನ ನ್ಯಾಯಮೂರ್ತಿಗಳನ್ನು ನೇಮಿಸಿ ರಾಷ್ಟ್ರಪತಿ ಭವನ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 26ರಂದು ಮುಖ್ಯ ನ್ಯಾಯಮೂರ್ತಿ ರಮಣ ನಿವೃತ್ತಿಯಾಗುವರು.
-
Justice Uday Umesh Lalit appointed as 49th Chief Justice of India: Ministry of Law and Justice pic.twitter.com/mp5OZJqMvv
— ANI (@ANI) August 10, 2022 " class="align-text-top noRightClick twitterSection" data="
">Justice Uday Umesh Lalit appointed as 49th Chief Justice of India: Ministry of Law and Justice pic.twitter.com/mp5OZJqMvv
— ANI (@ANI) August 10, 2022Justice Uday Umesh Lalit appointed as 49th Chief Justice of India: Ministry of Law and Justice pic.twitter.com/mp5OZJqMvv
— ANI (@ANI) August 10, 2022
ಉದಯ್ ಉಮೇಶ್ ಲಲಿತ್ ಅವರು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳಾಗಿದ್ದು, ಕಳೆದ ಒಂದು ವಾರದ ಹಿಂದೆ ಇವರ ಹೆಸರು ಶಿಫಾರಸು ಮಾಡಿ ನ್ಯಾ.ಎನ್.ವಿ.ರಮಣ ಅವರು ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದ್ದರು.
ಮೂರು ತಿಂಗಳು ಮಾತ್ರ ಅಧಿಕಾರವಧಿ: ಸುಪ್ರೀಂ ಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ಯು.ಬಿ.ಲಲಿತ್ ನವೆಂಬರ್ 8ರಂದು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಇವರ ಅಧಿಕಾರವಧಿ ಮೂರು ತಿಂಗಳು ಮಾತ್ರ ಇರಲಿದೆ.
ಮಹಾರಾಷ್ಟ್ರ ಮೂಲದ ಉಮೇಶ್ ಲಲಿತ್ ಅವರು, ಮೂರು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ. 1971ರ ಜನವರಿಯಲ್ಲಿ 13ನೇ ಸಿಜೆಐ ಆದ ನ್ಯಾ.ಎಸ್.ಎಂ.ಸಿಕ್ರಿ ಅವರ ನಂತರ ನ್ಯಾ.ಲಲಿತ್ ಅವರು ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೇರಿದ 2ನೇ ಸಿಜೆಐ ಆಗಲಿದ್ದಾರೆ.
ನವೆಂಬರ್ 9,1957ರಂದು ಜನಿಸಿದ ನ್ಯಾಯಮೂರ್ತಿ ಲಲಿತ್ 1983ರಿಂದ ತಮ್ಮ ವಕೀಲಿ ವೃತ್ತಿ ಪ್ರಾರಂಭಿಸಿದ್ದರು. ಡಿಸೆಂಬರ್ 1985 ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಕೆಲಸ ಮಾಡಿ, ತದನಂತರ ದೆಹಲಿಗೆ ತೆರಳಿದ್ದರು. 2004ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ, ಆಗಸ್ಟ್ 13, 2014 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ನ್ಯಾ.ಲಲಿತ್ ನಿವೃತ್ತಿಯ ನಂತರ ನ್ಯಾ.ಡಿ.ವೈ.ಚಂದ್ರಚೂಡ್ ಅವರು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.