ETV Bharat / bharat

ಪಕ್ಷಾತೀತ ನಿಲುವು, ಮಹತ್ವದ ತೀರ್ಪುಗಳಿಂದ ನಾಡಿಗೆ ಸ್ಪೂರ್ತಿ ಸಿಜೆಐ ಎನ್​ ವಿ ರಮಣ

author img

By

Published : Aug 26, 2022, 12:51 PM IST

ನ್ಯಾಯಮೂರ್ತಿ ಎನ್‌ವಿ ರಮಣ ಅವರು ಏಪ್ರಿಲ್ 24, 2021 ರಂದು 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ವಾರಗಳಲ್ಲಿ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲೇ ಎಲ್ಲರಿಗೂ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದರು.

Justice NV Ramana
ಸಿಜೆಐ ಎನ್​ ವಿ ರಮಣ

ಹೈದರಾಬಾದ್: ಹಲವಾರು ಅಡೆತಡೆಗಳನ್ನು ದಾಟಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎನ್​ ವಿ ರಮಣ ಅವರು ಇಂದು ತಮ್ಮ ಉನ್ನತ ಸ್ಥಾನದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಬದ್ಧತೆ, ಮೌಲ್ಯಗಳು ಹಾಗೂ ಜನಪರವಾದ, ಪಕ್ಷಾತೀತ ನಿಲುವುಗಳಿಂದಾಗಿ ನ್ಯಾಯಮೂರ್ತಿ ನೂತಲಪತಿ ವೆಂಕಟ ರಮಣ ಅವರು ಇಂದು ದೇಶದ ನ್ಯಾಯಾಂಗದಲ್ಲಿ ಅಗ್ರಸ್ಥಾನದಲ್ಲಿ ನಿಂತಿದ್ದಾರೆ.

ಅವರು ನೀಡಿದಂತಹ ಮಹತ್ವದ, ಗಮನಾರ್ಹ ತೀರ್ಪುಗಳು ಅವರ ಸ್ಥಾನಕ್ಕೆ ಇನ್ನಷ್ಟು ಕೀರ್ತಿಯನ್ನು ತಂದುಕೊಟ್ಟಿದೆ. ತಮ್ಮದೇ ಆದ ವಿಶೇಷ ಸ್ಥಾನವನ್ನು ಗಳಿಸಿರುವ ಎನ್.ವಿ.ರಮಣ ಅವರು ಜನರ ನ್ಯಾಯಾಧೀಶರಾಗಿ ನೀಡಿದ ಕೊಡುಗೆಗಳಿಂದಾಗಿ ಸದಾ ಸ್ಮರಣೀಯರು. ಸ್ಫೂರ್ತಿಯಾಗಿ ಉಳಿಯುವಂತಹ ತೀರ್ಪುಗಳನ್ನು ನೀಡುವ ಮೂಲಕ ಶ್ರೇಷ್ಠ ನ್ಯಾಯಾಧೀಶರಾಗಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಎನ್​ ವಿ ರಮಣ ಅವರು ನೀಡಿದ ಒಂದು ತೀರ್ಪಿನಲ್ಲಿ, ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾದರೆ ನ್ಯಾಯಾಲಯ ಪ್ರೇಕ್ಷಕನಾಗಿ ಉಳಿಯಬಾರದು. ಆಗ ನ್ಯಾಯಾಲಯ ಜನರ ಪರವಾಗಿ ನಿಲ್ಲಬೇಕು ಎಂದು ಉಲ್ಲೇಖಿಸಿದ್ದರು. ರಮಣ ಅವರು ತಮ್ಮ ಅವಧಿಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಅವರ ಆಜ್ಞೆ ಮೇರೆಗೆ ಕೆಲವು ಪ್ರಮುಖ ಆದೇಶಗಳನ್ನೂ ಹೊರಡಿಸಲಾಯಿತು.

ನ್ಯಾಯಮೂರ್ತಿ ಎನ್‌ವಿ ರಮಣ ಅವರು ಏಪ್ರಿಲ್ 24, 2021 ರಂದು 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಂದಿನಿಂದ ಒಬ್ಬ ಮುಖ್ಯ ನ್ಯಾಯಮೂರ್ತಿಯಾಗಿ ತಾವು ಮಾಡಬೇಕಾದ ಕಾರ್ಯಗಳ ಬಗ್ಗೆ ಸ್ಪಷ್ಟವಾದ ನಿಲುವಿನೊಂದಿಗೆ ಹೆಜ್ಜೆಗಳನ್ನು ಇಟ್ಟು, ಸೇವೆ ಸಲ್ಲಿಸಿದ್ದಾರೆ. ಆ ಅವಧಿಯಲ್ಲಿ ಹಲವು ಸುಧಾರಣೆಗಳನ್ನು, ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನ್ಯಾಯಮೂರ್ತಿ ಎನ್‌ವಿ ರಮಣ ಅವರು ಅಧಿಕಾರ ವಹಿಸಿಕೊಂಡ ವಾರಗಳಲ್ಲಿ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲೇ ಎಲ್ಲರಿಗೂ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದರು.

ಪ್ರಧಾನಿ, ವಿರೋಧ ಪಕ್ಷದ ನಾಯಕರು ಮತ್ತು ಸಿಜೆಐ ಸದಸ್ಯರಾಗಿದ್ದ ಸಮಿತಿಯ ಸಭೆಯಲ್ಲಿ, ಸಿಬಿಐ ಮುಖ್ಯಸ್ಥರ ಆಯ್ಕೆಗೆ ಪ್ರತಿಭೆಯೇ ಮಾನದಂಡವಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪುನರುಚ್ಚರಿಸಿದ್ದರು.

ನ್ಯಾಯಾಂಗದಲ್ಲಿ ಪ್ರಮುಖ ಸುಧಾರಣೆ ತಂದ ನ್ಯಾ. ಎನ್‌ವಿ ರಮಣ: ನ್ಯಾಯಮೂರ್ತಿ ಎನ್‌ವಿ ರಮಣ ಅವರು ಸಿಜೆಐ ಆಗಿದ್ದ 16 ತಿಂಗಳ ಅಧಿಕಾರಾವಧಿಯಲ್ಲಿ ಅನೇಕ ಪ್ರಮುಖ ಸುಧಾರಣೆಗಳನ್ನು ತಂದರು. ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನವನ್ನು ತಲುಪಿದ ಎರಡನೇ ತೆಲುಗು ವ್ಯಕ್ತಿಯಾಗಿ ಇತಿಹಾಸ ಪುಸ್ತಕಗಳಲ್ಲಿ ಸ್ಥಾನ ಪಡೆದಿರುವ ನ್ಯಾಯಮೂರ್ತಿ ಎನ್ ವಿ ರಮಣ ಅವರು ಜನರ ನಿರೀಕ್ಷೆಗಳನ್ನು ಪೂರೈಸಲು ಅವಿರತವಾಗಿ ಶ್ರಮಿಸಿದ್ದಾರೆ.

ಕಾನೂನು ವ್ಯವಸ್ಥೆಯಲ್ಲಿ ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಲು ಅಗತ್ಯವಾದ ಮಾರ್ಗಗಳನ್ನು ಸಹ ಸೂಚಿಸಿದ್ದಾರೆ. ಅವರು ತಮ್ಮ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಮೂಲಕ ಭವಿಷ್ಯದ ಸಿಜೆಐಗಳಿಗೆ ಮಾರ್ಗದರ್ಶಿಯಾಗಿದ್ದಾರೆ. ವ್ಯವಸ್ಥೆಯಲ್ಲಿದ್ದ ಸಮಸ್ಯೆಗಳನ್ನು ಸಂದರ್ಭ ಬಂದಾಗೆಲ್ಲಾ ತಮ್ಮ ಭಾಷಣ ಮತ್ತು ಕಾಮೆಂಟ್‌ಗಳ ಮೂಲಕ ಸ್ಪಷ್ಟವಾಗಿ ಬಹಿರಂಗಪಡಿಸಿ, ಎಚ್ಚರಿಸಿದ್ದಾರೆ.

ಇತಿಹಾಸ ನಿರ್ಮಿಸಿದ ಸಿಜೆಐ ಎನ್​ ವಿ ರಮಣ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸೌಲಭ್ಯಗಳ ಕೊರತೆ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಖಾಲಿ ಹುದ್ದೆಗಳು ಮತ್ತು ಮೂಲಸೌಕರ್ಯಗಳ ಸೃಷ್ಟಿಯನ್ನು ತ್ವರಿತವಾಗಿ ತೆಗೆದುಕೊಳ್ಳದಿದ್ದರೆ ಸಂವಿಧಾನದಲ್ಲಿ ಉಲ್ಲೇಖಿಸಲಾದ ಎಲ್ಲ ಜನರಿಗೆ ನ್ಯಾಯ ಎಂಬುದು ಕೇವಲ ಪುರಾಣವಾಗಿ ಉಳಿಯುತ್ತದೆ ಎಂದು ನ್ಯಾಯಮೂರ್ತಿ ಎನ್‌ವಿ ರಮಣ ಬಲವಾಗಿ ನಂಬಿದ್ದರು.

ಹೀಗಾಗಿಯೇ ಕಳೆದ ಆಗಸ್ಟ್‌ನಲ್ಲಿ ಒಂದೇ ಬಾರಿಗೆ 9 ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ನಡೆದಿದೆ. ಅವರಲ್ಲಿ ಮೂವರು ಮಹಿಳೆಯರು. ಈ ನೇಮಕಾತಿಯೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ನಾಲ್ಕಕ್ಕೆ ತಲುಪಿದೆ. ಇದು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲೇ ಅತ್ಯಧಿಕ ಸಂಖ್ಯೆಯಾಗಿದೆ.

ಎಲ್ಲವೂ ಸುಸೂತ್ರವಾಗಿ ನಡೆದರೆ ಅವರಲ್ಲಿ ನ್ಯಾಯಮೂರ್ತಿ ನಾಗರತ್ನ ಅವರು 2027ರಲ್ಲಿ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ನ್ಯಾಯಮೂರ್ತಿ ಎನ್‌ವಿ ರಮಣ ಅವರು 12 ತಿಂಗಳ ಕಡಿಮೆ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿಯಾದ 11 ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಿದವರು. ಸುಪ್ರೀಂ ಕೋರ್ಟ್‌ನಲ್ಲಿ ಈ ದಾಖಲೆಯನ್ನು ಬೇರೆ ಯಾರೂ ಸಾಧಿಸಲು ಸಾಧ್ಯವಿರಲಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ.

ಅಲ್ಲದೆ, ದೇಶದ ವಿವಿಧ ಹೈಕೋರ್ಟ್‌ಗಳಿಗೆ 224 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ ಪೂರ್ಣಗೊಂಡಿದೆ. 15 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ. ಇಲ್ಲಿಯವರೆಗೆ ಹೈಕೋರ್ಟ್‌ಗಳಿಗೆ ನೇಮಕಗೊಂಡಿರುವ ನ್ಯಾಯಮೂರ್ತಿಗಳಲ್ಲಿ ಶೇ.20ರಷ್ಟು ಮಹಿಳೆಯರೇ ಇದ್ದಾರೆ. ಈ ಮಟ್ಟದ ನೇಮಕಾತಿಗಳು ಹಿಂದೆಂದೂ ನಡೆದಿರಲಿಲ್ಲ. ಹುದ್ದೆಗಳ ಭರ್ತಿಯಲ್ಲಿ ಎಲ್ಲಾ ಪ್ರದೇಶಗಳು, ಎಲ್ಲಾ ಸಮುದಾಯಗಳು, ಎಲ್ಲಾ ಧರ್ಮಗಳು, ಮಹಿಳೆಯರು ಮತ್ತು ದುರ್ಬಲ ವರ್ಗದವರಿಗೆ ಪ್ರಾತಿನಿಧ್ಯ ನೀಡಿ ಸಾಮಾಜಿಕ ಸಮತೋಲನಕ್ಕೆ ಆದ್ಯತೆ ನೀಡಿದ್ದಾರೆ ಸಿಜೆಐ ಎನ್​ ವಿ ರಮಣ.

ನೇರ ಮಾತುಗಳಿಂದಲೇ ಗಮನ ಸೆಳೆದ ಸಿಜೆಐ: ಒಮ್ಮೆ ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾಡಿದ ಹೇಳಿಕೆಗಳು ದೇಶದಾದ್ಯಂತ ಎಲ್ಲರ ಗಮನ ಸೆಳೆದಿದ್ದವು. ಸಂಸತ್ತಿನಲ್ಲಿ ಕಾನೂನು ರಚಿಸುವಾಗ ಮಾಡಬೇಕಾದ ಕಾಳಜಿ ಮತ್ತು ಚರ್ಚೆಗಳ ಕೊರತೆಯಿಂದಾಗಿ ದೋಷಯುಕ್ತ ಶಾಸನಗಳು ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತವೆ ಎಂದು ಅವರು ನೇರವಾಗಿ ಹೇಳಿದ್ದರು. ಇದೇ ರೀತಿ ಪ್ರಧಾನಿ ಭಾಗವಹಿಸಿದ್ದ ಇನ್ನೊಂದು ಕಾರ್ಯಕ್ರಮದಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ನಿಯಮಾನುಸಾರ ಕಾರ್ಯ ನಿರ್ವಹಿಸಿದರೆ ನ್ಯಾಯಾಲಯಗಳ ಕಾರ್ಯಭಾರ ಗಣನೀಯವಾಗಿ ತಗ್ಗಲಿದೆ ಎಂದಿದ್ದರು.

ಜನಪರ ನ್ಯಾಯಮೂರ್ತಿ: ಎನ್‌ವಿ ರಮಣ ಅವರು ಹಿಂದಿನ ಸಿಜೆಐಗಳಿಗಿಂತ ಹೆಚ್ಚು ವ್ಯಾಪಕವಾಗಿ ಸುಪ್ರೀಂ ಕೋರ್ಟ್‌ನ ಬಾಗಿಲುಗಳನ್ನು ಜನರಿಗೆ ತೆರೆದಿದ್ದಾರೆ. ಪತ್ರ ವ್ಯವಹಾರದ ಮೂಲಕ ಜನರ ಮನಸ್ಸನ್ನು ಅರಿಯಲು ಪ್ರಯತ್ನಿಸಿದ್ದಾರೆ. ಕಾಲಕಾಲಕ್ಕೆ ಬಂದ ಪತ್ರಗಳಿಗೆ ಸ್ಪಂದಿಸುವ ಮೂಲಕ ಸುಪ್ರಿಂಕೋರ್ಟ್ ಅನ್ನು ಸಾಮಾನ್ಯ ಜನರಿಗೆ ಹತ್ತಿರವಾಗಿಸುವ ಪ್ರಯತ್ನ ಮಾಡಿದ್ದಾರೆ. ಹಕ್ಕುಗಳು ಮತ್ತು ಸಂವಿಧಾನದ ಬಗ್ಗೆ ಜನರಿಗೆ ಅರಿವು ಮೂಡಿಸಿದರೆ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಜನ ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ನ್ಯಾಯಾಧೀಶರ ಪ್ರಮಾಣ ವಚನದ ನೇರ ಪ್ರಸಾರ, ಪತ್ರಕರ್ತರಿಗೆ ನ್ಯಾಯಾಲಯಗಳಲ್ಲಿ ದೈನಂದಿನ ವಿಚಾರಣೆ ಲಭ್ಯವಾಗುವಂತೆ ವಿಶೇಷ ಆ್ಯಪ್‌ ಸ್ಥಾಪಿಸುವುದು, ವಕೀಲರಿಗೆ ಹೊಸದಾಗಿ ನಿರ್ಮಿಸಲಾದ ಚೇಂಬರ್‌ಗಳನ್ನು ಹಂಚಿಕೆ ಮಾಡುವುದು ಮತ್ತು ವಕೀಲರ ಸಂಘದ ಸದಸ್ಯರ ಬಳಕೆಗೆ ಸುಪ್ರೀಂ ಕೋರ್ಟ್ ಸಭಾಂಗಣ ಲಭ್ಯವಾಗುವಂತೆ ಮಾಡುವುದು. ಈ ಕ್ರಮಗಳ ಮೂಲಕ, ವ್ಯವಸ್ಥೆಯನ್ನು ಎಲ್ಲರಿಗೂ ಹತ್ತಿರ ತರಲು ಅವರು ಪ್ರಯತ್ನಿಸಿದ್ದಾರೆ.

ಕಾಯಕವೇ ಕೈಲಾಸವೆಂದು ನಂಬಿದ್ದರು: ಕೊರೊನಾ ಪ್ರಭಾವದಿಂದ ಹಲವು ವರ್ಷಗಳಿಂದ ನ್ಯಾಯಾಲಯಗಳು ಭೌತಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೂ ನ್ಯಾಯಮೂರ್ತಿ ರಮಣ ಹಿಂದೆ ಸರಿಯಲಿಲ್ಲ. ತಂತ್ರಜ್ಞಾನವನ್ನು ಅಳವಡಿಸಿಕೊಂಡು ವ್ಯವಸ್ಥೆಯನ್ನು ಮುನ್ನಡೆಸಿದರು. ಸಾರ್ವಜನಿಕ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಮುಖ್ಯ ಎಂದು ನಂಬಿರುವ ನ್ಯಾಯಮೂರ್ತಿ ಎನ್.ವಿ.ರಮಣ ಸುಪ್ರೀಂ ಕೋರ್ಟ್ ಕಲಾಪಗಳ ನೇರ ಪ್ರಸಾರಕ್ಕಾಗಿ ಒಮ್ಮತವನ್ನು ಸಾಧಿಸಲು ಸಹ ಶ್ರಮಿಸಿದ್ದಾರೆ.

ಇವರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ರೂ.310 ಕೋಟಿ ವೆಚ್ಚದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜನರು ಮತ್ತು ನ್ಯಾಯಾಂಗದ ನಡುವಿನ ಬಾಂಧವ್ಯವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಎನ್​ ವಿ ರಮಣ ಅವರು ಇಂದು ತಮ್ಮ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಹೊಂದುತ್ತಿದ್ದಾರೆ.

ಇದನ್ನೂ ಓದಿ: ಇಂದು ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ.. ಸುಪ್ರೀಂಕೊರ್ಟ್​ನಿಂದ ಕಲಾಪ ನೇರಪ್ರಸಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.