ETV Bharat / bharat

ಸೋರಿಕೆಯಾದ ಗುಜರಾತ್​ ಪ್ರಶ್ನೆಪತ್ರಿಕೆ ​ಹೈದರಾಬಾದಲ್ಲಿ ಮುದ್ರಣ: 12 ದಿನ ಪೊಲೀಸ್​ ಕಸ್ಟಡಿಗೆ ಆರೋಪಿಗಳು

ಗುಜರಾತ್​ನಲ್ಲಿ ಜೂನಿಯರ್ ಕ್ಲರ್ಕ್ ಪರೀಕ್ಷೆ ಅಕ್ರಮ - ಜೂನಿಯರ್ ಕ್ಲರ್ಕ್ ಪರೀಕ್ಷಾ ಪತ್ರಿಕೆ ಸೋರಿಕೆ - ಹೈದರಾಬಾದ್​ನಲ್ಲಿ ಆರೋಪಿಯ ಬಂಧನ- ಗುಜರಾತ್​ ಎಟಿಎಸ್​ ಪೊಲೀಸರಿಂದ ಆರೋಪಿ ಅರೆಸ್ಟ್​

junior-clerk-exam
ಜೂನಿಯರ್ ಕ್ಲರ್ಕ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ
author img

By

Published : Jan 30, 2023, 3:21 PM IST

Updated : Jan 30, 2023, 7:21 PM IST

ಗಾಂಧಿನಗರ: ಜೂನಿಯರ್ ಕ್ಲರ್ಕ್ ಹುದ್ದೆಗಳಿಗೆ ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿ ನಡೆಸಬೇಕಿದ್ದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ 15 ಜನರನ್ನು ಬಂಧಿಸಿದ್ದು, 16 ಆರೋಪಿಯನ್ನು ಹೈದರಾಬಾದ್​ನಿಂದ ಇಂದು ಬಂಧಿಸಿ ಗುಜರಾತ್​ಗೆ ಕರೆದೊಯ್ಯಲಾಗಿದೆ.

ಆರೋಪಿಗಳ ಬಂಧನಕ್ಕಾಗಿ ರೂಪಿಸಲಾಗಿದ್ದ ಎಟಿಎಸ್​ ಪೊಲೀಸ್​ ತಂಡ ಇಂದು ಹೈದರಾಬಾದ್​ನಲ್ಲಿ ದಾಳಿ ನಡೆಸಿ, ಜೀತ್ ನಾಯಕ್​ ಎಂಬಾತನನ್ನು ಬಂಧಿಸಿತು. ಬಳಿಕ ವಿಚಾರಣೆಗಾಗಿ ಆರೋಪಿಯನ್ನು ಗುಜರಾರ್​ಗೆ ಕರೆದೊಯ್ಯಲಾಗಿದೆ.

ಲೀಕ್​ ಆದ ಪ್ರಶ್ನೆಪತ್ರಿಕೆ ಹೈದ್ರಾಬಾದ್​ನಲ್ಲಿ ಮುದ್ರಣ: ಗುಜರಾತ್​ ಜೂನಿಯರ್​ ಕ್ಲರ್ಕ್​ ಪರೀಕ್ಷೆಗೂ ಮತ್ತು ಹೈದ್ರಾಬಾದ್​ಗೂ ಲಿಂಕ್​ ಇದೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲಿ ಸೋರಿಕೆಯಾದ ಪತ್ರಿಕೆ ಹೈದರಾಬಾದ್​ನಲ್ಲಿ ಮುದ್ರಣಗೊಂಡು ಹಂಚಿಕೆಯಾಗಿದೆ. ಮುಖ್ಯ ಆರೋಪಿ ಪ್ರದೀಪ್ ನಾಯಕ್​, ಕೇತನ್​ ಬರೋಟ ಹೈದರಾಬಾದ್​ನಲ್ಲಿ ಪ್ರಿಂಟಿಂಗ್​ ಪ್ರೆಸ್​ ಉದ್ಯೋಗಿಗಳಾದ ಜೀತ್​ ನಾಯಕ್, ಭಾಸ್ಕರ್​ ಚೌಧರಿ, ರಿದ್ದಿ ಚೌಧರಿ ಜೊತೆಗೆ ನಂಟು ಬೆಳೆಸಿಕೊಂಡಿದ್ದರು.

ಭಾರೀ ಬೇಡಿಕೆ ಇರುವ ಜೂನಿಯರ್​ ಕ್ಲರ್ಕ್​ ಪರೀಕ್ಷೆಯ ವೇಳೆ ಹಣ ಮಾಡಲು ಸಂಚು ರೂಪಿಸಿದ್ದ ಆರೋಪಿಗಳು, ಸೋರಿಕೆಯಾದ ಪತ್ರಿಕೆಯನ್ನು ಹೈದರಾಬಾದ್​ನಲ್ಲಿ ಮುದ್ರಣ ಮಾಡಿಸಿದ್ದಾರೆ. ಇದನ್ನು ಬೆನ್ನತ್ತಿದ ಪೊಲೀಸ್​ ತಂಡ ಭಾನುವಾರವೇ ನಗರಕ್ಕೆ ಬಂದಿಳಿದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕೆಎಲ್​ ಹೈಟೆಕ್​ ಪ್ರಿಂಟಿಂಗ್​ ಲಿಮಿಟೆಡ್​ ಸಂಸ್ಥೆಯ ಮೇಲೆ ದಾಳಿ ಮಾಡಿದೆ. ಆರೋಪಿತ ಜೀತ್​ ನಾಯಕ್​ ಸೇರಿ ಮಾಲೀಕ, ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಹೈದರಾಬಾದ್​ನಲ್ಲಿ ಪ್ರಶ್ನೆ ಪತ್ರಿಕೆಗಳು ತಯಾರಾಗುತ್ತಿವೆ ಎಂಬ ಅಂಶ ಹೊರಬಿದ್ದಿದ್ದು ಹೇಗೆ? ಪ್ರಮುಖ ಆರೋಪಿಗಳ ಜತೆಗಿನ ಸಂಬಂಧ ಹಾಗೂ ಸೇವಾ ಆಯೋಗದ ನೌಕರರ ಕೈವಾಡದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಜುಬ್ಲಿ ಹಿಲ್ಸ್‌ನಲ್ಲಿರುವ ಕೆಎಲ್ ಪ್ರಿಂಟಿಂಗ್ ಪ್ರೆಸ್‌ನ ಕೇಂದ್ರ ಕಚೇರಿಯನ್ನೂ ಪೊಲೀಸರು ಜಾಲಾಡಿದ್ದಾರೆ ಎಂದು ತಿಳಿದುಬಂದಿದೆ.

15 ಆರೋಪಿಗಳು 12 ದಿನ ಪೊಲೀಸ್​ ಕಸ್ಟಡಿಗೆ: ಜೂನಿಯರ್​ ಕ್ಲರ್ಕ್​ ಹುದ್ದೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ 15 ಆರೋಪಿಗಳನ್ನು 12 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಎಲ್ಲ ಆರೋಪಿಗಳನ್ನು ಇಂದು ವಡೋದರಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ವಿಚಾರಣೆಗಾಗಿ 14 ದಿನ ತಮ್ಮ ವಶಕ್ಕೆ ನೀಡಲು ಎಟಿಎಸ್​ ಪೊಲೀಸರು ಮನವಿ ಮಾಡಿದರು. ಕೋರ್ಟ್​ 12 ದಿನ ಪೊಲೀಸ್​ ಸುಪರ್ದಿಗೆ ನೀಡಿದೆ.

ನಿನ್ನೆ ನಡೆಯಬೇಕಿದ್ದ ಪರೀಕ್ಷೆ: ರಾಜ್ಯಾದ್ಯಂತ 2,995 ಕೇಂದ್ರಗಳಲ್ಲಿ 1,150 ಹುದ್ದೆಗಳಿಗೆ ನಿನ್ನೆ ನಡೆಯಬೇಕಿದ್ದ ಜೂನಿಯರ್ ಕ್ಲರ್ಕ್‌ ಪರೀಕ್ಷೆಗೆ 9,53,000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 70,000 ಪರೀಕ್ಷಾ ಸಿಬ್ಬಂದಿ ಮತ್ತು 7,500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಸುದ್ದಿ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅಂದರೆ ಪರೀಕ್ಷೆ ಆರಂಭಕ್ಕೂ ಒಂದು ಗಂಟೆ ಮೊದಲು ರದ್ದುಗೊಳಿಸಿ ಆದೇಶಿಸಲಾಗಿದೆ.

ಪರೀಕ್ಷೆ ಅಕ್ರಮ ಎಸಗಿದ 15 ಮಂದಿ ವಶಕ್ಕೆ: ಇನ್ನು, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದಡಿ ನಿನ್ನೆ 15 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಪೈಕಿ ಕೆಲವರು ಬರೋಡಾದವರಾಗಿದ್ದು, ಪ್ರಮುಖ ಆರೋಪಿ ಒಡಿಶಾ ಸ್ಪರ್ಧಾತ್ಮಕ ಪರೀಕ್ಷೆಯ ಪಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಈ ದಂಧೆಯಲ್ಲಿ ಇನ್ನಷ್ಟು ಶಂಕಿತರು ಭಾಗಿಯಾಗಿದ್ದಾರೆ ಎಂಬ ಅನುಮಾನದ ಮೇರೆಗೆ ಅವರ ಹೆಡೆಮುರಿ ಕಟ್ಟಲು 5 ಪೊಲೀಸ್ ತಂಡಗಳನ್ನು ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ದೆಹಲಿಗೆ ಕಳುಹಿಸಲಾಗಿತ್ತು. ಇಂದು ತೆಲಂಗಾಣದಲ್ಲಿ ಶಂಕಿತ ಆರೋಪಿ ಜೀತ್​ ನಾಯಕ್​ ಸಿಕ್ಕಿ ಹಾಕಿಕೊಂಡಿದ್ದಾನೆ.

ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ: 1 ಗಂಟೆ ಮೊದಲು ಜೂನಿಯರ್ ಕ್ಲರ್ಕ್ ಪರೀಕ್ಷೆ ರದ್ದು, ಪರೀಕ್ಷಾರ್ಥಿಗಳಿಗೆ ನಿರಾಶೆ

Last Updated : Jan 30, 2023, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.