ETV Bharat / bharat

ಜುಲೈ ಕಳೆದಿದೆ, ವ್ಯಾಕ್ಸಿನ್ ಕೊರತೆ ಮಾತ್ರ ನೀಗಿಲ್ಲ : ನಮೋ ಸರ್ಕಾರದ ವಿರುದ್ಧ ಮತ್ತೆ ರಾಹುಲ್ ಕಿಡಿ - ಜುಲೈ ಕಳೆದಿದೆ ಲಸಿಕೆ ಸಿಗುತ್ತಿಲ್ಲ

ದೇಶದಲ್ಲಿ ಎಲ್ಲರಿಗೂ ಕೋವಿಡ್ ವ್ಯಾಕ್ಸಿನ್​ ಸಿಗುತ್ತಿಲ್ಲ, ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ಸಿಗುತ್ತಿದೆ ಅಂತಾ ಹೇಳಿದೆ. ಆದರೆ, ಜುಲೈ ಕಳೆದರೂ ವ್ಯಾಕ್ಸಿನ್ ಕೊರತೆ ನೀಗಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ರಾಹುಲ್‌ ಗಾಂಧಿ..

ರಾಹುಲ್
ರಾಹುಲ್
author img

By

Published : Aug 1, 2021, 3:39 PM IST

ನವದೆಹಲಿ : ಕೇಂದ್ರ ಸರ್ಕಾರ ಲಸಿಕೆ ಕೊರತೆಯಿಲ್ಲ. ವ್ಯಾಕ್ಸಿನೇಷನ್​ ಬಿರುಸಿನಿಂದ ಸಾಗುತ್ತಿದೆ ಎಂದು ಎಷ್ಟೇ ಹೇಳುತ್ತಿದ್ದರೂ, ಕಾಂಗ್ರೆಸ್ ನಾಯಕ ರಾಹುಲ್​ಗಾಂಧಿ ಮಾತ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜುಲೈ ಕಳೆದಿದೆ, ಲಸಿಕೆ ಕೊರತೆ ಮಾತ್ರ ನೀಗಿಲ್ಲ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಜುಲೈ 2ರಂದು ಕೂಡ ಅವರು, ಜುಲೈ ಬಂದಿದೆ, ಲಸಿಕೆ ಬಂದಿಲ್ಲ ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದರು.

ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ರಾಹುಲ್​ಗಾಂಧಿ, ಜುಲೈ 28ರಂದು ಕೋವಿಡ್ ವ್ಯಾಕ್ಸಿನ್ ಪಡೆದಿದ್ದರಿಂದ ಜುಲೈ 29, 30ರಂದು ಮುಂಗಾರು ಅಧಿವೇಶನಕ್ಕೆ ಹಾಜರಾಗಿರಲಿಲ್ಲ. ರಾಹುಲ್​ಗಾಂಧಿಗೆ ಏಪ್ರಿಲ್​ 20ರಂದು ಕೋವಿಡ್ ದೃಢಪಟ್ಟಿದ್ದರಿಂದ ಕ್ವಾರಂಟೈನ್​ ಆಗಿದ್ದರು. ಜೂನ್ 17ರಂದು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಕೋವಿಡ್ ವ್ಯಾಕ್ಸಿನ್ ಪಡೆದಿದ್ದರು.

ಇದನ್ನೂ ಓದಿ: ಪೆಗಾಸಸ್‌ ಗೂಢಚರ್ಯೆ: ಗುರುವಾರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರಿಂಕೋರ್ಟ್

ವ್ಯಾಕ್ಸಿನ್​ ಕುರಿತ ಟೀಕೆ ವಿಚಾರವಾಗಿ ಮಾತನಾಡಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರಾ, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಾಕ್ಸಿನ್​ ಪಡೆದಿದ್ದಾರೋ, ಇಲ್ಲವೋ? ಪಡೆದಿದ್ದರೆ ಯಾವಾಗ ಪಡೆದುಕೊಂಡರು ಅನ್ನೋದನ್ನ ಬಹಿರಂಗಪಡಿಸಬೇಕು. ಇದು ನನ್ನೊಬ್ಬನ ಪ್ರಶ್ನೆಯಲ್ಲ, ಇಡೀ ದೇಶದ ಪ್ರಶ್ನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.