ETV Bharat / bharat

ನಿಖಿತಾ ತೋಮರ್​ ಶೂಟೌಟ್​ ಪ್ರಕರಣ: ಆರೋಪಿಗಳಿಗೆ ಶಿಕ್ಷೆ ನೀಡುವ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಜಡ್ಜ್​ ವರ್ಗಾವಣೆ! - ನಿಖಿತಾ ತೋಮರ್​ ಪ್ರಕರಣ

ನಿಖಿತಾ ತೋಮರ್​ ಶೂಟೌಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ನೀಡುವ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಜಡ್ಜ್​ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

nikita tomar case judge transfer  nikita tomar verdict news  nikita tomar case judge transfer news,  nikita tomar case news  ನಿಖಿತಾ ತೋಮರ್​ ಪ್ರಕರಣದ ನ್ಯಾಯಾಧೀಶ ವರ್ಗಾವಣೆ  ನಿಖಿತಾ ತೋಮರ್​ ಪ್ರಕರಣದ ನ್ಯಾಯಾಧೀಶ ವರ್ಗಾವಣೆ ಸುದ್ದಿ  ನಿಖಿತಾ ತೋಮರ್​ ಪ್ರಕರಣ  ನಿಖಿತಾ ತೋಮರ್​ ಪ್ರಕರಣ ಸುದ್ದಿ
ಆರೋಪಿಗಳಿಗೆ ಶಿಕ್ಷೆ ನೀಡುವ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಜಡ್ಜ್​ ವರ್ಗಾವಣೆ
author img

By

Published : Mar 26, 2021, 10:24 AM IST

ಫರೀದಾಬಾದ್​: ನಿಖಿತಾ ಹತ್ಯಾಕಾಂಡ ನಡೆದು ಸರಿ ಸುಮಾರು ಐದು ತಿಂಗಳು ಕಳೆದಿವೆ. ಇಂದು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಬೇಕಾಗಿತ್ತು. ಆದ್ರೆ ಶಿಕ್ಷೆ ಪ್ರಕಟಿಸುವ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.

ಗುಂಡು ಹಾರಿಸಿ ಕೊಲೆ

26 ಅಕ್ಟೋಬರ್​ 2020ರಂದು ನಿಖಿತಾ ತೋಮರ್​ ಮೇಲೆ ಆರೋಪಿಗಳು ನಡು ರಸ್ತೆಯಲ್ಲೇ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನ

ತನಿಖೆ ಕೈಗೊಂಡ ಫರೀದಾಬಾದ್​ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಎಸ್​ಐಟಿಗೆ ವರ್ಗಾಹಿಸಲಾಗಿತ್ತು.

ಜಾರ್ಜ್​ಶೀಟ್ ಸಲ್ಲಿಕೆ

ನಡುರಸ್ತೆಯಲ್ಲೇ ಯುವತಿ ಮೇಲೆ ಶೂಟೌಟ್ ನಡೆಸಿದ್ದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್​​ಐಟಿ) ಪ್ರಕರಣ ನಡೆದು 11 ದಿನಗಳ ಬಳಿಕ ನ್ಯಾಯಾಲಯಕ್ಕೆ ಚಾರ್ಜ್​ ಶೀಟ್ ಸಲ್ಲಿಸಿದ್ದರು.

ನಿಖಿತಾ ತೋಮರ್​ ಹತ್ಯೆ ಮಾಡಿದ ಆರೋಪಿಗಳಾದ ತೌಸಿಫ್, ರೆಹಾನ್ ಮತ್ತು ಅಜ್ರು ಎಂಬುವವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದೆ. ಆರೋಪಿಗಳ ವಿರುದ್ಧ ಎಸ್​ಐಟಿ 25 ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು.

ಬರೋಬ್ಬರಿ ಐದು ತಿಂಗಳು

ಇಂದಿಗೆ ನಿಖಿತಾ ಕೊಲೆಯಾಗಿ ಬರೋಬ್ಬರಿ ಐದು ತಿಂಗಳು ಕಳೆದಿವೆ. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಇಂದು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲು ಸಜ್ಜಾಗಿತ್ತು. ಆದ್ರೆ ಈ ತೀರ್ಪು ಹೊರ ಬಿಳುವ ಮೊದಲೇ ಶಾಕಿಂಗ್​ ಸುದ್ದಿವೊಂದು ಹೊರ ಬಂದಿದೆ.

ಜಡ್ಜ್​ ವರ್ಗಾವಣೆ!

ಬರೋಬ್ಬರಿ 5 ತಿಂಗಳ ಬಳಿಕ ಈ ಹತ್ಯಾಕಾಂಡದ ತೀರ್ಪು ಇಂದು ಹೊರ ಬಿಳಬೇಕಾಗಿತ್ತು. ಆದ್ರೆ ಈ ಪ್ರಕರಣದ ತೀರ್ಪು ಹೊರಡಿಸಬೇಕಾಗಿದ್ದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.

ಫರೀದಾಬಾದ್​ದಿಂದ ರೆವಾಡಿಗೆ ವರ್ಗಾವಣೆ...

ನ್ಯಾ. ಸರ್ತಾಜ್​ ಬಾಂಸವಾನ್​ರನ್ನು ಫರೀದಾಬಾದ್​ದಿಂದ ರೆವಾಡಿಗೆ ವರ್ಗಾವಣೆ ಮಾಡಿ ಹೈಕೋರ್ಟ್​ ಆದೇಶ ಹೊರಡಿಸಿದೆ.

18 ಗಂಟೆಗಳ ಬಳಿಕ ಹೊರಬಿಳಲಿದೆ ತೀರ್ಪು

ನ್ಯಾಯಾಧೀಶರು ವರ್ಗಾವಣೆ ಮಾಡಿದ್ರೂ ಸಹ ಈ ಪ್ರಕರಣದ ತೀರ್ಪು ಇನ್ನು 18 ಗಂಟೆಗಳ ಬಳಿಕ ಹೊರ ಬೀಳುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.