ETV Bharat / bharat

ಕೋವಿಡ್​ನಿಂದ ಚೇತರಿಸಿಕೊಂಡ ಜೆ.ಪಿ.ನಡ್ಡಾ: ಏಮ್ಸ್​ ನಿರ್ದೇಶಕರಿಗೆ ಧನ್ಯವಾದ

author img

By

Published : Jan 1, 2021, 7:36 PM IST

ಮಹಾಮಾರಿ ಕೊರೊನಾ ವೈರಸ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

JP Nadda
JP Nadda

ನವದೆಹಲಿ: ಕೊರೊನಾ ವೈರಸ್​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಏಮ್ಸ್​ ನಿರ್ದೇಶಕ ರಂದೀಪ್​ ಗುಲೇರಿಯಾ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ನಡ್ಡಾ ಹಾಗೂ ಅವರ ಕುಟುಂಬ ಕೊರೊನಾ ವೈರಸ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ಟಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ಗುಣಮುಖರಾಗುವಂತೆ ಶುಭ ಹಾರೈಸಿರುವ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.

  • I thank everyone for their wishes, prayers and moral support during my illness. My family members and I have now fully recovered from COVID-19. We whole heartedly thank Dr Randeep Guleria,Dir AIIMS and his team for their dedication & continued support in these challenging times. pic.twitter.com/RPW88DEq5n

    — Jagat Prakash Nadda (@JPNadda) January 1, 2021 " class="align-text-top noRightClick twitterSection" data=" ">

ಓದಿ: ದೇಶದಲ್ಲಿ 'ಕೋವಿಶೀಲ್ಡ್​' ಲಸಿಕೆಯ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌!

'ಅನಾರೋಗ್ಯದ ಸಮಯದಲ್ಲಿ ನನಗೆ ಶುಭಾಶಯ, ಚೇತರಿಸಿಕೊಳ್ಳಲು ಪ್ರಾರ್ಥನೆ ಹಾಗೂ ನೈತಿಕ ಬೆಂಬಲ ಸೂಚಿಸಿರುವ ಎಲ್ಲರಿಗೂ ಧನ್ಯವಾದಗಳು. ನನ್ನ ಕುಟುಂಬದ ಸದಸ್ಯರು ಮತ್ತು ನಾನು ಈಗ ಕೋವಿಡ್​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ಡಾ. ರಣದೀಪ್​ ಗುಲೇರಿಯಾ ಹಾಗೂ ಅವರ ತಂಡಕ್ಕೆ ನಾನು ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ' ಎಂದಿದ್ದಾರೆ.

ಡಿಸೆಂಬರ್​​ 13ರಂದು ನಡ್ಡಾ ಕೋವಿಡ್ ಸೋಂಕಿಗೊಳಗಾಗಿದ್ದರು. ಇದಕ್ಕೂ ಮೊದಲು ಅವರು ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದರು ಎಂಬುದು ವಿಶೇಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.