ETV Bharat / bharat

ಕುಸಿತ ವಲಯದಲ್ಲಿ ಜೋಶಿಮಠ; 600 ಕಟ್ಟಡಗಳಿಗೆ ಹಾನಿ, ಸ್ಫೋಟಕ ಬಳಸದೆ ತೆರವಿಗೆ ಕಾರ್ಯಾಚರಣೆ

ಜೋಶಿಮಠ ಪ್ರದೇಶದಲ್ಲಿ ಭೂಕುಸಿತದಿಂದ 600 ಕಟ್ಟಡಗಳಿಗೆ ಹಾನಿ- ಅದರಲ್ಲಿ 15 ರಿಂದ 20 ಕಟ್ಟಡಗಳು ತಕ್ಷಣ ಕುಸಿದು ಬೀಳುವ ಹಂತದಲ್ಲಿವೆ- ಸ್ಫೋಟಕ ಬಳಸದೆ ಕಟ್ಟಡಗಳ ತೆರವು- ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯಿಂದ ಕಾರ್ಯಾಚರಣೆ

Joshimath under Subsidy Zone... the demolition of buildings with non-explosive technology

author img

By

Published : Jan 11, 2023, 1:54 PM IST

ಹೈದರಾಬಾದ್: ಜೋಶಿಮಠ ಪ್ರದೇಶದಲ್ಲಿ ಭೂಕುಸಿತ ಉಂಟಾಗುತ್ತಿರುವ ಬಗ್ಗೆ ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್‌ಐ) ನಿರ್ದೇಶಕ ಡಾ. ರಾಮಂಚರ್ಲಾ ಪ್ರದೀಪ್ ಕುಮಾರ್ ಮಾತನಾಡಿ, ಉತ್ತರಾಖಂಡದ ಜೋಶಿಮಠ ಪ್ರದೇಶವು ಸಬ್‌ಸಿಡೆನ್ಸ್ ಝೋನ್‌ಗೆ (ಕುಸಿತದ ವಲಯ) ಒಳಪಟ್ಟಿದ್ದು, ಬಿರುಕುಗಳು ಉಂಟಾಗಲು ಹಲವು ಕಾರಣಗಳಿವೆ. ಪ್ರಸ್ತುತ, ಜೋಶಿಮಠದಲ್ಲಿ ಹಾನಿಗೊಳಗಾದ ಕಟ್ಟಡಗಳ ನೆಲಸಮ ಮತ್ತು ಪುನರ್ವಸತಿ ಜವಾಬ್ದಾರಿಯನ್ನು ಸರ್ಕಾರವು ಸಿಬಿಆರ್​ಐಗೆ ವಹಿಸಿದೆ ಎಂದು ಹೇಳಿದರು. ಪ್ರದೀಪ್ ಕುಮಾರ್ ಅವರು 'ಈಟಿವಿ ಭಾರತ್'ಗೆ ನೀಡಿದ ಸಂದರ್ಶನದಲ್ಲಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತನಾಡಿದರು. ಪ್ರದೀಪ್ ಕುಮಾರ್​ ಅವರು ನೀಡಿದ ವಿವರಣೆ ಇಲ್ಲಿದೆ.

ಪ್ರಶ್ನೆ: ಜೋಶಿಮಠದಲ್ಲಿ ಏಕಾಏಕಿ ಭೂಮಿ ಮತ್ತು ಕಟ್ಟಡಗಳಲ್ಲಿ ಬಿರುಕು ಮೂಡಲು ಕಾರಣಗಳೇನು..?

ಉತ್ತರ: ಈ ಪ್ರದೇಶವು ಕುಸಿತದ ವಲಯದಲ್ಲಿದೆ. ಮಳೆ ಬಿದ್ದಾಗ ಬೆಟ್ಟಗಳ ತೆಳುವಾದ ಪದರುಗಳಲ್ಲಿ ನೀರು ಸಂಗ್ರಹಗೊಂಡು ಅಲ್ಲಿನ ಗಡಸುತನ ಕಡಿಮೆಯಾಗುತ್ತದೆ. ಹಿಮನದಿಗಳು ಕರಗಿ ನೈಸರ್ಗಿಕ ನೀರಿನ ಹರಿವು ತಡೆಯುವುದರಿಂದ ಭೂಮಿಯ ಹೊರಪದರ ಕುಗ್ಗುತ್ತಿದೆ. ಇಲ್ಲಿನ ಭೂಕುಸಿತಕ್ಕೂ ಈ ಅಂಶಗಳನ್ನು ಕಾರಣಗಳಾಗಿ ಉಲ್ಲೇಖಿಸಬಹುದು

ಪ್ರಶ್ನೆ: ಉತ್ತರಾಖಂಡವು ಅನೇಕ ಬೆಟ್ಟಗಳು, ಕಣಿವೆಗಳು ಮತ್ತು ನದಿ ಜಲಾನಯನ ಪ್ರದೇಶಗಳನ್ನು ಹೊಂದಿದೆ. ಜೋಶಿಮಠದಲ್ಲಿ ಮಾತ್ರ ಯಾಕೆ ಸಮಸ್ಯೆ?

ಉತ್ತರ: ಗುಡ್ಡಗಾಡು ಪ್ರದೇಶಗಳಲ್ಲಿ ಇಂಥ ಘಟನೆಗಳು ಸಾಮಾನ್ಯ. ಇಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಎಲ್ಲರ ಗಮನ ಜೋಶಿಮಠದತ್ತ ನೆಟ್ಟಿದೆ. ವರ್ಷಾನುಗಟ್ಟಲೆ ವಸತಿ, ವಾಣಿಜ್ಯ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಅದೊಂದೇ ಕಾರಣ ಎಂದು ಹೇಳಲಾಗದು. ಸಮಸ್ಯೆಯ ಮೂಲ ಕಾರಣಗಳನ್ನು ಗುರುತಿಸುವಲ್ಲಿ ಸರ್ಕಾರಿ ಸಂಸ್ಥೆಗಳು ತೊಡಗಿವೆ.

ಪ್ರಶ್ನೆ: ಎಷ್ಟು ದೂರದವರೆಗೆ ಬಿರುಕು ಬಿಟ್ಟ ಪ್ರದೇಶಗಳು ಮತ್ತು ಕಟ್ಟಡಗಳನ್ನು ಗುರುತಿಸಲಾಗಿದೆ?

ಉತ್ತರ: ಮುಖ್ಯ ವಿಜ್ಞಾನಿಗಳಾದ ಕನುಂಗೋ ಮತ್ತು ಅಜಯ್ ಚೌರಾಸಿಯಾ ಅವರು ಉತ್ತರಾಖಂಡ ಸರ್ಕಾರದ ಸೂಚನೆಯ ಮೇರೆಗೆ CBRI ಪರವಾಗಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಕೆಲ ಕಟ್ಟಡಗಳು ಬಿರುಕು ಬಿಟ್ಟಿದ್ದು, ಇನ್ನು ಕೆಲವು ಕುಸಿದಿವೆ. ಎರಡು ಹೋಟೆಲ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಒಟ್ಟು 600 ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ 10-15 ತಕ್ಷಣ ಕುಸಿಯುವ ಹಂತದಲ್ಲಿವೆ.

ಪ್ರಶ್ನೆ: ಬಿರುಕು ಬಿಟ್ಟ ಕಟ್ಟಡಗಳನ್ನು ಇತರೆ ಕಟ್ಟಡಗಳಿಗೆ ಧಕ್ಕೆಯಾಗದಂತೆ ತೆಗೆಯುವುದು ಹೇಗೆ?

ಉತ್ತರ: ಕೆಡವುವ ಪ್ರಕ್ರಿಯೆ ಆರಂಭವಾಗಿದೆ. ನಮ್ಮ ತಂಡ ಮಂಗಳವಾರ ಹೋಟೆಲ್ ಅನ್ನು ಕೆಡವಲು ಅಲ್ಲಿಗೆ ತಲುಪಿದೆ. ನಾವು ಸ್ಫೋಟಕ ಬಳಸದ ತಂತ್ರಜ್ಞಾನದಿಂದ ಹೋಟೆಲ್ ಅನ್ನು ಕೆಡವುತ್ತೇವೆ. ಇದು ಬೆಟ್ಟದ ಇಳಿಜಾರಿನಲ್ಲಿ ಭಾರವನ್ನು ಕಡಿಮೆ ಮಾಡುತ್ತದೆ ಮತ್ತು ಕೆಳಗಿನ ಭೂರಚನೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಬಳಿಕ ಮನೆಗಳ ತುರ್ತು ಹಾನಿ ಸಮೀಕ್ಷೆ ನಡೆಸಿ ತೆರವು ಮಾಡಬೇಕಾದ ಕಟ್ಟಡಗಳನ್ನು ಗುರುತಿಸುತ್ತೇವೆ. ಮುಂದಿನ 15-20 ದಿನಗಳಲ್ಲಿ ಅವುಗಳನ್ನು ಹಂತ ಹಂತವಾಗಿ ತೆಗೆದುಹಾಕಲಾಗುತ್ತದೆ.

ಪ್ರಶ್ನೆ: ಸಂತ್ರಸ್ತರ ಪುನರ್ವಸತಿಗೆ ಯಾವ ರೀತಿಯ ನೆರವು ನೀಡಲಾಗುತ್ತಿದೆ?

ಉತ್ತರ: ಕೋವಿಡ್ ಸಮಯದಲ್ಲಿ ಕಡಿಮೆ ಅವಧಿಯಲ್ಲಿ ದೇಶದಾದ್ಯಂತ 115 ಸ್ಥಳಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲು ಸಿಬಿಆರ್​ಐ ತಂತ್ರಜ್ಞಾನ ಒದಗಿಸಿದೆ. ನಮ್ಮಲ್ಲಿರುವ ತಂತ್ರಜ್ಞಾನದಿಂದ ಎರಡು ತಿಂಗಳಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದ್ದೇವೆ.

ಇದನ್ನೂ ಓದಿ: ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ..ಅವಶೇಷಗಳ ಅಡಿ ಹಲವರು ಸಿಲುಕಿರುವ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.