ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು 'ಮೋದಿ ವಿರೋಧಿ' ವಿಪಕ್ಷಗಳ 2ನೇ ಸಭೆ ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಿದೆ. ಕಾಂಗ್ರೆಸ್ ಆಯೋಜಿಸಿರುವ ಈ ಸಭೆ 2 ದಿನ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಸಂಸದ ರಾಹುಲ್ ಗಾಂಧಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫ್ರೆನ್ಸ್ ಪಕ್ಷದ ಫಾರೂಖ್ ಅಬ್ದುಲ್ಲಾ, ದೆಹಲಿ ಸಿಎಂ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಬೆಂಗಳೂರಿಗೆ ಬಂದಿಳಿದರು.
-
#WATCH | Congress president Mallikarjun Kharge, Congress Parliamentary Party Chairperson Sonia Gandhi and party leader Rahul Gandhi arrived in Bengaluru for the joint opposition meeting. They were received by Karnataka CM Siddaramaiah, Deputy CM DK Shivakumar and other senior… pic.twitter.com/dqZrGvTYcM
— ANI (@ANI) July 17, 2023 " class="align-text-top noRightClick twitterSection" data="
">#WATCH | Congress president Mallikarjun Kharge, Congress Parliamentary Party Chairperson Sonia Gandhi and party leader Rahul Gandhi arrived in Bengaluru for the joint opposition meeting. They were received by Karnataka CM Siddaramaiah, Deputy CM DK Shivakumar and other senior… pic.twitter.com/dqZrGvTYcM
— ANI (@ANI) July 17, 2023#WATCH | Congress president Mallikarjun Kharge, Congress Parliamentary Party Chairperson Sonia Gandhi and party leader Rahul Gandhi arrived in Bengaluru for the joint opposition meeting. They were received by Karnataka CM Siddaramaiah, Deputy CM DK Shivakumar and other senior… pic.twitter.com/dqZrGvTYcM
— ANI (@ANI) July 17, 2023
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೋನಿಯಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ತಾಜ್ ವೆಸ್ಟ್ಎಂಡ್ನಲ್ಲಿ ಈ ಸಭೆ ನಡೆಯಲಿದ್ದು, 26 ವಿಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಬಿಹಾರದ ಪಾಟ್ನಾದಲ್ಲಿ ಮೊದಲ ವಿಪಕ್ಷಗಳ ಸಭೆ ನಡೆಸಲಾಗಿತ್ತು. ಇದರಲ್ಲಿ 17 ಪಕ್ಷಗಳ ನಾಯಕರು ಭಾಗವಹಿಸಿದ್ದರು.
-
#WATCH | Karnataka | Samajwadi Party (SP) chief Akhilesh Yadav arrives in Bengaluru for the joint Opposition meeting. pic.twitter.com/16DExel7Uc
— ANI (@ANI) July 17, 2023 " class="align-text-top noRightClick twitterSection" data="
">#WATCH | Karnataka | Samajwadi Party (SP) chief Akhilesh Yadav arrives in Bengaluru for the joint Opposition meeting. pic.twitter.com/16DExel7Uc
— ANI (@ANI) July 17, 2023#WATCH | Karnataka | Samajwadi Party (SP) chief Akhilesh Yadav arrives in Bengaluru for the joint Opposition meeting. pic.twitter.com/16DExel7Uc
— ANI (@ANI) July 17, 2023
ಪ್ರಜಾಸತ್ತಾತ್ಮಕತೆ ಉಳಿಸಲು ಒಗ್ಗಟ್ಟು: ಮೋದಿ ವಿರೋಧಿ ಪಕ್ಷಗಳ 2ನೇ ಸಭೆ ಇದಾಗಿದೆ. ದೇಶದ ಪ್ರಜಾಸತ್ತಾತ್ಮಕ ರಚನೆಯನ್ನು ಉಳಿಸಲು ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿವೆ. ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ರಾಜಕೀಯದಲ್ಲಿ ಭಾರಿ ಬದಲಾವಣೆಗಳು ಕಂಡು ಬಂದಿವೆ. 2024 ರಲ್ಲಿ ವಿಪಕ್ಷಗಳ ಸರ್ಕಾರ ರಚನೆಯಾಗಲಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದರು.
ಬಿಜೆಪಿ ನಿರ್ನಾಮ: ಸಭೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ದೇಶದ ಜನಸಂಖ್ಯೆಯ 2/3 ರಷ್ಟು ಜನರು ಬಿಜೆಪಿಯನ್ನು ಸೋಲಿಸಲು ಮನಸ್ಸು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸುತ್ತಾರೆ ಎಂದು ಭಾವನೆ ನನ್ನದು. ಈ ಬಗ್ಗೆ ನನಗೆ ಮೂಲಗಳಿಂದ ಮಾಹಿತಿ ಬರುತ್ತಿದೆ. ದೇಶದಲ್ಲಿ ಬಿಜೆಪಿ ನಿರ್ನಾಮವಾಗುವ ಕಾಲ ಬಂದಿದೆ ಎಂದು ಗುಡುಗಿದರು.
-
#WATCH | West Bengal CM and TMC leader Mamata Banerjee arrives in Bengaluru for the two-day joint Opposition meeting. pic.twitter.com/qXmrEtV7uw
— ANI (@ANI) July 17, 2023 " class="align-text-top noRightClick twitterSection" data="
">#WATCH | West Bengal CM and TMC leader Mamata Banerjee arrives in Bengaluru for the two-day joint Opposition meeting. pic.twitter.com/qXmrEtV7uw
— ANI (@ANI) July 17, 2023#WATCH | West Bengal CM and TMC leader Mamata Banerjee arrives in Bengaluru for the two-day joint Opposition meeting. pic.twitter.com/qXmrEtV7uw
— ANI (@ANI) July 17, 2023
ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಆರ್ಥಿಕತೆಯನ್ನು ಹಾಳು ಮಾಡಿದರೇ ಹೊರತು, ವಿಪಕ್ಷಗಳಲ್ಲ. ದೇಶದಲ್ಲಿ ಎನ್ಡಿಎಯಂತೆ ಯುಪಿಎ ಕೂಡ ಇದೆ. ಹೀಗಾಗಿ ಎಲ್ಲ ಪಕ್ಷಗಳು ಒಗ್ಗೂಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಲೋಕಸಭೆ ಚುನಾವಣೆಯವರೆಗೆ ಮಾತ್ರ ಅಸ್ತಿತ್ವದಲ್ಲಿರುತ್ತವೆ, ಆಮೇಲೆ ಬರ್ಖಾಸ್ತಾಗಲಿವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸದೇ ಮುಂದೆ ನಡೆದರು.
-
#WATCH | Samajwadi Party (SP) chief Akhilesh Yadav, who arrived in Bengaluru today to participate in the joint Opposition meeting, was received by Karnataka Ministers MB Patil and Lakshmi Hebbalkar.
— ANI (@ANI) July 17, 2023 " class="align-text-top noRightClick twitterSection" data="
(Video: MB Patil) pic.twitter.com/ohxBhot7m2
">#WATCH | Samajwadi Party (SP) chief Akhilesh Yadav, who arrived in Bengaluru today to participate in the joint Opposition meeting, was received by Karnataka Ministers MB Patil and Lakshmi Hebbalkar.
— ANI (@ANI) July 17, 2023
(Video: MB Patil) pic.twitter.com/ohxBhot7m2#WATCH | Samajwadi Party (SP) chief Akhilesh Yadav, who arrived in Bengaluru today to participate in the joint Opposition meeting, was received by Karnataka Ministers MB Patil and Lakshmi Hebbalkar.
— ANI (@ANI) July 17, 2023
(Video: MB Patil) pic.twitter.com/ohxBhot7m2
ಪ್ರತಿಪಕ್ಷಗಳ ಎರಡನೇ ಸಭೆಯಲ್ಲಿ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK), ಕೊಂಗು ದೇಸ ಮಕ್ಕಳ್ ಕಚ್ಚಿ (KDMK), ವಿದುತಲೈ ಚಿರುತೈಗಲ್ ಕಚ್ಚಿ (VCK), ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಕೇರಳ ಕಾಂಗ್ರೆಸ್ (ಜೋಸೆಫ್ ಬಣ) ಮತ್ತು ಕೇರಳ ಕಾಂಗ್ರೆಸ್ (ಮಣಿ ಬಣ) ಪಕ್ಷಗಳು ಹೊಸದಾಗಿ ಸೇರಿಕೊಳ್ಳಲಿವೆ ಎಂದು ತಿಳಿದು ಬಂದಿದೆ.
-
#WATCH | On joint Opposition meeting, Karnataka CM and senior Congress leader Siddaramaiah says, "It is Narendra Modi who has spoiled the economy of the country, not Opposition parties...All the Opposition parties are coming together..." pic.twitter.com/X8eS7LUEgX
— ANI (@ANI) July 17, 2023 " class="align-text-top noRightClick twitterSection" data="
">#WATCH | On joint Opposition meeting, Karnataka CM and senior Congress leader Siddaramaiah says, "It is Narendra Modi who has spoiled the economy of the country, not Opposition parties...All the Opposition parties are coming together..." pic.twitter.com/X8eS7LUEgX
— ANI (@ANI) July 17, 2023#WATCH | On joint Opposition meeting, Karnataka CM and senior Congress leader Siddaramaiah says, "It is Narendra Modi who has spoiled the economy of the country, not Opposition parties...All the Opposition parties are coming together..." pic.twitter.com/X8eS7LUEgX
— ANI (@ANI) July 17, 2023
ನಾಳೆ ಎನ್‌ಡಿಎ ಸಭೆ: ವಿಪಕ್ಷಗಳ ಸಭೆಗೆ ಸಡ್ಡು ಹೊಡೆಯುವ ಮಾದರಿಯಲ್ಲಿ ಮಂಗಳವಾರ ದೆಹಲಿಯ ಅಶೋಕ ಹೋಟೆಲ್ನಲ್ಲಿ ಎನ್‌ಡಿಎ ಕೂಟದ ರಾಜಕೀಯ ಸಭೆ ಕರೆಯಲಾಗಿದೆ. ಇದರಲ್ಲಿ 30 ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಈ ಸಭೆ ಕರೆಯಲಾಗಿದೆ.
ಇದನ್ನೂ ಓದಿ; ಬೆಂಗಳೂರಿನ ವಿಪಕ್ಷಗಳ ಸಭೆಗೆ ಬರಲಿದ್ದಾರೆ ಸೋನಿಯಾ; ಕೆಲವು ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ