ETV Bharat / bharat

ಜೋಧ್​ಪುರ ಹಿಂಸಾಚಾರ: ಗಲಭೆ, ಗಾಯ, ಬಂಧನ, ಆರೋಪ-ಪ್ರತ್ಯಾರೋಪ! ಕಂಪ್ಲೀಟ್ ಡಿಟೇಲ್ಸ್‌

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ ತವರೂರು ಜೋಧಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 97ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ರಾಜಸ್ಥಾನ ಗೃಹ ಸಚಿವ ರಾಜೇಂದ್ರ ಯಾದವ್ ಹೇಳಿದ್ದಾರೆ.

Jodhpur violence, many people arrested in Jodhpur violence, curfew imposed in Jodhpur, Jodhpur violence news, Jodhpur violence update, ಜೋಧ್‌ಪುರ ಹಿಂಸಾಚಾರ, ಜೋಧ್‌ಪುರ ಹಿಂಸಾಚಾರದಲ್ಲಿ ಅನೇಕ ಜನರ ಬಂಧನ, ಜೋಧ್‌ಪುರದಲ್ಲಿ ಕರ್ಫ್ಯೂ ಜಾರಿ, ಜೋಧ್‌ಪುರ ಹಿಂಸಾಚಾರ ಸುದ್ದಿ, ಜೋಧ್‌ಪುರ ಹಿಂಸಾಚಾರದ ಅಪ್​ಡೇಟ್,
ಜೋಧ್​ಪುರ ಹಿಂಸಾಚಾರ
author img

By

Published : May 4, 2022, 8:22 AM IST

Updated : May 4, 2022, 8:27 AM IST

ಜೋಧ್‌ಪುರ(ಜೈಪುರ): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ತವರೂರು ಜೋಧ್‌ಪುರದಲ್ಲಿ ಮಂಗಳವಾರ ಈದ್‌ ಸಂಭ್ರಮದ ಗಂಟೆಗಳಿಗೂ ಮೊದಲು ಹಿಂಸಾಚಾರ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೇ, ಸುಮಾರು 90ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು, ನಗರದ 10 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಘಟನೆಯ ವಿವರ: ನಿನ್ನೆ ಪರಶುರಾಮ ಜಯಂತಿ ಮತ್ತು ರಂಜಾನ್​ ಹಬ್ಬವಿತ್ತು. ಇದರ ತಯಾರಿ ಏ.2 ರಾತ್ರಿಯಿಂದಲೇ ನಡೆಯುತ್ತಿತ್ತು. ಮುಸ್ಲಿಮರು ತಮ್ಮ ಧ್ವಜವನ್ನೂ, ಹಿಂದೂಗಳು ಕೇಸರಿ ಧ್ವಜಗಳಿಂದ ನಗರವನ್ನು ಅಲಂಕೃತಗೊಳಿಸುತ್ತಿದ್ದರು. ಈ ವೇಳೆ ಜಲೋರಿ ಗೇಟ್ ವೃತ್ತದಲ್ಲಿ ಧ್ವಜಗಳನ್ನು ಹಾಕುವ ಬಗ್ಗೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ಈ ಜಗಳ ತಾರಕಕ್ಕೇರಿ ಕಲ್ಲು ತೂರಾಟ ನಡೆಯಿತು. ಮಧ್ಯರಾತ್ರಿ ನಡೆದ ಘರ್ಷಣೆ ಪೊಲೀಸ್ ಮಧ್ಯಪ್ರವೇಶದಿಂದ ತಣ್ಣಗಾಗಿತ್ತು.

ಮತ್ತೆ ಕಲ್ಲು ತೂರಾಟ: ರಾತ್ರಿ ಕಲ್ಲು ತೂರಾಟದಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸ್ಥಳದಲ್ಲಿ ಮಂಗಳವಾರ ಮುಂಜಾನೆ ಪೊಲೀಸರನ್ನು ನಿಯೋಜಿಸುವುದರೊಂದಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು. ಆದರೆ ಬೆಳಿಗ್ಗೆ ಈದ್ಗಾದಲ್ಲಿ ಪ್ರಾರ್ಥನೆಯ ನಂತರ ಮತ್ತೆ ಉದ್ವಿಗ್ನತೆ ಉಂಟಾಯಿತು. ಕಿಡಿಗೇಡಿಗಳು ಜಲೋರಿ ಗೇಟ್ ಪ್ರದೇಶದ ಬಳಿ ಅಂಗಡಿಗಳು, ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ಮುಂದುವರೆಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಬಳಿ ಈದ್​ ಧ್ವಜ: ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಈದ್ ಧ್ವಜಗಳನ್ನು ಸ್ಥಾಪಿಸುತ್ತಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರ ಬಲ್ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಪಕ್ಕದ ವೃತ್ತದಲ್ಲಿ ಧ್ವಜ ಹಾಕಿದ್ದಾರೆ. ಪರಶುರಾಮ ಜಯಂತಿಗೂ ಮುನ್ನ ಅಲ್ಲಿ ಹಾಕಿದ್ದ ಕೇಸರಿ ಧ್ವಜ ನಾಪತ್ತೆಯಾಗಿದೆ ಎಂದು ಇತರೆ ಸಮುದಾಯದವರು ಆರೋಪಿಸಿದ್ದರಿಂದ ಕಲ್ಲು ತೂರಾಟ ಮತ್ತು ಘರ್ಷಣೆಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು, ಪತ್ರಕರ್ತರಿಗೆ ಗಾಯ: ಘರ್ಷಣೆ ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಕಿಡಿಗೇಡಿಗಳು ಕಲ್ಲು ತೂರಿದರು. ಪರಿಣಾಮ, ಐವರು ಪೊಲೀಸರು ಹಾಗು ಕೆಲವು ಪತ್ರಕರ್ತರು ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಪು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಬೇಕಾಯಿತು ಎಂದು ಪೊಲೀಸ್ ನಿಯಂತ್ರಣ ಕೊಠಡಿ ತಿಳಿಸಿದೆ.

ಇದನ್ನೂ ಓದಿ: ಜೋಧಪುರ್​ನಲ್ಲಿ ಧ್ವಜ ವಿಚಾರವಾಗಿ ಗುಂಪು ಘರ್ಷಣೆ, ಶಾಸಕರ ಮನೆ ಬಳಿ ಬೈಕ್​ಗೆ ಬೆಂಕಿ: ಇಂಟರ್​ನೆಟ್​ ಸ್ಥಗಿತ

ಇಂಟರ್ನೆಟ್​ ಸೇವೆ ಬಂದ್​: ಘಟನೆಯ ಕುರಿತು ಸತ್ಯಕ್ಕೆ ದೂರವಾಗಿರುವ ವದಂತಿ ಹರಡುವುದನ್ನು ತಡೆಯಲು ಈ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ, ಮೇ 4 ಮಧ್ಯರಾತ್ರಿಯವರೆಗೆ ಸುಮಾರು 10 ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಿದ್ದಾರೆ.

ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ: ತಮ್ಮ ಮಾನಹಾನಿ ಮಾಡುವುದೇ ಬಿಜೆಪಿಯ ಅಜೆಂಡಾ. ಹಿಂದೂ-ಮುಸ್ಲಿಮರ ನಡುವೆ ಗಲಭೆ ಎಬ್ಬಿಸುವುದು ಅವರ ಕೆಲಸ. ಧರ್ಮದ ಹೆಸರಿನಲ್ಲಿ ಎಷ್ಟು ದಿನ ರಾಜಕೀಯ ಮಾಡುತ್ತೀರಿ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಟೀಕಾಪ್ರಹಾರ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ದೂರಿದ್ದಾರೆ. ಗಲಭೆಕೋರರನ್ನು ಬಂಧಿಸದಿದ್ದರೆ ಪಕ್ಷದ ಇತರ ಮುಖಂಡರೊಂದಿಗೆ ಜಲೋರಿ ಗೇಟ್ ವೃತ್ತದಲ್ಲಿ ಧರಣಿ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಕಲ್ಲು ತೂರಾಟ... ಇದೊಂದು ಪೂರ್ವಭಾವಿ ಯೋಜನೆ ಎಂದ ಕೇಂದ್ರ ಸಚಿವ

Last Updated : May 4, 2022, 8:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.