ETV Bharat / bharat

ಶೇ. 6.5 ರಷ್ಟಿದ್ದ ನಿರುದ್ಯೋಗ ಪ್ರಮಾಣ ಶೇ. 8ಕ್ಕೆ ಏರಿಕೆ : ಕಾರಣ?

ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರದ ಪ್ರಕಾರ ಮಾರ್ಚ್​ನಲ್ಲಿ ಶೇಕಡಾ 6.5 ರಷ್ಟಿದ್ದ ನಿರುದ್ಯೋಗ, ಏಪ್ರಿಲ್​ನಲ್ಲಿ ಶೇಕಡಾ 8 ಕ್ಕೆ ಏರಿದೆ. 2021 ರ ಮಾರ್ಚ್​ನಲ್ಲಿ ಕೋವಿಡ್​ ಭೀತಿಯಿಂದಾಗಿ ಬಹುತೇಕ ಜನರು ಕೆಲಸಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ನಿರುದ್ಯೋಗ ಮತ್ತಷ್ಟು ಹೆಚ್ಚಾಯಿತು ಎಂದು ಸಿಎಂಐಇ ಯ ಸಿಇಒ ಮಹೇಶ್​​ ವ್ಯಾಸ್ ಹೇಳಿದ್ದಾರೆ.

ಶೇ. 6.5 ರಷ್ಟಿದ್ದ ನಿರುದ್ಯೋಗ ಪ್ರಮಾಣ ಶೇ.8ಕ್ಕೆ ಏರಿಕೆ : ಕಾರಣ?

author img

By

Published : May 13, 2021, 7:27 PM IST

ನವದೆಹಲಿ: ಕೋವಿಡ್ ಎರಡನೇ ಅಲೆಗೆ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದ್ದು, ಯುವ ಜನತೆ ಪರಿತಪಿಸುವಂತಾಗಿದೆ.

ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರದ ಪ್ರಕಾರ ಮಾರ್ಚ್​ನಲ್ಲಿ ಶೇಕಡಾ 6.5 ರಷ್ಟಿದ್ದ ನಿರುದ್ಯೋಗ, ಏಪ್ರಿಲ್​ನಲ್ಲಿ ಶೇಕಡಾ 8 ಕ್ಕೆ ಏರಿದೆ.

2021 ರ ಮಾರ್ಚ್​ನಲ್ಲಿ ಕೋವಿಡ್​ ಭೀತಿಯಿಂದಾಗಿ ಬಹುತೇಕ ಜನರು ಕೆಲಸಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ನಿರುದ್ಯೋಗ ಮತ್ತಷ್ಟು ಹೆಚ್ಚಾಯಿತು ಎಂದು ಸಿಎಂಐಇ ಯ ಸಿಇಒ ಮಹೇಶ್​​ ವ್ಯಾಸ್ ಹೇಳಿದ್ದಾರೆ.

ಕೋವಿಡ್ ನಿಯಂತ್ರಣಕ್ಕೋಸ್ಕರ ಜಾರಿಗೊಳಿಸಿದ ಲಾಕ್​ಡೌನ್​​ ನಿರುದ್ಯೋಗ ಸಮಸ್ಯೆಗೆ ಕಾರಣವಾಗಿದೆ ಎಂದು ಸಿಎಂಐಇ ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ಗೂ ಮುನ್ನ ಎಲ್‌ಪಿಆರ್ (Loan Prime Rate) ಶೇಕಡಾ 44.2 ರಿಂದ ಶೇಕಡಾ 40.6 ಕ್ಕೆ ಕುಸಿದಿದೆ. ಮಾರ್ಚ್​​ನಲ್ಲಿ ಶೇಕಡಾ 37.6 ರಷ್ಟಿದ್ದ ಉದ್ಯೋಗ ದರ ಏಪ್ರಿಲ್​ನಲ್ಲಿ 36.8 ಕ್ಕೆ ಇಳಿದಿದೆ.

ಲಾಕ್​ಡೌನ್ ಸಮಯದಲ್ಲಿ ಜನರು ಉದ್ಯೋಗ ಹುಡುಕುವುದನ್ನು ನಿಲ್ಲಿಸಿರಬಹುದು. ಆದರೆ, ಉದ್ಯೋಗ ಅರಸುವವರಿಗೆ ಸಮರ್ಪಕ ಕೆಲಸ ಒದಗಿಸಲು ಸಾಧ್ಯವಾಗಿಲ್ಲ. ನಿರುದ್ಯೋಗಕ್ಕೆ ಕೇವಲ ಲಾಕ್​ಡೌನ್ ಒಂದೇ ಕಾರಣವಲ್ಲ. ಉದ್ಯೋಗ ಸೃಷ್ಟಿಸದಿದ್ದಕ್ಕೆ ಆರ್ಥಿಕತೆಯೂ ಕಾರಣವಾಗಿರಬಹುದು ಎಂದು ವ್ಯಾಸ್ ತಿಳಿಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.