ETV Bharat / bharat

ಗಲ್ಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ 500ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ವಂಚನೆ: ರಾತ್ರೋರಾತ್ರಿ ಏಜೆಂಟ್​ ಪರಾರಿ - ಉದ್ಯೋಗದ ಹೆಸರಲ್ಲಿ ವಂಚನೆ

ಗಲ್ಫ್‌ನಲ್ಲಿ ಉದ್ಯೋಗ ಕೊಡಿಸುವ ಆಮಿಷ - ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ಭಾರೀ ವಂಚನೆ- ಸುಮಾರು ಎರಡು ಕೋಟಿ ರೂಪಾಯಿ ಮೋಸ

job-aspirants-duped-of-rs-2-crore-in-telanganas-accused-on-the-run
ಗಲ್ಫ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ 500ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ವಂಚ
author img

By

Published : Jan 10, 2023, 6:45 PM IST

ನಿಜಾಮಾಬಾದ್ (ತೆಲಂಗಾಣ): ನಿರುದ್ಯೋಗಿ ಯುವಕರನ್ನು ಗುರಿಯಾಗಿ ವಂಚಿಸುತ್ತಿದ್ದ ನಕಲಿ ಜಾಲವೊಂದು ತೆಲಂಗಾಣದಲ್ಲಿ ಪತ್ತೆಯಾಗಿದೆ. ನಿಜಾಮಾಬಾದ್‌ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ 500ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಗೆ ಗಲ್ಫ್‌ನಲ್ಲಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಎರಡು ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಎಫ್‌ಐಆರ್​ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಶೇಖ್​​ ಬಶೀರ್​ ಎಂಬಾತನೇ ನಿರುದ್ಯೋಗಿ ಯುವಕರಿಗೆ ಮೋಸ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಈತ ಡಿಚ್‌ಪಲ್ಲಿ ಮಂಡಲದಲ್ಲಿ ಕಳೆದ ಆರು ತಿಂಗಳು ಹಿಂದೆ ಕನ್ಸಲ್ಟೆನ್ಸಿ ಕಚೇರಿಯನ್ನು ಈ ನಕಲಿ ಏಜೆಂಟ್ ತೆರೆದಿದ್ದ. ನಿರುದ್ಯೋಗಿ ಯುವಕರಿಗೆ ದುಬೈ, ಕುವೈತ್, ಸೌದಿ ಅರೇಬಿಯಾ, ಓಮನ್ ಹಾಗೂ ಇತರ ರಾಷ್ಟ್ರಗಳಲ್ಲಿ ಹೆಚ್ಚಿನ ವೇತನ ನೀಡುವ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜಾಹೀರಾತು ನೀಡಿದ್ದ ಎಂಬುವುದಾಗಿ ತಿಳಿದು ಬಂದಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿರಾರು ರೂಪಾಯಿ ಹಣ ವಸೂಲಿ: ಆರೋಪಿ ಶೇಖ್​​ ಬಶೀರ್​ ನೀಡಿದ್ದ ಉದ್ಯೋಗದ ಜಾಹೀರಾತು ನಂಬಿದ ಹಲವು ನಿರುದ್ಯೋಗಿಗಳು ಸಾವಿರಾರು ರೂಪಾಯಿ ಹಣ ಪಾವತಿ ಮಾಡಿದ್ದರು. ವೀಸಾ ಮತ್ತು ಇತರ ದಾಖಲೆಗಳಿಗಾಗಿ ಪ್ರತಿಯೊಬ್ಬರಿಂದ ಕನಿಷ್ಠ 20 ಸಾವಿರದಿಂದ 50 ಸಾವಿರದವರೆಗೂ ಹಣವನ್ನು ಈ ವಂಚಕ ವಸೂಲಿ ಮಾಡಿದ್ದಾನೆ. ನಿಜಾಮಾಬಾದ್ ಜಿಲ್ಲೆ ಮಾತ್ರವಲ್ಲದೇ, ಕರೀಂನಗರ, ಜಗಿತ್ಯಾಲ, ನಿರ್ಮಲ್ ಮತ್ತು ಕಾಮರೆಡ್ಡಿ ಜಿಲ್ಲೆಗಳ ನಿರುದ್ಯೋಗಿಗಳು ಸೇರಿ 500ಕ್ಕೂ ಹೆಚ್ಚು ಯುವಕರಿಂದಲೂ ಹಣ ಸಂಗ್ರಹಿಸಿದ್ದಾನೆ. ಅಲ್ಲದೇ, ಯುವಕರು ತಮ್ಮ ಪಾಸ್‌ಪೋರ್ಟ್‌ಗಳನ್ನೂ ಆರೋಪಿಗೆ ಹಸ್ತಾಂತರಿಸಿದ್ದಾರೆ ಎಂದು ನಿಜಾಮಾಬಾದ್ ಎಸಿಪಿ ವೆಂಕಟೇಶ್ವರ್ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಪರೀಕ್ಷೆ ನಡೆಸಿದ್ದ ವಂಚಕರು: ಉದ್ಯೋಗ, ವೀಸಾ ಪ್ರಕ್ರಿಯೆ ಮತ್ತು ಪ್ರಯಾಣದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಕಲಿ ಏಜೆಂಟ್ ಹಂಚಿಕೊಳ್ಳಲು ಎಲ್ಲ ಯುವಕರನ್ನು ಸೇರಿಸಿಕೊಂಡು ವಾಟ್ಸಾಪ್ ಗುಂಪುಗಳನ್ನೂ ರಚಿಸಿದ್ದ. ಅಷ್ಟೇ ಅಲ್ಲ, ಅವರ ನಂಬಿಕೆಯನ್ನು ಸಂಪಾದಿಸಲು ಮತ್ತು ಉದ್ಯೋಗದ ಸಿಗುವ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲವು ಉದ್ಯೋಗ ಆಕಾಂಕ್ಷಿಗಳಿಗೆ ವೈದ್ಯಕೀಯ ಪರೀಕ್ಷೆಗಳನ್ನೂ ನಡೆಸಲಾಗಿತ್ತು ಎಂದು ಎಸಿಪಿ ವಿವರಿಸಿದ್ದಾರೆ.

ಏಕಾಏಕಿ ವಾಟ್ಸಾಪ್ ಗ್ರೂಪ್​ಗಳು ಬಂದ್: ಉದ್ಯೋಗದ ಹೆಸರಲ್ಲಿ ಹಣ ಪಡೆದು, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ತಮಗೆ ಗಲ್ಫ್‌ನಲ್ಲಿ ಉದ್ಯೋಗ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಇತ್ತ, ಈ ನಕಲಿ ಏಜೆಂಟ್​ ಸಹ ಇದೇ ಜನವರಿ ತಿಂಗಳ 10ರಂದು ವೀಸಾ ನೀಡುವುದಾಗಿ ತಿಳಿಸಿದ್ದ. ಆದರೆ, ಇದರ ಮಧ್ಯೆಯೇ ಭಾನುವಾರ ರಾತ್ರಿ ಎಲ್ಲ ವಾಟ್ಸಾಪ್ ಗ್ರೂಪ್‌ಗಳನ್ನು ಅಳಿಸಿದ್ದಾನೆ. ಇದರಿಂದ ಸಂತ್ರಸ್ತರು ಸೆಲ್ ಫೋನ್‌ಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಏಜೆಂಟ್​ ಲಭ್ಯವಾಗಲಿಲ್ಲ ಎಂಬುದಾಗಿ ಉದ್ಯೋಗ ಆಕಾಂಕ್ಷಿಗಳು ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ವೆಂಕಟೇಶ್ವರ್ ತಿಳಿಸಿದ್ದಾರೆ.

ಕನ್ಸಲ್ಟೆನ್ಸಿ ಕಚೇರಿಗೆ ಬೀಗ: ರಾತ್ರೋರಾತ್ರಿ ವಾಟ್ಸಾಪ್ ಗ್ರೂಪ್‌ಗಳನ್ನು ಅಳಿಸಿದ್ದರಿಂದ ಹಾಗೂ ಫೋನ್​ಗೂ ಏಜೆಂಟ್​ ಸಿಗದೇ ಇದ್ದುದ್ದರಿಂದ ಉದ್ಯೋಗ ಆಕಾಂಕ್ಷಿಗಳು ಸೋಮವಾರ ಡಿಚ್‌ಪಲ್ಲಿ ಮಂಡಲದಲ್ಲಿರುವ ಕನ್ಸಲ್ಟೆನ್ಸಿ ಕಚೇರಿಗೆ ದೌಡಾಯಿಸಿದ್ದಾರೆ. ಆದರೆ, ಆಗ ಕನ್ಸಲ್ಟೆನ್ಸಿ ಕಚೇರಿಗೂ ಬೀಗ ಹಾಕಿರುವುದು ಕಂಡು ಬಂದಿದೆ. ಹೀಗಾಗಿ ತಾವು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು ಕಚೇರಿ ಮುಂದೆ ಎದುರು ಪ್ರತಿಭಟನೆ ನಡೆಸಿದ್ದಾರೆ. ನಂತರ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಿ ಹಣ ವಸೂಲಿ ಮಾಡಬೇಕೆಂದು ದೂರು ಸಲ್ಲಿಸಿದ್ದು, ಸಂತ್ರಸ್ತರ ದೂರಿನ ಮೇರೆಗೆ ತನಿಖೆ ಆರಂಭಿಸಲಾಗಿದೆ ಎಂದು ಎಸಿಪಿ ವೆಂಕಟೇಶ್ವರ್ ಹೇಳಿದ್ದಾರೆ.

ಇದನ್ನೂ ಓದಿ: ತಂದೆಯ ಹಣ ಮರು ಹೊಂದಿಸಲು ಮಗಳ ಸರ್ಕಸ್‌; ಕಿಡ್ನಿ ಮಾರಲು ಮುಂದಾಗಿ ಮೋಸದ ಜಾಲಕ್ಕೆ ಬಿದ್ದಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.