ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) ಖಾಲಿ ಇರುವ ಡಿಪ್ಲೊಮಾ ಟ್ರೈನಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ನೇಮಕಾತಿ ನಡೆಯಲಿದೆ. ಒಟ್ಟು 425 ಹುದ್ದೆಗಳ ಭರ್ತಿಗೆ ಅಧಿಸೂಚನೆಯಾಗಿದೆ. ಡಿಪ್ಲೊಮಾ ಪದವೀಧರರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್)- 344 ಹುದ್ದೆಗಳು, ಡಿಪ್ಲೊಮಾ ಟ್ರೈನಿ (ಸಿವಿಲ್) 68 ಹುದ್ದೆಗಳು), ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಾನಿಕ್ಸ್)- 13 ಹುದ್ದೆಗಳು ಸೇರಿದಂತೆ ಒಟ್ಟು 425 ಹುದ್ದೆಗಳಿಗೆ ನೇಮಕಾತಿ.
ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್, ಸಿವಿಲ್ ಮತ್ತು ಎಲೆಕ್ಟ್ರಿಕಲ್, ಟೆಲಿ ಕಮ್ಯೂನಿಕೇಷನ್ನಲ್ಲಿ ಶೇ 70ರಷ್ಟು ಅಂಕಗಳೊಂದಿಗೆ ಡಿಪ್ಲೊಮಾ ಪದವಿ. ಬಿಇ, ಬಿ.ಟೆಕ್ ಅಥವಾ ಎಂಇ, ಎಂ.ಟೆಕ್ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಕನಿಷ್ಟ 18ರಿಂದ ಗರಿಷ್ಠ 27 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ, ವಿಶೇಷಚೇತನ, ನಿವೃತ್ತ ಸೇವಾಧಿಕಾರಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಿಲ್ಲ. ಉಳಿದ ಅಭ್ಯರ್ಥಿಗಳು 300 ರೂ ಅರ್ಜಿ ಶುಲ್ಕವನ್ನು ಆನ್ಲೈನ್ ಪೇಮೆಂಟ್ ಮೂಲಕ ಭರಿಸಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುತ್ತದೆ. ಸೆಪ್ಟೆಂಬರ್ 1ರಿಂದ ಅರ್ಜಿ ಸಲ್ಲಿಸಬಹುದು. ಸೆಪ್ಟೆಂಬರ್ 23 ಕಡೇಯ ದಿನ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಪರಿಶೀಲನೆಗೆ ಅಭ್ಯರ್ಥಿಗಳು powergridindia.com ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಕೆರಿಯರ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ, ಓಪನಿಂಗ್ ರಿಕ್ರುಟ್ಮೆಂಟ್ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: SBI Recruitment: 6160 ಅಪ್ರೆಂಟಿಸ್ ಹುದ್ದೆ ನೇಮಕಾತಿ; ಕನ್ನಡದಲ್ಲೂ ಬರೆಯಬಹುದು ಪರೀಕ್ಷೆ