ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವುದು ಎಂದರೆ ದೇಶದಲ್ಲಿ ಲಿಂಗ ಸಮಾನತೆಯ ನ್ಯಾಯಕ್ಕೆ ಗೌರವ ಸಲ್ಲಿಸಿದಂತೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಹೇಳಿದ್ದಾರೆ.
ಇಲ್ಲಿನ ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮೊದಲ ಕಾನೂನು ಸಚಿವ ಭೀಮರಾವ್ ಅಂಬೇಡ್ಕರ್ ಕೂಡ ಯುಸಿಸಿ ಜಾರಿಗೆ ತರಲು ಒಲವು ತೋರಿದ್ದರು. ಆಗ ಲಿಂಗ ಸಮಾನತೆ, ಏಕರೂಪ ನಾಗರಿಕ ಸಂಹಿತೆ ಡಿಕೋಡಿಂಗ್ ವಿಷಯದ ಕುರಿತು ಚರ್ಚೆ ನಡೆದಿತ್ತು ಎಂದು ಅವರು ತಿಳಿಸಿದರು.
ಯುಸಿಸಿಯನ್ನು ಈಗಾಗಲೇ ಗೋವಾದಲ್ಲಿ ಅಳವಡಿಸಲಾಗಿದೆ ಮತ್ತು ಇದು ಪೋರ್ಚುಗೀಸ್ ಕಾಲದಿಂದಲೂ ಇದೆ. ಸಾಮಾಜಿಕ ಪ್ರಜಾಪ್ರಭುತ್ವದ ಅನುಪಸ್ಥಿತಿಯಲ್ಲಿ, ರಾಜಕೀಯ ಪ್ರಜಾಪ್ರಭುತ್ವವು ದೂರದ ಕನಸಾಗಿ ಉಳಿದಿದೆ ಎಂದು ಪಂಡಿತ್ ಅಭಿಪ್ರಾಯಪಟ್ಟರು.
ಇವತ್ತಿಗೂ ಕೂಡ 54 ವಿಶ್ವವಿದ್ಯಾನಿಲಯಗಳಲ್ಲಿ ಕೇವಲ ಆರು ಮಹಿಳಾ ಉಪಕುಲಪತಿಗಳಿದ್ದಾರೆ ಎಂದು ಪಂಡಿತ್ ಹೇಳಿದರು.