ದುಮ್ಕಾ(ಜಾರ್ಖಂಡ್): ಜಾರ್ಖಂಡ್ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೂ, ಒಳ ಉಡುಪಿಗೂ ಸಂಬಂಧವಿದೆಯಂತೆ. ಇದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸಹೋದರ, ಶಾಸಕ ಬಸಂತ್ ಸೊರೆನ್ ಅವರ ವ್ಯಾಖ್ಯಾನ.
ಶಾಸಕರನ್ನು ರಾಯ್ಪುರಕ್ಕೆ ಕರೆದೊಯ್ದರೆ, ಬಸಂತ್ ಸೊರೇನ್ ದೆಹಲಿಗೆ ಹೋಗಿದ್ದು ಎಲ್ಲರನ್ನೂ ಅಚ್ಚರಿ ಉಂಟು ಮಾಡಿತ್ತು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಬಸಂತ್ ಸೊರೆನ್ ಅವರು "ನಾನು ಒಳ ಉಡುಪುಗಳನ್ನು ಖರೀದಿಸಲು ದೆಹಲಿಗೆ ಹೋಗಿದ್ದೆ" ಎಂದು ಉತ್ತರ ನೀಡಿದ್ದಾರೆ.
ರಿಯಾಯಿತಿ ದರದಲ್ಲಿ ಒಳ ಉಡುಪು ಸೇರಿದಂತೆ ಬಟ್ಟೆಗಳು ಸಿಗುವಲ್ಲಿ ನಾವು ತೆರಳಿ ಖರೀದಿಸುತ್ತೇವೆ. ಇದನ್ನು ಎಲ್ಲ ಪಕ್ಷಗಳ ನಾಯಕರೂ ಮಾಡುತ್ತಾರೆ. ಅದರಂತೆ ನಾನು ದೆಹಲಿಗೆ ಒಳ ಉಡುಪು ಖರೀದಿಸಲು ಹೋಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
ಬಸಂತ್ ಸೊರೆನ್ ದೆಹಲಿಗೆ ಹೋಗಿದ್ದನ್ನು ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಮೀಮರ್ಗಳು ಒಳ ಉಡುಪು ಬಸಂತ್ ತರಲು ದೆಹಲಿಗೆ ಹೋಗಿದ್ದಾರೆ ಎಂದೆಲ್ಲಾ ತಮಾಷೆ ಮಾಡಿದ್ದರು. ಈ ವ್ಯಂಗ್ಯವನ್ನು ಬಸಂತ್ ಸೊರೆನ್ ಸ್ವೀಕರಿಸಿದ್ದು, ಹೌದು ನಾನು ಅಂಡರ್ವೇರ್ ತರಲೆ ಹೋಗಿದ್ದೆ ಎಂದು ಹೇಳಿದ್ದಾರೆ.
ಸೋಮವಾರವಷ್ಟೇ ಜಾರ್ಖಂಡ್ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆಸಿದ ಸಿಎಂ ಹೇಮಂತ್ ಸೊರೆನ್ ವಿಶ್ವಾಸಮತ ನಿರ್ಣಯವನ್ನು ಅಂಗೀಕರಿಸಿತು. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎಂಎಂನ 48 ಶಾಸಕರು ವಿಶ್ವಾಸಮತ ಯಾಚನೆಯ ಪರವಾಗಿ ಮತ ಚಲಾಯಿಸಿದರು. ಇದರಿಂದ ಸೊರೆನ್ ವಿಶ್ವಾಸ ಗೆದ್ದು ಸರ್ಕಾರವನ್ನು ಉಳಿಸಿಕೊಂಡರು.
ಓದಿ: ಒಂದೇ ಶೌಚಕೊಠಡಿಯಲ್ಲಿ ಎರಡು ಕಮೋಡ್.. ಬೆಚ್ಚಿಬಿದ್ದ ಸಾರ್ವಜನಿಕರು!