ETV Bharat / bharat

ಜಿಯೋ ಗ್ರಾಹಕರಿಗೆ ಗುಡ್​ ನ್ಯೂಸ್: 601 ರಿಚಾರ್ಜ್​ ಮಾಡಿ, ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರಾಗಿ

author img

By

Published : Dec 7, 2021, 10:00 AM IST

ಕರೆ ಹಾಗೂ ಡೇಟಾ ದರ ಹೆಚ್ಚಿಸಿದ್ದ ಜಿಯೋ ಸದ್ಯ ತನ್ನ ಗ್ರಾಹಕರಿಗೆ ಖುಷಿ ಸುದ್ದಿ​ ನೀಡಿದೆ. ತನ್ನ ಐದು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಪರಿಷ್ಕರಿಸಿದ್ದು ರಿಚಾರ್ಜ್​ ಯೋಜನೆಗಳ ಜೊತೆ ಡಿಸ್ನಿ+ ಹಾಟ್​ ಸ್ಟಾರ್ ಮೊಬೈಲ್​ ಚಂದಾದಾರಿಕೆ ನೀಡುತ್ತಿದೆ.

jio-revises-prepaid-plans
ಜಿಯೋ

ಟೆಲಿಕಾಂ​ ದೈತ್ಯ ರಿಲಯನ್ಸ್ ಜಿಯೋ ತನ್ನ ಐದು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಮತ್ತೆ ಪರಿಷ್ಕರಿಸಿದ್ದು, ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯೊಂದಿಗೆ ಹೊಸ ಐದು ಜಿಯೋ ಪ್ರೀಪೇಡ್ ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡಿದೆ.

ಕಂಪನಿಯು ಕಳೆದ ವಾರ ಜಿಯೋ ಪ್ರೀಪೇಡ್ ಯೋಜನೆಗಳ ದರ ಹೆಚ್ಚಳ ಮಾಡಿತ್ತು. ಈಗ ತನ್ನ ಚಂದಾದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಕನಿಷ್ಠ 601 ರೂ.ಗಳಿಂದ ಆರಂಭಿಸಿದೆ.

ರಿಲಯನ್ಸ್ ಜಿಯೋ ಪ್ಲಾನ್‌ಗಳು ಹೀಗಿವೆ:

ಒಂದು ವರ್ಷದ 601 ರೂ. ಪ್ರೀಪೇಡ್ ಯೋಜನೆ, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಹೊಂದಿರುವ ಜಿಯೋ ಮೊದಲ ಪ್ರೀಪೇಡ್ ಯೋಜನೆಯಾಗಿದೆ. ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ದಿನಕ್ಕೆ 3GB ಹೈ-ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMSಗಳನ್ನು ನೀಡಲಾಗಿದೆ. ಮೊದಲೇ ಹೇಳಿದಂತೆ, ಈ ಯೋಜನೆಯು ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಒಳಗೊಂಡಿದ್ದು, ಹೆಚ್ಚುವರಿ 6GB ಹೈ-ಸ್ಪೀಡ್ ಡೇಟಾ ಉಚಿತವಾಗಿ ನೀಡಲಾಗುತ್ತಿದೆ.

ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಹೊಂದಿರುವ ಜಿಯೋವಿನ ಮೂರನೇ ಯೋಜನೆಯು 888 ರೂ.ಗಳಿಗೆ ಲಭ್ಯವಿದೆ. ಈ ಯೋಜನೆಯಲ್ಲಿ ದಿನಕ್ಕೆ 2GB ಹೈಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 ಸಂದೇಶ ಒಳಗೊಂಡಿವೆ. 84 ವ್ಯಾಲಿಡಿಟಿ ಜೊತೆ ಡಿಸ್ನಿ+ಹಾಟ್​ ಸ್ಟಾರ್​​ ಮೊಬೈಲ್ ವಾರ್ಷಿಕ ಚಂದಾದಾರಿಕೆ ಜೊತೆಗೆ ಹೆಚ್ಚುವರಿ 5GB ಡೇಟಾ ಒದಗಿಸಲಾಗುತ್ತಿದೆ.

ಜಿಯೋದ 3,119 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಒಂದು ವರ್ಷದ Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಫ್ರೀಯಾಗಿ ಪಡೆಯಬಹುದು. ಇದರಲ್ಲಿ 2GB ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಜೊತೆಗೆ 10GB ಹೆಚ್ಚುವರಿ ಡೇಟಾವನ್ನು 365 ದಿನಗಳವರೆಗೆ ನೀಡಲಾಗುತ್ತಿದೆ.

ಈ ನಿಯಮಿತ ಯೋಜನೆಗಳೊಂದಿಗೆ ಜಿಯೋದ ಐದನೇ ಹಾಗೂ ಡೇಟಾ-ಮಾತ್ರ 659 ರೂ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಕೂಡ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನಿಡುತ್ತದೆ. 56 ದಿನಗಳವರೆಗೆ 1.5GB ಹೈ-ಸ್ಪೀಡ್ ದೈನಂದಿನ ಡೇಟಾ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.