ETV Bharat / bharat

ದೇಶದ 1 ಸಾವಿರ ಪ್ರಮುಖ ನಗರಗಳಲ್ಲಿ 5ಜಿ ನೆಟ್​ವರ್ಕ್​ ವಿಸ್ತರಣೆಗೆ ಜಿಯೋ ಸಜ್ಜು - ದೇಶದಲ್ಲಿ ಜಿಯೋದಿಂದ 5 ಜಿ ನೆಟ್​ವರ್ಕ್​ ಅಳವಡಿಕೆ

ಹೆಲ್ತ್‌ಕೇರ್ ಮತ್ತು ಇಂಡಸ್ಟ್ರಿಯಲ್ ಆಟೊಮೇಷನ್ ವಲಯಗಳಲ್ಲಿ 5ಜಿ ನೆಟ್‌ವರ್ಕ್ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಸಂಸ್ಥೆಯ ಈ ಯೊಜನೆಗೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣ ನೆಟ್ ವರ್ಕ್ ವಿಸ್ತರಣೆ ಕಾರ್ಯ ಆರಂಭವಾಗಲಿದೆ ಎಂದು ಜಿಯೋ ತಿಳಿಸಿದೆ.

5g-coverage
5ಜಿ ನೆಟ್​ವರ್ಕ್
author img

By

Published : Jan 22, 2022, 7:57 PM IST

Updated : Jan 22, 2022, 8:27 PM IST

ನವದೆಹಲಿ : ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ದೇಶಾದ್ಯಂತ 1 ಸಾವಿರ ಪ್ರಮುಖ ನಗರಗಳಲ್ಲಿ ಪ್ರಾಯೋಗಿಕವಾಗಿ 5G ನೆಟ್​ವರ್ಕ್​ ಅನುಷ್ಠಾನಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ.

ದೇಶದಲ್ಲಿ 5ಜಿ ನೆಟ್​ವರ್ಕ್ ವಿಸ್ತರಣೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಆಯ್ದ ನಗರಗಳಲ್ಲಿ ಫೈಬರ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಾಯೋಗಿಕ ಯೋಜನೆ ಇದಾಗಿರಲಿದೆ.

ಜಿಯೋ 5ಜಿ ನೆಟ್‌ವರ್ಕ್ ವಿಶಿಷ್ಟವಾಗಿದೆ. ಆದ್ದರಿಂದ 3ಡಿ ಮ್ಯಾಪಿಂಗ್‌ನಂತಹ ಸುಧಾರಿತ ವಿಧಾನಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಜಿಯೋ ವಕ್ತಾರರು ತಿಳಿಸಿದ್ದಾರೆ.

ಹೆಲ್ತ್‌ಕೇರ್ ಮತ್ತು ಇಂಡಸ್ಟ್ರಿಯಲ್ ಆಟೊಮೇಷನ್ ವಲಯಗಳಲ್ಲಿ 5ಜಿ ನೆಟ್‌ವರ್ಕ್ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಸಂಸ್ಥೆಯ ಈ ಯೊಜನೆಗೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತ ತಕ್ಷಣ ನೆಟ್ ವರ್ಕ್ ವಿಸ್ತರಣೆ ಕಾರ್ಯ ಆರಂಭವಾಗಲಿದೆ ಎಂದು ಜಿಯೋ ತಿಳಿಸಿದೆ.

ರಿಲಯನ್ಸ್ ಜಿಯೋ ಕಳೆದ ವರ್ಷದ ಅಂತ್ಯಕ್ಕೆ 1.02 ಕೋಟಿ ಗ್ರಾಹಕರನ್ನು ಹೊಸದಾಗಿ ಪಡೆದುಕೊಳ್ಳುವ ಮೂಲಕ ಇದೀಗ ದೇಶದಲ್ಲಿ 42.1 ಕೋಟಿ ಗ್ರಾಹಕರನ್ನು ಸಂಸ್ಥೆ ಹೊಂದಿದೆ.

ಇದನ್ನೂ ಓದಿ: ಬಿಜೆಪಿಗೆ ಗುಡ್‌ಬೈ ಹೇಳಿದ ಗೋವಾ ಮಾಜಿ ಸಿಎಂ ಪರಿಕ್ಕರ್‌ ಪುತ್ರನಿಂದ ಕೇಸರಿ ನಾಯಕರಿಗೆ ಹೊಸ ಬೇಡಿಕೆ!

Last Updated : Jan 22, 2022, 8:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.