ETV Bharat / bharat

ಬಾಲಕಿಯ ಮನೆಗೆ ನುಗ್ಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಂದ ದುರುಳ: ಜಾರ್ಖಂಡ್‌ನಲ್ಲಿ ಭುಗಿಲೆದ್ದ ಆಕ್ರೋಶ - ಮುಖ್ಯಮಂತ್ರಿ ಹೇಮಂತ್ ಸೊರೆನ್

ಪ್ರೀತಿ ತಿರಸ್ಕರಿಸಿದ ಬಾಲಕಿಗೆ ಅನ್ಯ ಕೋಮಿನ ಯುವಕನೊಬ್ಬ ಬೆಂಕಿ ಹಚ್ಚಿ ಕೊಂದು ಹಾಕಿದ್ದಾನೆ. ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಅಮಾನವೀಯ ಘಟನೆಯನ್ನು ಖಂಡಿಸಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಬೆಂಕಿ ಇಟ್ಟ ಅನ್ಯ ಕೋಮಿನ ಯುವಕ
ಬೆಂಕಿ ಇಟ್ಟ ಅನ್ಯ ಕೋಮಿನ ಯುವಕ
author img

By

Published : Aug 29, 2022, 8:03 PM IST

Updated : Aug 29, 2022, 9:44 PM IST

ಜಾರ್ಖಂಡ್‌: ಜಾರ್ಖಂಡ್​ನ ಡುಮ್ಕಾ ಎಂಬಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಯುವಕನೊಬ್ಬ ಪ್ರೀತಿ ತಿರಸ್ಕರಿಸಿದ ನೆಪದಲ್ಲಿ ಮನೆಗೆ ನುಗ್ಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಶಾರುಖ್‌ ಎಂದು ಗುರುತಿಸಲಾಗಿದೆ. ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ಭುಗಿಲೆದ್ದಿದೆ. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಸಂತ್ರಸ್ತೆ
ಕೊಲೆಯಾದ ಬಾಲಕಿ

ಸಂತ್ರಸ್ತೆ ಮತ್ತು ಆರೋಪಿ ಬೇರೆ ಬೇರೆ ಧರ್ಮದವರಾಗಿದ್ದಾರೆ. ಈ ಪ್ರಕರಣ ಇದೀಗ ರಾಜಕೀಯ ತಿರುವನ್ನೂ ಪಡೆದುಕೊಂಡಿದೆ. ಮಹಿಳೆಯರ ಸುರಕ್ಷತೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಪಕ್ಷ ಬಿಜೆಪಿ ಸಿಎಂ ಹೇಮಂತ್‌ ಸೊರೇನ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಈ ಪ್ರಕರಣವನ್ನು ಲವ್ ಜಿಹಾದ್‌ ಎಂತಲೂ ತಿಳಿಸಿದೆ.

1. ಕರೆ ಮಾಡಿ ಬಾಲಕಿಯನ್ನು ಪೀಡಿಸುತ್ತಿದ್ದ ಶಾರುಖ್: ಆಗಸ್ಟ್ 23 ರಂದು ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಬಾಲಕಿಯ ಮೃತದೇಹದ ಅಂತ್ಯಸಂಸ್ಕಾರ ಮಾಡಲಾಗಿದೆ. ಬಾಲಕಿ ಸಾವಿಗೂ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ್ದು, ಶಾರುಖ್​ ಮತ್ತು ಇನ್ನೊಬ್ಬ ಛೋಟು ಎಂಬುವವನ ಹೆಸರು ತಿಳಿಸಿದ್ದಾಳೆ. ಬಂಧಿತನಾಗಿರುವ ಆರೋಪಿ ಛೋಟು ಖಾನ್ ಅಲಿಯಾಸ್ ನಯೀಮ್​ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಬಾಲಕಿ ನೀಡಿದ ಹೇಳಿಕೆ ಪ್ರಕಾರ, ಆರೋಪಿಯು 10 ದಿನಗಳ ಹಿಂದೆ ಆಕೆಯ ಮೊಬೈಲ್‌ಗೆ ಕರೆ ಮಾಡಿ, ಆತನ ಸ್ನೇಹಿತೆಯಾಗುವಂತೆ ಪೀಡಿಸುತ್ತಿದ್ದನಂತೆ.

2. ನೋವಿನ ಮಡುವಿನಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ ಬಾಲಕಿ: "ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ನನಗೆ ಮತ್ತೆ ಕರೆ ಮಾಡಿ, ನಾನು ಮಾತನಾಡದಿದ್ದರೆ ನನ್ನನ್ನು ಕೊಲ್ಲುತ್ತೇನೆ ಎಂದು ಶಾರುಕ್‌ ಹೇಳಿದ್ದಾನೆ. ಬೆದರಿಕೆಯ ಬಗ್ಗೆ ನಾನು ನನ್ನ ತಂದೆಗೆ ತಿಳಿಸಿದ್ದೆ. ನಂತರ ನನ್ನ ತಂದೆ ಆತನ ಕುಟುಂಬದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಹಾಗಾಗಿ ಊಟ ಮುಗಿಸಿ ನಾವು ಮಲಗಿದೆವು. ನಾನು ಇನ್ನೊಂದು ಕೋಣೆಯಲ್ಲಿ ಮಲಗಿದ್ದೆ, ಮಂಗಳವಾರ ಬೆಳಗ್ಗೆ ನನಗೆ ಸುಡುವ ವಾಸನೆಯ ಅನುಭವವಾಯಿತು. ನಾನು ಕಣ್ಣು ತೆರೆದಾಗ ಅವರು ಓಡಿಹೋಗುವುದನ್ನು ಕಂಡು, ಕಿರುಚಲು ಪ್ರಾರಂಭಿಸಿದೆ. ನೋವಿನಿಂದ ನನ್ನ ತಂದೆಯ ಕೋಣೆಗೆ ಹೋದೆ. ಅವರು ಬೆಂಕಿಯನ್ನು ನಂದಿಸಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು" ಎಂದು ಬಾಲಕಿ ನೋವಿನ ಮಡುವಿನಲ್ಲಿ ಪೊಲೀಸರಿಗೆ ಹೇಳಿಕೆ ನೀಡಿದ್ದಳು.

ಜಾರ್ಖಂಡ್‌ನಲ್ಲಿ ಘಟನೆ ಖಂಡಿಸಿ ಪ್ರತಿಭಟನೆ

ಇದನ್ನೂ ಓದಿ:ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಮಹಿಳೆಗೆ ಬೆಂಕಿ ಹಚ್ಚಿ ಕೊಂದ ದುರುಳರು

3. ಆರೋಪಿಗಳ ಬಂಧನ, ಮುಂದುವರೆದ ವಿಚಾರಣೆ: "ಆರೋಪಿ ಶಾರುಖ್‌ನನ್ನು ಬಂಧಿಸಲಾಗಿದೆ. ತ್ವರಿತ ವಿಚಾರಣೆಗಾಗಿ ನಾವು ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ. ಜನರು ನಮಗೆ ಸಹಕರಿಸುತ್ತಿದ್ದಾರೆ. ನಾವು ಶಾಂತಿಯನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡುತ್ತೇವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಸೆಕ್ಷನ್ 144 ವಿಧಿಸಲಾಗಿದೆ" ಎಂದು ದುಮ್ಕಾ ಸೂಪರಿಂಟೆಂಡೆಂಟ್ ಪೊಲೀಸ್ ಅಂಬರ್ ಲಕ್ಡಾ ಹೇಳಿದರು.

  • #WATCH | Jharkhand: Accused Shahrukh who set ablaze a class 12 girl in Dumka for allegedly turning down his proposal, was arrested on 23rd August.

    The girl succumbed to her burn injuries yesterday, 28th August.

    (In video: The accused from the day of his arrest - 23rd August) pic.twitter.com/PwkQuM8plt

    — ANI (@ANI) August 29, 2022 " class="align-text-top noRightClick twitterSection" data=" ">

4. ಕಸ್ಟಡಿಯಲ್ಲಿದ್ದರೂ ಆರೋಪಿಗಳ ವಿಕೃತ ನಗು​: ಈ ನಡುವೆ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದು ಆಕ್ರೋಶ ಮತ್ತಷ್ಟು ಉಲ್ಬಣಿಸಲು ಕಾರಣವಾಗಿದೆ. ಅವರಿಗೆ ಯಾವುದೇ ಪಶ್ಚಾತ್ತಾಪದ ಭಾವನೆ ಇಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತ ಮತ್ತು ತೀವ್ರ ಕೋಪ ವ್ಯಕ್ತಪಡಿಸಿದ್ದಾರೆ.

5. ಆರೋಪಿಗಳಿಗೆ ಕಠಿಣ ಶಿಕ್ಷೆ ಭರವಸೆ ಕೊಟ್ಟ ಜಾರ್ಖಂಡ್​ ಸಿಎಂ: ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಈ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಂತ್ರಸ್ತೆ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಲಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದರು.

6. ಸೊರೇನ್ ಸರ್ಕಾರದ ವಿರುದ್ಧ ಬಿಜೆಪಿ ಟೀಕಾ ಸಮರ: ಸೋರೆನ್ ಮುಖ್ಯಮಂತ್ರಿಯಾಗಿನಿಂದ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಸಾವಿರಾರು ಅಪರಾಧಗಳು ನಡೆಯುತ್ತಿವೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಾ ಸಮರ ನಡೆಸಿದೆ.

Last Updated : Aug 29, 2022, 9:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.