ETV Bharat / bharat

ಜಾರ್ಖಂಡ್​ನಲ್ಲಿ 18ರಿಂದ 45 ವರ್ಷದೊಳಗಿನ ಜನರಿಗೆ ಉಚಿತ ಲಸಿಕೆ - ಜಾರ್ಖಂಡ್ ಸಿಎಂ ಹೇಮಂತ್​ ಸೊರೆನ್​

ಜಾರ್ಖಂಡ್​​ನಲ್ಲಿ 18ರಿಂದ 45 ವರ್ಷದೊಳಗಿನ ಜನರಿಗೆ ಉಚಿತ ವ್ಯಾಕ್ಸಿನೇಷನ್ ನೀಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

vaccination
ವ್ಯಾಕ್ಸಿನೇಷನ್
author img

By

Published : Apr 23, 2021, 1:52 PM IST

ರಾಂಚಿ: ಕೋವಿಡ್ ಅಲೆ ಹೆಚ್ಚಾಗುತ್ತಿರುವ ಕಾರಣ ಜಾರ್ಖಂಡ್​​ನಲ್ಲಿ 8 ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಲಾಗಿತ್ತು. ಇದೀಗ ರಾಜ್ಯದಲ್ಲಿ ಉಚಿತ ವ್ಯಾಕ್ಸಿನೇಷನ್ ನೀಡಲು ಸರ್ಕಾರ ನಿರ್ಧರಿಸಿದೆ.

18ರಿಂದ 45 ವರ್ಷದೊಳಗಿನ ಜನರಿಗೆ ಸರ್ಕಾರ ಉಚಿತ ಲಸಿಕೆ ನೀಡಲಿದೆ. 1 ಕೋಟಿ 57 ಲಕ್ಷ ಜನರಿಗೆ ಇದರ ಸೌಲಭ್ಯ ಸಿಗಲಿದೆ. ಈ ಅಭಿಯಾನವನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ನಾಲ್ಕೈದು ದಿನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ: ಪಿಎಂ ಮೋದಿಗೆ ಸಿಎಂ ಬಿಎಸ್​ವೈ ಭರವಸೆ

ಮೇ 1ರಿಂದ ಭಾರತ ಸರ್ಕಾರವು 18ರಿಂದ 45 ವರ್ಷದೊಳಗಿನ ಜನರಿಗೆ ಕೊರೊನಾ ಲಸಿಕೆ ನೀಡಲು ಅನುಮೋದನೆ ನೀಡಿದೆ. ಅದರ ನಂತರ ಛತ್ತೀಸ್​ಗಢ ಮತ್ತು ಬಿಹಾರ ರಾಜ್ಯಗಳು ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿವೆ. ಈ ಅಭಿಯಾನದಲ್ಲಿ ರಾಜ್ಯ ಸರ್ಕಾರ 2 ನೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.