ETV Bharat / bharat

ಈ ಬಾರಿ 12ನೇ ತರಗತಿ ಪರೀಕ್ಷೆ ಬರೆಯಲಿದ್ದಾರೆ ಜಾರ್ಖಂಡ್ ಶಿಕ್ಷಣ ಸಚಿವ! - ಪರೀಕ್ಷೆ ಬರೆಯಲಿರುವ ಜಾರ್ಖಂಡ್​ ಶಿಕ್ಷಣ ಸಚಿವ

Education Minister to appear for intermediate exam: ಕೇವಲ 10ನೇ ತರಗತಿ ಪಾಸ್​ ಆಗಿರುವ ಜಾರ್ಖಂಡ್ ಶಿಕ್ಷಣ ಸಚಿವ ಜಗರ್​ನಾಥ್​​​ ಮಹ್ತೊ ಇದೀಗ 12ನೇ ತರಗತಿ(ಇಂಟರ್ ಮಿಡಿಯೇಟ್)​ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

Jagarnath Mahto intermediate examination

author img

By

Published : Jan 1, 2022, 10:35 PM IST

ರಾಂಚಿ(ಜಾರ್ಖಂಡ): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್​ ಸೊರೆನ್​​ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿರುವ 54 ವರ್ಷದ ಶಿಕ್ಷಣ ಸಚಿವ ಜಗರ್​ನಾಥ್​​​ ಮಹ್ತೊ ಇದೀಗ 12ನೇ ತರಗತಿ (ಇಂಟರ್​​ ಮಿಡಿಯೇಟ್)​​ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಮಹಾಮಾರಿ ಕೊರೊನಾದಿಂದಾಗಿ ಕಳೆದ ವರ್ಷ ಪರೀಕ್ಷೆ ತಪ್ಪಿಸಿಕೊಂಡಿದ್ದ ಸಚಿವರು, ಈ ಸಲ ಜಾರ್ಖಂಡ್​ ಅಕಾಡೆಮಿಕ್​ ಕೌನ್ಸಿಲ್​ ನಡೆಸುವ ಪರೀಕ್ಷೆಯಲ್ಲಿ ಹಾಜರಾಗಲಿದ್ದಾರೆ. ಜಾರ್ಖಂಡ್​ನ ದುಮ್ರಿ ಕ್ಷೇತ್ರದ ಶಾಸಕರಾಗಿರುವ ಇವರು, 10ನೇ ತರಗತಿ ಪಾಸ್​​ ಆಗಿದ್ದಾರೆ. 2019ರಲ್ಲಿ ಸೊರೆನ್​ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಇವರ ವಿರುದ್ಧ ಇನ್ನಿಲ್ಲದ ಟೀಕೆ ಕೇಳಿ ಬಂದಿತ್ತು.

'ಅಧ್ಯಯನಕ್ಕೆ ವಯಸ್ಸು ಮುಖ್ಯವಲ್ಲ'

ತಮ್ಮ ಶಿಕ್ಷಣದ ವಿರುದ್ಧ ವ್ಯಾಪಕ ಟೀಕೆ ಕೇಳಿ ಬರುತ್ತಿದ್ದಂತೆ ಸವಾಲಾಗಿ ಸ್ವೀಕರಿಸಿರುವ ಸಚಿವರು, ಹೆಚ್ಚಿನ ಶಿಕ್ಷಣ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಅಧ್ಯಯನಕ್ಕೆ ವಯಸ್ಸು ಮುಖ್ಯವಲ್ಲ ಎಂದು ಹೇಳಿರುವ ಅವರು, 2020ರಲ್ಲಿ ತಮ್ಮ ಸ್ವಕ್ಷೇತ್ರದ ಇಂಟರ್​ ಕಾಲೇಜ್​​ನಲ್ಲಿ ಪ್ರಥಮ ಪಿಯುಗೆ ಸೇರ್ಪಡೆಗೊಂಡಿದ್ದರು. ಆದರೆ, ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದ್ದ ಕಾರಣ ಬಹುದಿನಗಳ ಕಾಲ ಕೋಮಾದಲ್ಲಿ ಉಳಿದುಕೊಂಡಿದ್ದರು. ನಂತರ ಚೆನ್ನೈಗೆ ಕರೆದೊಯ್ದು ಯಶಸ್ವಿ ಶ್ವಾಸಕೋಶ ಕಸಿ ಮಾಡಿಸಲಾಯಿತು. 9 ತಿಂಗಳ ಕಾಲ ಚಿಕಿತ್ಸೆ ಪಡೆದುಕೊಂಡು ಮರಳಿ ಜಾರ್ಖಂಡ್​ಗೆ ಬಂದ ಅವರು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿರಿ: 'ಶಾಲಾ ಆವರಣದಲ್ಲಿ RSS ಕಾರ್ಯಕ್ರಮ ನಿಲ್ಲಿಸಿ'.. ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳ ಆಂದೋಲನ

ಹೆಚ್ಚು ಗಮನ ಸೆಳೆದ ಸಚಿವರು

ಜಾರ್ಖಂಡ್​ನಲ್ಲಿ ಕಳೆದ ಎರಡು ದಶಕಗಳಿಂದ ತಾತ್ಕಾಲಿಕವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ 65 ಸಾವಿರ ಶಿಕ್ಷಕರ ಸಮಸ್ಯೆ ಬಗೆಹರಿಸುವ ಮೂಲಕ ಹೆಚ್ಚು ಗಮನ ಸೆಳೆದಿರುವ ಅವರು, ಎಲ್ಲರಿಗೂ ಖಾಯಂ ನೇಮಕಾತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.