ETV Bharat / bharat

JEE - ಮೈನ್ಸ್​​ ಪರೀಕ್ಷೆ ಜು.25 ಕ್ಕೆ ಮುಂದೂಡಿಕೆ

author img

By

Published : Jul 20, 2022, 10:11 PM IST

ಜೆಇಇ ಮೈನ್ಸ್​ ಎರಡನೇ ಹಂತದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ.

ಜೆಇಇ ಮೈನ್ಸ್
ಜೆಇಇ ಮೈನ್ಸ್

ನವದೆಹಲಿ: ಜೆಇಇ ಮೈನ್ಸ್​ನ ಎರಡನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದೆ. ಜುಲೈ 21 ರ ಬದಲಿಗೆ ಜುಲೈ 25 ರಿಂದ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ಣಾಯಕ ಪರೀಕ್ಷೆಯನ್ನು ಮುಂದೂಡಲು ಎನ್​ಟಿಎ ಯಾವುದೇ ಕಾರಣವನ್ನು ನೀಡಿಲ್ಲ.

ಭಾರತದ ಹೊರಗಿನ 17 ನಗರಗಳು ಸೇರಿದಂತೆ ಸುಮಾರು 500 ನಗರಗಳಲ್ಲಿನ ವಿವಿಧ ಕೇಂದ್ರಗಳಲ್ಲಿ 6.29 ಲಕ್ಷ ಅಭ್ಯರ್ಥಿಗಳಿಗೆ ಜುಲೈ 25 ರಿಂದ ಜೆಇಇ-ಮೈನ್ಸ್​ನ ಎರಡನೇ ಹಂತದ ಪರೀಕ್ಷೆ ಪ್ರಾರಂಭವಾಗಲಿದೆ. ಪ್ರವೇಶ ಪತ್ರವನ್ನು ಗುರುವಾರದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು NTA ತಿಳಿಸಿದೆ.

ಇದನ್ನೂ ಓದಿ: ಇಂಗ್ಲೆಂಡ್​​ನಲ್ಲಿ ಅಜ್ಮೀರ್​​ ವಿದ್ಯಾರ್ಥಿ ನಾಪತ್ತೆ.. ವಿದೇಶಾಂಗ ಸಚಿವಾಲಯಕ್ಕೆ ತಂದೆ ಮನವಿ

ಈ ಮೊದಲು ಜುಲೈ 21 ರಿಂದ ಜುಲೈ 30 ರವರೆಗೆ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. NTA ಮೊದಲ ಹಂತದ ಪರೀಕ್ಷೆಯನ್ನು ಜೂನ್ 23 ರಿಂದ ಜೂನ್ 29 ರವರೆಗೆ ನಡೆಸಿತ್ತು. ಜುಲೈ 12 ರಂದು ಫಲಿತಾಂಶ ಪ್ರಕಟಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.