ಇತ್ತೀಚೆಗೆ ಬಿಡುಗಡೆಯಾದ JEE ಮೇನ್ಸ್ 2023 ಏಪ್ರಿಲ್ FAQ ಗಳ ಪ್ರಕಾರ (ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು), 2023 ರ ಜಂಟಿ ಪ್ರವೇಶ ಪರೀಕ್ಷೆಗೆ (JEE ಮುಖ್ಯ) ಕೈಬಿಡಲಾದ ಪ್ರಶ್ನೆಗಳಿಗೆ ಬೋನಸ್ ಅಂಕಗಳು ಪ್ರತ್ಯೇಕ ಮಾನದಂಡಗಳನ್ನು ಹೊಂದಿರುತ್ತದೆ ಎಂದು ತಿಳಿಸಿದೆ. ಪರಿಷ್ಕರಣೆಯಂತೆ, ಪರೀಕ್ಷೆಯ ಎ ವಿಭಾಗದಲ್ಲಿ ಪ್ರಶ್ನೆಯನ್ನು ಕೈಬಿಟ್ಟರೆ ಎಲ್ಲಾ ಅಭ್ಯರ್ಥಿಗಳು ಬೋನಸ್ ಅಂಕಗಳನ್ನು ಪಡೆಯುತ್ತಾರೆ. ಆದರೆ, ಪ್ರಶ್ನೆ ಬಿ ವಿಭಾಗದಿಂದ ಬಂದಿದ್ದರೆ ಬೋನಸ್ ಅಂಕಗಳನ್ನು ಪಡೆಯಲು ವಿದ್ಯಾರ್ಥಿಯು ಆ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿರಬೇಕು. ಐಐಟಿ ಹಾಗೂ ಐಐಎಂಗಳಲ್ಲಿ ಪ್ರವೇಶ ಪಡೆಯಲು ಈ ಪ್ರತಿಷ್ಠಿತ ಪರೀಕ್ಷೆಗಳನ್ನು ನಡೆಸುವ NTA FAQ ಅನ್ನು ಬಿಡುಗಡೆ ಮಾಡಿದೆ.
ಈ ಕುರಿತು ETV ಭಾರತ್‌ನೊಂದಿಗೆ ಮಾತನಾಡಿದ ಶಿಕ್ಷಣತಜ್ಞ ದೇವ್ ಶರ್ಮಾ, 2023 ರ JEE ಮುಖ್ಯ ಪರೀಕ್ಷೆಯ ಏಪ್ರಿಲ್ ಅವಧಿಯಿಂದ NTA ಹೊಸ ನೀತಿಯನ್ನು ಪರಿಚಯಿಸಿದೆ. ಹೊಸ ನೀತಿಯ ಪ್ರಕಾರ, ಎಲ್ಲಾ ಪರೀಕ್ಷಾರ್ಥಿಗಳು ಪತ್ರಿಕೆಯ ಎ ವಿಭಾಗದಲ್ಲಿ ಯಾವುದೇ ಪ್ರಶ್ನೆಯನ್ನು ಕೈಬಿಟ್ಟರೆ ಬೋನಸ್ ಅಂಕಗಳನ್ನು ಪಡೆಯುತ್ತಾರೆ. ಆದರೆ ಪತ್ರಿಕೆಯ ಬಿ ವಿಭಾಗದಲ್ಲಿ, ಪ್ರಶ್ನೆಯನ್ನು ಪ್ರಯತ್ನಿಸಿದ ಅಭ್ಯರ್ಥಿಗಳಿಗೆ ಮಾತ್ರ ಬೋನಸ್ ಅಂಕಗಳನ್ನು ನೀಡಲಾಗುತ್ತದೆ. ಎ ವಿಭಾಗದಲ್ಲಿ ಪ್ರತಿ ವಿದ್ಯಾರ್ಥಿಗೆ ನಾಲ್ಕು ಬೋನಸ್ ಅಂಕಗಳನ್ನು ನೀಡಲಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಅವರು ಪ್ರಯತ್ನಿಸಿದ್ದರೆ ಅಥವಾ ಇಲ್ಲದಿದ್ದರೆ ಎರಡೂ ಸಂದರ್ಭಗಳಲ್ಲಿ ಈ ನಾಲ್ಕು ಬೋನಸ್ ಅಂಕ ನೀಡಲಾಗುತ್ತದೆ.
ಜೆಇಇ ಮೇನ್ 2023 ರ ಜನವರಿ ಪರೀಕ್ಷೆಯ ಬಗ್ಗೆ ಎನ್‌ಟಿಎ ಹೊರಡಿಸಿದ ಈ FAQ ಗಳು ಬೋನಸ್ ಅಂಕಗಳನ್ನು ನೀಡುವ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಹೊಂದಿಲ್ಲ ಎಂದು ದೇವ್ ಶರ್ಮಾ ಹೇಳಿದರು. 2023 ರ ಜನವರಿಯಲ್ಲಿ ಜೆಇಇ ಮೇನ್ ತೆಗೆದುಕೊಂಡ ಅಭ್ಯರ್ಥಿಗಳಿಗೆ ಎನ್‌ಟಿಎ ಅಂಕಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೈಬಿಡಲಾದ ಪ್ರಶ್ನೆಗೆ ಅಂಕಗಳನ್ನು ನಿಗದಿಪಡಿಸುವ ನೀತಿ ಅಥವಾ ಮಾನದಂಡ ಯಾವುದು ಎಂಬುದನ್ನು ಎನ್‌ಟಿಎ ಇನ್ನೂ ಬಹಿರಂಗಪಡಿಸಿಲ್ಲ ಎಂದು ಅವರು ಹೇಳಿದರು.
JEE ಮೇನ್ಸ್ 2023ರ ಏಪ್ರಿಲ್ ಸೆಷನ್‌ನ ನೋಂದಣಿ ಪ್ರಕ್ರಿಯೆಯು ಮಾರ್ಚ್ 12, 2023 ರಂದು ಕೊನೆಗೊಳ್ಳುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ತಿಳಿಸಿದೆ. JEE ಮೇನ್ಸ್ 2023 ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಎಂಜಿನಿಯರಿಂಗ್ ಆಕಾಂಕ್ಷಿಗಳು jeemain.nta.nic.in ಲಾಗ್ ಇನ್ ಮಾಡಬಹುದು. JEE ಮೇನ್ಸ್ 2023 ಸೆಷನ್ 2 ಅನ್ನು ಏಪ್ರಿಲ್ 06, 08, 10, 11, ಮತ್ತು ಏಪ್ರಿಲ್ 12, 2023 ರಂದು ನಡೆಸಲಾಗುವುದು. ಏತನ್ಮಧ್ಯೆ, ಏಪ್ರಿಲ್ 13 ಮತ್ತು 15 ದಿನಾಂಕಗಳನ್ನು ರಿಸರ್ವ್ ಆಗಿಡಲಾಗಿದೆ.
JEE ಮೇನ್ಸ್ 2023 ರ ಸೆಷನ್ 2 ಮಾಹಿತಿ ಬುಲೆಟಿನ್ ಪ್ರಕಾರ, ಇದಕ್ಕಾಗಿ ಎಕ್ಸಾಮ್ ಸಿಟಿ ಸ್ಲಿಪ್ ಅನ್ನು ಮಾರ್ಚ್ ಮೂರನೇ ವಾರದಲ್ಲಿ ನೀಡಲಾಗುತ್ತದೆ. JEE ಮೇನ್ಸ್ 2023 ಸೆಷನ್ 1ರ ಪ್ರವೇಶ ಕಾರ್ಡ್ ಅನ್ನು ಮಾರ್ಚ್ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಜೆಇಇ ಫಲಿತಾಂಶ: 20 ಅಭ್ಯರ್ಥಿಗಳಿಗೆ 100ಕ್ಕೆ 100, ಟಾಪರ್ ಪಟ್ಟಿಯಲ್ಲಿಲ್ಲ ಹೆಣ್ಣು ಮಕ್ಕಳು!