ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭಾ ಸಚಿವಾಲಯದಲ್ಲಿ ನೌಕರರು, ಅಧಿಕಾರಿಗಳಿಗೆ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದನ್ನು ನಿಷೇಧಿಸಲಾಗಿದೆ. ವಿಧಾನಸಭೆ ಆಡಳಿತದ ಜಂಟಿ ಕಾರ್ಯದರ್ಶಿ ನರೇಂದ್ರ ಕುಮಾರ್ ಮಿಶ್ರಾ ಈ ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ ಸಚಿವಾಲಯದೊಳಗೆ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದನ್ನು ನಿಷೇಧಿಸಲಾಗಿದೆ.
ನೌಕರರು ಅಂತಹ ಬಟ್ಟೆಗಳನ್ನು ಧರಿಸಿ ಅಸೆಂಬ್ಲಿಗೆ ಬರುವಂತಿಲ್ಲ. ಸಚಿವಾಲಯದ ನಿರ್ದೇಶನದಂತೆ ಫಾರ್ಮಲ್ಸ್ ಬಟ್ಟೆಗಳ ಧರಿಸಿ ಆಗಮಿಸುವಂತೆ ತಿಳಿಸಲಾಗಿದೆ. ವಿಧಾನಸಭೆಯಲ್ಲಿ ಆಯಾ ಸಚಿವಾಲಯದೊಳಗೆ ಕಾರ್ಯ ನಿರ್ವಹಿಸುವ ನೌಕರರಿಗೆ ಈ ನಿಯಮ ಅನ್ವಯವಾಗಲಿದೆಯಂತೆ, ಅಲ್ಲದೇ ಆಯಾ ಸಚಿವಾಲಯ ತಿಳಿಸಿರುವ ಡ್ರೆಸ್ ಕೋಡ್ ಇದ್ದರೆ ಬಳಸಬಹುದಂತೆ. ಸಚಿವಾಲಯದ ಶಿಸ್ತು ಮತ್ತು ಘನತೆ ಕಾಪಾಡಲು ಈ ನಿಯಮ ಜಾರಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಅಲ್ಲದೇ ಒಂದು ವೇಳೆ ಟೀ-ಶರ್ಟ್ ಹಾಗೂ ಜೀನ್ಸ್ ತೊಟ್ಟು ವಿಧಾನಸಭೆಗೆ ಆಗಮಿಸಿದರೆ ಅಂತಹ ನೌಕರರಿಗೆ ನಿರ್ಬಂಧ ವಿಧಿಸಲಾಗುತ್ತದೆ. ಸಚಿವಾಲಯ ಘನತೆಗೆ ತಕ್ಕಂತಹ ಬಟ್ಟೆ ಧರಿಸಬೇಕು ಎಂದಿದ್ದಾರೆ.
ಓದಿ: ವಿಷಕಾರಿ ಮದ್ಯ ಸೇವಿಸಿ, 16 ಮಂದಿ ಸಾವು: 5 ಮಂದಿ ವಶಕ್ಕೆ ಪಡೆದು ವಿಚಾರಣೆ