ETV Bharat / bharat

ಜಯಲಲಿತಾ ಸಾವು ಪ್ರಕರಣ: ಶಶಿಕಲಾ, ಮಾಜಿ ಆರೋಗ್ಯ ಸಚಿವ, ಕಾರ್ಯದರ್ಶಿ ವಿರುದ್ಧ ಸರ್ಕಾರಕ್ಕೆ ವರದಿ - ತನಿಖಾ ಆಯೋಗದ ವರದಿ

ತಮಿಳುನಾಡು ಸರ್ಕಾರ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಸುತ್ತಲಿನ ಸನ್ನಿವೇಶಗಳ ಕುರಿತು ತನಿಖಾ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿತು.

Jayalalithaa death mystery  inquiry panel tells government  Jayalalithaa death case  Former Chief Minister Jayalalithaa case news  ಜಯಲಲಿತಾ ಸಾವು ಪ್ರಕರಣ  ತನಿಖಾ ಆಯೋಗದ ವರದಿ  ತಮಿಳುನಾಡು ಸರ್ಕಾರ ಮಾಜಿ ಮುಖ್ಯಮಂತ್ರಿ ಜಯಲಲಿತಾ
ಜಯಲಲಿತಾ ಸಾವು ಪ್ರಕರಣ
author img

By

Published : Oct 18, 2022, 1:37 PM IST

ಚೆನ್ನೈ(ತಮಿಳುನಾಡು): ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಪ್ರಕರಣದ ತನಿಖಾ ಸಮಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಇನ್ನು, ತನಿಖಾ ಸಮಿತಿಯು ದಿವಂಗತ ಜಯಲಲಿತಾ ಆಪ್ತ ವಿಕೆ ಶಶಿಕಲಾ, ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್, ಮಾಜಿ ಆರೋಗ್ಯ ಕಾರ್ಯದರ್ಶಿ ಕೆ ರಾಧಾಕೃಷ್ಣನ್ ಮತ್ತು ಚಿಕಿತ್ಸೆ ನೇತೃತ್ವ ವಹಿಸಿದ್ದ ಡಾ ಶಿವಕುಮಾರ್ ವಿರುದ್ಧ ದೋಷಾರೋಪ ಹೊರಿಸಿದೆ. ಮಂಗಳವಾರ ತಮಿಳುನಾಡು ಸರ್ಕಾರವು ಜಯಲಲಿತಾ ಸಾವಿನ ಸುತ್ತಲಿನ ಸನ್ನಿವೇಶಗಳ ಕುರಿತು ತನಿಖಾ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ಆಗಸ್ಟ್​ ಕೊನೆಯ ವಾರದಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಆರುಮುಗಸ್ವಾಮಿ ಆಯೋಗವು ಜಯಾ ಅವರ ಮಾಜಿ ಸಹಾಯಕಿ ವಿ.ಕೆ. ಶಶಿಕಲಾ ಮತ್ತು ಇತರರ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

Jayalalithaa death mystery  inquiry panel tells government  Jayalalithaa death case  Former Chief Minister Jayalalithaa case news  ಜಯಲಲಿತಾ ಸಾವು ಪ್ರಕರಣ  ತನಿಖಾ ಆಯೋಗದ ವರದಿ  ತಮಿಳುನಾಡು ಸರ್ಕಾರ ಮಾಜಿ ಮುಖ್ಯಮಂತ್ರಿ ಜಯಲಲಿತಾ
ಜಯಲಲಿತಾ ಸಾವು ಪ್ರಕರಣ

ನಿವೃತ್ತ ನ್ಯಾ ಆರುಮುಗಸಾಮಿ ಆಯೋಗದ ವರದಿಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಆಗಸ್ಟ್​ 29ರಂದು ಮಂಡಿಸಲಾಗಿದ್ದು, ವರದಿ ಕುರಿತು ಕಾನೂನು ಅಭಿಪ್ರಾಯ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಗಮನಾರ್ಹ ಅಂಶ ಎಂದರೆ, 2021 ರ ಚುನಾವಣಾ ಪ್ರಚಾರದ ಸಮಯದಲ್ಲಿ ಸ್ಟಾಲಿನ್, ಡಿಎಂಕೆ ಅಧಿಕಾರಕ್ಕೆ ಬಂದರೆ ಜಯಲಲಿತಾ ಸಾವಿನ ಬಗ್ಗೆ ಹಾಗೂ ಆಸ್ಪತ್ರೆಯಲ್ಲಿ ನಡೆದ ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಘೋಷಿಸಿದ್ದರು.

ಓದಿ: ಜಯಲಲಿತಾ ಸಾವಿನ ವಿಚಾರ.. ಶಶಿಕಲಾ ವಿರುದ್ಧ ತನಿಖೆಗೆ ಆಯೋಗದ ಶಿಫಾರಸು.. ಒಪಿಎಸ್​​​ ಬಣಕ್ಕೆ ಹಿನ್ನಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.