ETV Bharat / bharat

ಉತ್ತರ ಪ್ರದೇಶದ 30 ಪ್ರಮುಖ ನಗರಗಳಲ್ಲಿ ಹೋಟೆಲ್‌ ತೆರೆಯಲಿರುವ ಎಚ್​ಎಂಐ ಕಂಪನಿ - etv bharat karnataka

ಗ್ಲೋಬಲ್ ಇನ್ವೆಸ್ಟರ್ಸ್ ಸಮ್ಮಿಟ್ 2023 - ಉತ್ತರ ಪ್ರದೇಶ ಸರ್ಕಾರದೊಂದಿಗೆ ಜಪಾನ್​ನ ಎಚ್​ಎಂಐ ಕಂಪನಿ 7200 ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದ.

Global Investors Summit 2023
ಜಾಗತಿಕ ಹೂಡಿಕೆದಾರರ ಶೃಂಗಸಭೆ 2023:ಉತ್ತರ ಪ್ರದೇಶದ 30 ಪ್ರಮುಖ ನಗರಗಳಲ್ಲಿ ಹೋಟೆಲ್‌ ತೆರೆಯಲಿರುವ ಎಚ್​ಎಂಐ ಕಂಪನಿ..
author img

By

Published : Feb 11, 2023, 8:32 PM IST

ಲಖನೌ(ಉತ್ತರ ಪ್ರದೇಶ): ಜಪಾನ್​ನ ಪ್ರಸಿದ್ಧ ಹೋಟೆಲ್ ಗ್ರೂಪ್ ಹೋಟೆಲ್ ಮ್ಯಾನೇಜ್ ಮೆಂಟ್ ಇಂಟರ್ ನ್ಯಾಷನಲ್ ಕಂಪನಿ ಲಿಮಿಟೆಡ್ (ಎಚ್ ಎಂಐ) ಉತ್ತರ ಪ್ರದೇಶದಲ್ಲಿ 30 ಹೊಸ ಹೋಟೆಲ್​ಗಳನ್ನು ಸ್ಥಾಪಿಸಲಿದೆ. ಲಖನೌದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಎರಡನೇ ದಿನದಂದು, ಜಪಾನಿನ ಕಂಪನಿಯು ಈ ನಿಟ್ಟಿನಲ್ಲಿ 7,200 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ: ಜಪಾನ್​ನ ಪ್ರಮುಖ ನಗರಗಳಲ್ಲಿ 60 ಕ್ಕೂ ಹೆಚ್ಚು ಹೋಟೆಲ್ ಗಳನ್ನು ನಿರ್ವಹಿಸುತ್ತಿರುವ ಎಚ್​ಎಂಐ ಗ್ರೂಪ್​ನ ಸಾರ್ವಜನಿಕ ಸಂಪರ್ಕ ನಿರ್ದೇಶಕ ತಕಾಮೊಟೊ ಯೊಕೊಯಾಮಾ ಮಾತನಾಡಿ , ಉತ್ತರ ಪ್ರದೇಶದ ಪ್ರವಾಸೋದ್ಯಮ ಹೆಚ್ಚಿಸುವುದಕ್ಕಾಗಿ ಮಾಡುತ್ತಿರುವ ಪ್ರಯತ್ನಗಳು ಹೋಟೆಲ್ ಉದ್ಯಮಕ್ಕೆ ಅಪಾರ ಅವಕಾಶವನ್ನು ಸೃಷ್ಟಿಸಿವೆ. ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಅಭಿವೃದ್ಧಿಯ ನಂತರ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಇದು ನಮಗೆ ಅನುಕೂಲಕರ ಅವಕಾಶವಾಗಿದೆ. ಯುಪಿಯ ಕೈಗಾರಿಕಾ ನೀತಿಗಳು ಎಚ್ಎಂಐ ಗುಂಪನ್ನು ಉತ್ತೇಜಿಸಲಿವೆ. ಹೀಗಾಗಿ ಎಚ್ಎಂಐ ಗ್ರೂಪ್ ತನ್ನ ಹೋಟೆಲ್ ಸರಪಳಿಯನ್ನು ಆಗ್ರಾ, ವಾರಾಣಸಿ ಮತ್ತು ಅಯೋಧ್ಯಾ ಸೇರಿದಂತೆ 30 ಪ್ರಮುಖ ಸ್ಥಳಗಳಿಗೆ ವಿಸ್ತರಿಸಲಿದೆ. ಇದು ಇಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳೂ ಸೃಷ್ಟಿ ಮಾಡಲಿದೆ’’ ಎಂದರು.

ಇದಕ್ಕೂ ಮುನ್ನ ದಧಿಚಿ ಸಭಾಂಗಣದಲ್ಲಿ ನಡೆದ ಉತ್ತರ ಪ್ರದೇಶದಲ್ಲಿ ಜಪಾನ್ ಮತ್ತು ಭಾರತದ ನಡುವೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಭಾಗಿತ್ವದ ಅನುಷ್ಠಾನ ಕುರಿತ ಮಹತ್ವದ ಗೋಷ್ಠಿ ನಡೆಯಿತು. 2015ರಲ್ಲಿ ಆಗಿನ ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆ ಭೇಟಿ ನೀಡಿದ್ದರೆ, 2016ರಲ್ಲಿ ಪ್ರಧಾನಿ ಮೋದಿ ಜಪಾನ್​ಗೆ ಭೇಟಿ ನೀಡಿದ್ದರು. 2017 ರಲ್ಲಿ ಶಿಂಜೋ ಅಬೆ ಅಹಮದಾಬಾದ್​ಗೆ ಆಗಮಿಸಿದಾಗ ಹೈಸ್ಪೀಡ್ ರೈಲುಗಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಯಿತು. ನಂತರ 2018 ರಲ್ಲಿ ಪ್ರಧಾನಿ ಮೋದಿ ಮತ್ತೆ ಜಪಾನ್​ಗೆ ತೆರಳಿದ್ದರು ಎಂದು ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಉಭಯ ದೇಶಗಳ ನಡುವೆ ಆಳವಾದ ವಿಶ್ವಾಸ: ಈ ಉನ್ನತ ನಾಯಕರ ಭೇಟಿಗಳು ಉಭಯ ದೇಶಗಳ ನಡುವೆ ಆಳವಾದ ವಿಶ್ವಾಸ ಮೂಡಿಸುವಲ್ಲಿ ನೆರವಾಗಿವೆ. ಇದು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಆರೋಗ್ಯ, ಇಂಧನ, ಲಾಜಿಸ್ಟಿಕ್ಸ್, ಹೋಟೆಲ್, ಕೃತಕ ಬುದ್ಧಿಮತ್ತೆ, ಜವಳಿ, ಉಕ್ಕು, ರಿಯಲ್ ಎಸ್ಟೇಟ್, ಚರ್ಮ ಇತ್ಯಾದಿ ಕ್ಷೇತ್ರಗಳಲ್ಲಿ ಹೂಡಿಕೆಯಲ್ಲಿ ಅಭೂತಪೂರ್ವ ಹೆಚ್ಚಳ ಕಂಡುಬಂದಿದೆ. ಗ್ರೇಟರ್ ಉತ್ತರ ಪ್ರದೇಶವೂ ಇದರಿಂದ ಪ್ರಯೋಜನ ಪಡೆಯುತ್ತಿದೆ. ಗ್ರೇಟರ್ ನೋಯ್ಡಾದಲ್ಲಿ ಜಪಾನ್ ಇಂಡಸ್ಟ್ರಿಯಲ್ ಟೌನ್ ಶಿಪ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಜೆವಾರ್ ವಿಮಾನ ನಿಲ್ದಾಣವು ಜಾಗತಿಕ ವ್ಯಾಪಾರದ ದೃಷ್ಟಿಕೋನದಿಂದ ಬಹಳ ಉಪಯುಕ್ತ: ಈ ಸಂದರ್ಭದಲ್ಲಿ, ಯಮನಾಶಿ ಹೈಡ್ರೋಜನ್ ಕಂಪನಿಯ ಅಧ್ಯಕ್ಷ ಯಮನಾಶಿ ಶಿಮಿಜು ಅವರು ಭಾರತ ಮತ್ತು ಜಪಾನ್‌ನ ಪ್ರಾಚೀನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಲ್ಲೇಖಿಸಿ ಉಭಯ ದೇಶಗಳ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಒತ್ತಿ ಹೇಳಿದರು. ಆಳವಾದ ಅಧ್ಯಯನ ಮಾಡದೇ ವ್ಯವಹಾರ ಒಪ್ಪಂದ ಮಾಡಿಕೊಳ್ಳದಿರುವುದು ಜಪಾನ್ ಕಂಪನಿಗಳ ವಿಶೇಷತೆ ಎಂದ ಅವರು, ಒಮ್ಮೆ ಹೂಡಿಕೆಗೆ ಹೆಜ್ಜೆ ಇಟ್ಟರೆ ಖಂಡಿತಾ ಗಡುವಿನ ಪ್ರಕಾರ ಪೂರ್ಣಗೊಳಿಸುತ್ತಾರೆ. ಅವರ ಕಂಪನಿಯು ಹೈಡ್ರೋಜನ್ ಶಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ ಮತ್ತು ಉತ್ತರಪ್ರದೇಶದಲ್ಲಿ ದೊಡ್ಡ ಯೋಜನೆಗೆ ತಯಾರಿ ನಡೆಸುತ್ತಿದೆ. ಆದರೆ ನಿರ್ಮಾಣ ಹಂತದಲ್ಲಿರುವ ಜೆವಾರ್ ವಿಮಾನ ನಿಲ್ದಾಣವು ಜಾಗತಿಕ ವ್ಯಾಪಾರದ ದೃಷ್ಟಿಕೋನದಿಂದ ಬಹಳ ಉಪಯುಕ್ತವಾಗಿದೆ ಎಂದು ಶಿಮಿಜು ಹೇಳಿದರು.

ಇದನ್ನೂ ಓದಿ:ಆರ್‌ಬಿಐ ಅದಾನಿ - ಹಿಂಡೆನ್‌ಬರ್ಗ್ ಪರಿಣಾಮ ನಿಭಾಯಿಸಲು ತುದಿಗಾಲಲ್ಲಿ ನಿಂತಿದೆ: ಸೀತಾರಾಮನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.