ETV Bharat / bharat

ಗೃಹ ಮಾಲಿನ್ಯದಿಂದಲೇ ವರ್ಷಕ್ಕೆ ಕಾಶ್ಮೀರದಲ್ಲಿ 3000 ಜನರ ಸಾವು: ಅಧ್ಯಯನ - ETV Bharath Kannada

ಒಂದು ಅಧ್ಯಯನದ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಲಿನ್ಯದಿಂದಾಗಿ ಪ್ರತಿ ವರ್ಷ 10,497 ಜನರು ಸಾವನ್ನಪ್ಪುತ್ತಾರೆ. ಅದರಲ್ಲಿ ಗೃಹ ಮಾಲಿನ್ಯದಿಂದ ಸುಮಾರು 3,457 ಜನ ಸಾವನ್ನಪ್ಪುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

Jammu and Kashmir  more than 3000 people die every year due to household pollution
ಗೃಹ ಮಾಲಿನ್ಯದಿಂದಲೇ ವರ್ಷಕ್ಕೆ 3000 ಜನರ ಸಾವು: ಅಧ್ಯಯನ
author img

By

Published : Dec 13, 2022, 10:12 AM IST

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಗೃಹ ಮಾಲಿನ್ಯದಿಂದ ಜಮ್ಮು ಮತ್ತು ಕಾಶ್ಮೀರ ಪ್ರತಿ ವರ್ಷ 3,000 ಸಾವಿರ ಜನ ಸಾವನ್ನಪ್ಪುತ್ತಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಶ್ವಾಸಕೋಶ ಕಾಯಿಲೆ ಕುರಿತು 2017ರಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಲಿನ್ಯದಿಂದಾಗಿ ಪ್ರತಿ ವರ್ಷ 10,497 ಜನರು ಸಾಯುತ್ತಾರೆ. ಅದರಲ್ಲಿ 5,822 ಜನರು ವಾಯು ಮಾಲಿನ್ಯದಿಂದ ಮತ್ತು 3,457 ಜನರು ಗೃಹ ಮಾಲಿನ್ಯದಿಂದ ಸಾವನ್ನಪ್ಪುತ್ತಾರೆ ಎಂದು ತಿಳಿದುಬಂದಿದೆ. ಮರ, ಎಲೆಗಳು, ಸಗಣಿ ಸುಡುವುದರಿಂದ ಮತ್ತು ಸೀಮೆಎಣ್ಣೆ ಸ್ಟೌವ್ ಬಳಕೆಯಿಂದ ಗೃಹ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ತಿಳಿದು ಬಂದಿದೆ. ​

ಮಾಲಿನ್ಯದಿಂದ ಶ್ವಾಸಕೋಶದ ಕಾಯಿಲೆಗಳು ಹೆಚ್ಚಾಗುತ್ತಿವೆ. ಆಸ್ತಮಾ, ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಸ್ತನ ರೋಗಗಳು ಹೆಚ್ಚಾಗುತ್ತಿವೆ. ಸಮೀಕ್ಷೆಯ ಪ್ರಕಾರ, ಶ್ರೀನಗರ ವಿಶ್ವದ 50 ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ. ಇಲ್ಲಿನ ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣವೆಂದರೆ ಇಟ್ಟಿಗೆ ಗೂಡುಗಳು, ಸಿಮೆಂಟ್ ಕಾರ್ಖಾನೆಗಳು, ವಾಹನಗಳ ಅತಿಯಾದ ಬಳಕೆ, ರಸ್ತೆಗಳ ದುಸ್ಥಿತಿ, ಅಸಮರ್ಪಕ ಒಳಚರಂಡಿ ವ್ಯವಸ್ಥೆ ಮತ್ತು ಮನೆಗಳಲ್ಲಿನ ಹೊಗೆ ಇತ್ಯಾದಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಶ್ಮೀರದ ತುಬಲ್​ ಪ್ರದೇಶದಲ್ಲಿ ಐಇಡಿ ಸ್ಫೋಟಕ ವಸ್ತು ಪತ್ತೆ: ಬಿಡಿಎಸ್​ ಕಾರ್ಯಾಚರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.