ETV Bharat / bharat

₹10 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ ಕಾಶ್ಮೀರದ ಕ್ಯಾಬ್‌ ಚಾಲಕ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ ಜಿಲ್ಲೆಯ ಪಹಲ್ಗಾಮ್​ನಲ್ಲಿ ಹೈದರಾಬಾದ್​ ಪ್ರವಾಸಿಗರು ಮರೆತು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕ್ಯಾಬ್​​ ಚಾಲಕ ಮರಳಿಸಿದ್ದಾರೆ.

jammu-and-kashmir-cab-driver-of-pahalgam-returns-lost-gold-to-hyderabad-tourist
ಕ್ಯಾಬ್​ನಲ್ಲಿ ಪ್ರವಾಸಿಗರು ಮರೆತು ಹೋಗಿದ್ದ 10 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ ಕಾಶ್ಮೀರದ ಚಾಲಕ
author img

By

Published : Dec 6, 2022, 4:02 PM IST

ಅನಂತನಾಗ್​ (ಜಮ್ಮು ಮತ್ತು ಕಾಶ್ಮೀರ): ಕ್ಯಾಬ್​​ನಲ್ಲಿ ಪ್ರವಾಸಿಗರು ಮರೆತು ಹೋಗಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಜಮ್ಮು ಮತ್ತು ಕಾಶ್ಮೀರದ ಚಾಲಕರೊಬ್ಬರು ಮರಳಿ ಅದರ ವಾರಸುದಾರರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೈದರಾಬಾದ್​​ನಿಂದ ಪ್ರವಾಸಿಗರು ಅನಂತನಾಗ್​ ಜಿಲ್ಲೆಯ ಪಹಲ್ಗಾಮ್​ಗೆ ಪ್ರವಾಸಕ್ಕೆಂದು ಬಂದಿದ್ದರು. ಈ ಸಂದರ್ಭದಲ್ಲಿ ಅವರು ಟ್ಯಾಕ್ಸಿ ಚಾಲಕ ಆಕಾಶ್ ಫಾರೂಕ್​​ ವಾನಿ ಎಂಬವರ ಕಾರಿನಲ್ಲಿ ಸುತ್ತಾಡಿದ್ದಾರೆ. ಕಾರು ಇಳಿದು ಹೋಗಬೇಕಾದರೆ ಪ್ರವಾಸಿಗರು ತಮ್ಮ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು ಎಂದು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್​ ರಶೀದ್​ ವಾನಿ ತಿಳಿಸಿದ್ದಾರೆ.

ನಂತರ ಇದರ ಮಾಹಿತಿ ಪಡೆದ ಚಾಲಕ ಆಕಾಶ್ ಫಾರೂಕ್​​ ವಾನಿ ತಮ್ಮ ಕಾರಿನಲ್ಲಿ ಪರಿಶೀಲಿಸಿದಾಗ ಚಿನ್ನಾಭರಣವನ್ನು ಗಮನಿಸಿದ್ದಾರೆ. ಅಲ್ಲಿಂದ ಪ್ರವಾಸಿಗರಿಗೆ ಮಾಹಿತಿ ನೀಡಿದ್ದು, ಅವರು ಶ್ರೀನಗರ ವಿಮಾನ ನಿಲ್ದಾಣದಿಂದ ಮರಳಿ ಬಂದು ಚಿನ್ನಾಭರಣ ಪಡೆದುಕೊಂಡಿದ್ದಾರೆ. ಅಲ್ಲದೇ, ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಮರಳಿಸಿದ್ದಕ್ಕೆ ಪ್ರವಾಸಿಗರು ಖುಷಿ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ರಶೀದ್​ ವಾನಿ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಕಿ ಜೊತೆ ಸರಸ ಬೇಡ ಅಂದರೂ ಛಲ ಬಿಡದ ಗಟ್ಟಿಗಿತ್ತಿ; ದೇಶದ ಮೊದಲ ಮಹಿಳಾ ಫೈರ್​ ಫೈಟರ್​ ಈ ಹರ್ಷಿಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.