ETV Bharat / bharat

ಗಡಿ ದಾಟುತ್ತಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ - ಜಮ್ಮು ಕಾಶ್ಮೀರ

ಪೂಂಚ್​ನಲ್ಲಿ ಸೇನೆ ಮತ್ತು ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ 2 ಭಯೋತ್ಪಾದ ನುಸುಳುಕೋರರನ್ನು ಹೊಡೆದುರುಳಿಸಿವೆ.

ನುಸುಳುಕೋರ ಉಗ್ರರು ಹತ
ನುಸುಳುಕೋರ ಉಗ್ರರು ಹತ
author img

By

Published : Aug 7, 2023, 9:50 AM IST

ಪೂಂಚ್ (ಜಮ್ಮು ಮತ್ತು ಕಾಶ್ಮೀರ): ದೇಶದ ಗಡಿ ಭಾಗದಲ್ಲಿ ನುಸುಳುಕೋರ ಉಗ್ರರನ್ನು ಮಟ್ಟಹಾಕಲು ಪೊಲೀಸ್​ ಮತ್ತು ಭದ್ರತಾ ಪಡೆಯಿಂದ ಜಂಟಿ ಕಾರ್ಯಚರಣೆ ಮುಂದುವರೆದಿದೆ. ಸೋಮವಾರ ಪೂಂಚ್​​ನಲ್ಲಿ ಮತ್ತಿಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಒಟ್ಟು 7 ಉಗ್ರ ನುಸುಳುಕೋರರು ಭಾರತವನ್ನು ಪ್ರವೇಶಿಸಲು ಮುಂದಾಗಿದ್ದ ವೇಳೆ ಈ ಕಾರ್ಯಾಚರಣೆ ನಡೆದಿದೆ.

ನುಸುಳುಕೋರರ ಯತ್ನವನ್ನು ವಿಫಲಗೊಳಿಸುವಲ್ಲಿ ಭದ್ರತಾ ಪಡೆ, ಕಾಶ್ಮೀರಿ ವಲಯದ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಉಳಿದ ಭಯೋತ್ಪಾದಕರ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಗ್ವಾರ್ ಸೆಕ್ಟರ್‌ನಲ್ಲಿ ಭಯೋತ್ಪಾದಕರ ಚಲನವಲನವನ್ನು ಗಮನಿಸಿದಾಗ, ಭಾರತದ ಕಡೆಗೆ ನುಸುಳಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಆಗಲೇ ಅಲರ್ಟ್​ ಆದ ನಮ್ಮ ಸೈನ್ಯ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ, ಗುಂಡಿನ ದಾಳಿ ನಡೆದಿದ್ದು, ಭದ್ರತಾ ಪಡೆಯ ದಾಳಿಗೆ ಒಬ್ಬ ಭಯೋತ್ಪಾದಕ ತಕ್ಷಣವೇ ಕೆಳಗೆ ಬಿದ್ದಿದ್ದಾನೆ. ಇನ್ನೊಬ್ಬ ನಿಯಂತ್ರಣ ರೇಖೆ ಕಡೆ ಹಿಂತಿರುಗಲು ಪ್ರಯತ್ನಿಸಿದ್ದಾನೆ. ಆಗಲೇ ಆತನ ಮೇಲು ಗುಂಡು ಹಾರಿಸಲಾಗಿದ್ದು, ನಿಯಂತ್ರಣ ರೇಖೆ ಬಳಿಯೆ ಬಿದ್ದಿರುವುದು ಕಂಡು ಬಂದಿದೆ. ಅಲ್ಲಿ ಸೇನಾ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಭಾರತೀಯ ಸೇನಾ ಪಡೆ ಮೂಲಗಳು ತಿಳಿಸಿವೆ.

ಮತ್ತೊಂದು ಕಡೆ ಜಮ್ಮುವಿನ ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಈ ಎನ್​​​ಕೌಂಟರ್​​​​​ಗಳ ಬಗ್ಗೆ ಮಾತನಾಡಿದ್ದಾರೆ. ಸೇನೆಯು ಗರ್ಹಿ ಬೆಟಾಲಿಯನ್ ಪ್ರದೇಶದಲ್ಲಿ ಮುಂಜಾನೆ 2 ಗಂಟೆ ಸುಮಾರಿಗೆ ಭಯೋತ್ಪಾದಕರ ಚಲನ ವಲನಗಳನ್ನು ಗಮನಿಸಲಾಗುತ್ತು. ದೆಗ್ವಾರ್ ಟೆರ್ವಾ ಸಾಮಾನ್ಯ ಪ್ರದೇಶದಲ್ಲಿ ನಿಯಂತ್ರಣ ರೇಖೆ ಬಳಿ ಇಬ್ಬರು ವ್ಯಕ್ತಿಗಳು ಚಲಿಸುತ್ತಿರುವುದು ಸೇನಾ ಗಸ್ತುಪಡೆಗಳ ಗಮನಕ್ಕೆ ಬಂದಿತ್ತು. ಹೀಗಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ಸೇನೆ, ಆ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಿತ್ತು. ಈಗಲೂ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಪ್ವಾರದಲ್ಲೂ ಭಯೋತ್ಪಾದಕನ ಎನ್​ಕೌಂಟರ್​: ಉತ್ತರ ಕಾಶ್ಮೀರದ ತಂಗ್‌ಧಾರ್ ಸೆಕ್ಟರ್‌ ಗಡಿಯಲ್ಲಿ ಭಾನುವಾರ ಭಾರತದೊಳಗೆ ನುಸುಳಲು ಯತ್ನಿಸಿದ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್​ ಮಾಡಿದ್ದರು. ಗಡಿ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿಯಾಗಿ ತಂಗ್‌ಧರ್‌ನ ಅಮ್ರೋಹಿ ಪ್ರದೇಶದಲ್ಲಿ ನಡೆಸಿದ ಕಾರ್ಯಚರನೆಯಲ್ಲಿ ಒಳನುಸುಳಲು ಯತ್ನಿಸಿದ ಉಗ್ರನನ್ನು ಹತ್ಯೆ ಮಾಡಲಾಗಿತ್ತು. ಹತ ಉಗ್ರನಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಕುಪ್ವಾರದಲ್ಲಿ ಗಡಿ ದಾಟಲು ಯತ್ನಿಸಿದ ಪಾಕ್‌ ಉಗ್ರನ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.