ಜಮ್ಮು ಮತ್ತು ಕಾಶ್ಮೀರ: ಭಯೋತ್ಪಾದನೆಗೆ ಧನಸಹಾಯ ಮತ್ತು ಬೆದರಿಕೆಯೊಡ್ಡಿದ ಆರೋಪದ ಮೇಲೆ ನಾಲ್ವರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಇದರಲ್ಲಿ ಉಗ್ರ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಅವರ ಪುತ್ರ ಕೂಡ ಇದ್ದಾನೆ. ಜಮ್ಮು ಕಾಶ್ಮೀರ ಆಡಳಿತ ಈ ಬಗ್ಗೆ ಆದೇಶ ಹೊರಡಿಸಿದೆ.
ಐಎಎಸ್ ಕೇಡರ್ ಮಾದರಿ ಅಧಿಕಾರಿಯಾಗಿ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುತ್ತಿದ್ದ ಬಿಟ್ಟಾ ಕರಾಟೆ ಪತ್ನಿ ಅಸ್ಸಾಬಾ ಉಕ್ ಅರ್ಜಮಂದ್ ಖಾನ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಪುತ್ರ ಸೈಯದ್ ಅಬ್ದುಲ್ ಮುಯೀದ್, ಕಾಶ್ಮೀರ ವಿಶ್ವವಿದ್ಯಾನಿಲಯದ ಹಿರಿಯ ಸಹಾಯಕ ಪ್ರಾಧ್ಯಾಪಕ ಮಾಜಿದ್ ಹುಸೇನ್ ಖಾದ್ರಿ ಮತ್ತು ಹಿರಿಯ ವಿಜ್ಞಾನಿ ಮುಹೀತ್ ಅಹ್ಮದ್ ಭಟ್ ಎಂಬವರನ್ನು ವಜಾಗೊಳಿಸಲಾಗಿದೆ.
ವಜಾಗೊಂಡ ಉದ್ಯೋಗಿಗಳು ಭಯೋತ್ಪಾದನೆಗೆ ನೆರವು ಮತ್ತು ಆಡಳಿತಕ್ಕೆ ಬೆದರಿಕೆಯೊಡ್ಡಿದ್ದರು. ಎಲ್ಲಾ ನಾಲ್ವರು ಅಧಿಕಾರಿಗಳನ್ನು ಸಂವಿಧಾನದ 311 ನೇ ವಿಧಿಯಡಿ ವಜಾಗೊಳಿಸಲಾಗಿದೆ. ಈ ವಿಧಿಯು ಸರ್ಕಾರ ತನ್ನ ನೌಕರರನ್ನು ವಿಚಾರಣೆಯಿಲ್ಲದೆ ವಜಾ ಮಾಡುವ ಪರಮಾಧಿಕಾರ ನೀಡಿದೆ.
ಇದನ್ನೂ ಓದಿ: ನಾವು ಸರ್ಕಾರ ನಡೆಸುತ್ತಿಲ್ಲ, ಮ್ಯಾನೇಜ್ಮೆಂಟ್ ಮಾಡುತ್ತಿದ್ದೇವೆ.. ಹೀಗಂದ್ರಾ ಸಚಿವ ಮಾಧುಸ್ವಾಮಿ?