ಲಕ್ನೋ: ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ 2021 ರ ಅಂಗೀಕಾರ ಸ್ವಾಗತಾರ್ಹ ಎಂದು ಜಮಿಯತ್ ಉಲೇಮಾ ಇ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷ ಮಹ್ಮದ್ ಮದನಿ ಬಣ್ಣಿಸಿದ್ದಾರೆ. ಜಾರ್ಖಂಡ್ನಂತೆ ಇತರ ರಾಜ್ಯಗಳು ಸಹ ಮುಂದೆ ಬಂದು ಇಂತಹ ಕಾನೂನುಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದು, ಇದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗದವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದಿದ್ದಾರೆ.
ಗುಂಪು ಹತ್ಯೆ ವಿರೋಧಿ ಮಸೂದೆ ಅಂಗೀಕಾರವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಸ್ಥಾಪಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಧರ್ಮನಿಂದನೆ ಆರೋಪ: ಲಂಕಾ ವ್ಯಕ್ತಿಯ ಹತ್ಯೆಗೈದು ಸುಟ್ಟುಹಾಕಿದ ಗುಂಪುಗಳು
ಇತ್ತೀಚಿನ ವರ್ಷಗಳಲ್ಲಿ ಜಾರ್ಖಂಡ್ ಮತ್ತು ಇತರ ರಾಜ್ಯಗಳಲ್ಲಿ ನಡೆದ ಗುಂಪು ಹತ್ಯೆಯ ಹಲವಾರು ಘಟನೆಗಳು ಮುಸ್ಲಿಂ ಸಮುದಾಯ ಮತ್ತು ದಲಿತರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ಇಂತಹ ಹಲವಾರು ಘಟನೆಗಳಲ್ಲಿ ದುಷ್ಕರ್ಮಿಗಳು ಥಳಿತದ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿಯೂ ಅಪ್ಲೋಡ್ ಮಾಡುತ್ತಿದ್ದರು. ಈ ವಿಡಿಯೋ ಪ್ರಸಾರವು ಅಲ್ಪಸಂಖ್ಯಾತ ಸಮುದಾಯದಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.