ETV Bharat / bharat

ಬುಲ್ಡೋಜರ್​ ರಾಜಕಾರಣದ ವಿರುದ್ಧ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಜಮೀಯತ್ ಉಲೇಮಾ-ಎ-ಹಿಂದ್ - ಮೌಲಾನಾ ಅರ್ಷದ್ ಮದನಿ

ಕಳೆದ ಕೆಲ ದಿನಗಳಿಂದ ದೇಶದಲ್ಲಿ ನಡೆಯುತ್ತಿರುವ ದ್ವೇಷ ಮತ್ತು ಮತೀಯವಾದದ ಅನಾಗರಿಕ ವರ್ತನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೌಲಾನಾ ಅರ್ಷದ್ ಮದನಿ, ದೇಶದಾದ್ಯಂತ ಧಾರ್ಮಿಕ ಉಗ್ರವಾದ ಮತ್ತು ದ್ವೇಷದ ಕರಾಳ ಗಾಳಿ ಬೀಸುತ್ತಿದ್ದು, ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಮುಸ್ಲಿಮರಲ್ಲಿ ಭಯ ಸೃಷ್ಟಿಸಿದೆ ಎಂದಿದ್ದಾರೆ.

Maulana Arshad Madani
ಮೌಲಾನಾ ಅರ್ಷದ್ ಮದನಿ
author img

By

Published : Apr 18, 2022, 9:19 AM IST

ನವದೆಹಲಿ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಮರನ್ನು ದಮನಿಸಲು ಆರಂಭಿಸಿರುವ ಬುಲ್ಡೋಜರ್ ರಾಜಕಾರಣದ ವಿರುದ್ಧ ಜಮೀಯತ್ ಉಲೇಮಾ-ಎ-ಹಿಂದ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇಂದಿನ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಮೌಲಾನಾ ಅರ್ಷದ್ ಮದನಿ, ಅಲ್ಪಸಂಖ್ಯಾತರು ಮಾತ್ರವಲ್ಲದೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವು ಇಂದು ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವಂತೆ, ಭಾರತೀಯ ಮುಸ್ಲಿಮರ ಪ್ರಾತಿನಿಧಿಕ ಸಂಸ್ಥೆಯಾದ ಜಮಿಯತ್ ಉಲೇಮಾ-ಇ-ಹಿಂದ್, ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ತಡೆಯಲು ಮೌಲಾನಾ ಅರ್ಷದ್ ಮದನಿ ಅವರ ವಿಶೇಷ ನಿರ್ದೇಶನದ ಮೇರೆಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ರಾಜಕಾರಣ ನಡೆಯುತ್ತಿದೆ. ಇದೀಗ ಗುಜರಾತ್, ಮಧ್ಯಪ್ರದೇಶದಲ್ಲೂ ಈ ಸರಣಿ ಶುರುವಾಗಿದ್ದು, ಗಲಭೆಗಳ ನಂತರ, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಏಕಪಕ್ಷೀಯ ಕ್ರಮದಲ್ಲಿ ಮುಸ್ಲಿಮರ 16 ಮನೆಗಳು ಮತ್ತು 29 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿದ ಮನೆಗಳನ್ನೂ ಕೂಡ ಕೆಡವಲಾಗಿದೆ. ಈಗಾಗಲೇ ಜೈಲುಗಳಲ್ಲಿರುವ ಸದಸ್ಯರ ಮನೆಗಳನ್ನು ಸಹ ನೆಲಸಮ ಮಾಡಲಾಗಿದೆ. ಆದರೆ ಮಧ್ಯಪ್ರದೇಶ ಸರ್ಕಾರ ಮಾತ್ರ ತನ್ನ ಕ್ರೂರ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ದೇಶದಲ್ಲಿ ನಡೆಯುತ್ತಿದೆ ಎನ್ನಲಾದ ದ್ವೇಷ ಮತ್ತು ಮತೀಯವಾದದ ಅನಾಗರಿಕ ವರ್ತನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೌಲಾನಾ ಅರ್ಷದ್ ಮದನಿ, ದೇಶಾದ್ಯಂತ ಧಾರ್ಮಿಕ ಉಗ್ರವಾದ ಮತ್ತು ದ್ವೇಷದ ಕರಾಳ ಗಾಳಿ ಬೀಸುತ್ತಿದ್ದು, ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಮುಸ್ಲಿಮರಲ್ಲಿ ಭಯ ಸೃಷ್ಟಿಸಿದೆ. ಮುಸ್ಲಿಂ ಪ್ರದೇಶಗಳಲ್ಲಿ ಮತ್ತು ಮಸೀದಿಗಳ ಮುಂದೆ ಪ್ರಚೋದನಾ ಕೆಲಸಗಳು ನಡೆಯುತ್ತಿವೆ.

ಪೊಲೀಸರ ಎದುರೇ ಲಾಠಿ, ಕತ್ತಿ ಬೀಸುತ್ತಿದ್ದಾರೆ. ಇವುಗಳ ವಿರುದ್ಧ ಮಾತನಾಡಡುವವರಿಲ್ಲ. ಎಲ್ಲರೂ ಮೂಕ ಪ್ರೇಕ್ಷಕರಾಗಿದ್ದಾರೆ. ಅವರನ್ನು ಬಂಧಿಸುವಂತಹ ಯಾವುದೇ ಕಾನೂನು ಮತ್ತು ಸರ್ಕಾರ ದೇಶದಲ್ಲಿ ಇಲ್ಲವೆಂದೆನಿಸುತ್ತದೆ. ಮತೀಯವಾದಿಗಳಿಂದ ಮುಸಲ್ಮಾನರ ಜೀವಕ್ಕೆ ಅಪಾಯವಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಮೌನವಾಗಿದೆ ಎಂದು ಮೌಲಾನಾ ಅರ್ಷದ್​ ಆರೋಪಿಸಿದ್ದಾರೆ.

ರಾಮನವಮಿ ಸಂದರ್ಭದಲ್ಲಿ, ದೇಶದ ಹಲವಾರು ರಾಜ್ಯಗಳಲ್ಲಿ ವಿಶೇಷವಾಗಿ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಮತೀಯ ಹಿಂಸಾಚಾರ, ನಂತರ ರಾಜ್ಯ ಸರ್ಕಾರದಿಂದ ಮುಸ್ಲಿಂ ಮನೆಗಳು ಮತ್ತು ಅಂಗಡಿಗಳನ್ನು ತೆರವುಗೊಳಿಸಲಾಯಿತು. ಸರ್ಕಾರಗಳು ನ್ಯಾಯಾಲಯಗಳ ಕೆಲಸವನ್ನು ಮಾಡುತ್ತಿವೆ ಎಂದು ಮೌಲಾನಾ ಮದನಿ ಕಳವಳ ವ್ಯಕ್ತಪಡಿಸಿದರು.

ಶಿಕ್ಷೆ ಮತ್ತು ಪ್ರತೀಕಾರದ ಎಲ್ಲಾ ಅಧಿಕಾರಗಳು ಸರ್ಕಾರಗಳ ಕೈಯಲ್ಲಿದೆ. ಭಾರತದಲ್ಲಿ ಕಾನೂನಿನ ಆಳ್ವಿಕೆ ಅಂತ್ಯಗೊಂಡಂತೆ ತೋರುತ್ತದೆ. ಆಳುವವರ ಬಾಯಲ್ಲಿ ಬರುತ್ತಿರುವ ಮಾತುಗಳೇ ಕಾನೂನು. ದೇಶಕ್ಕೆ ಮುಂದೆ ನ್ಯಾಯಾಲಯ ಅಥವಾ ನ್ಯಾಯಾಧೀಶರು ಅಗತ್ಯವಿಲ್ಲ ಎಂದು ತೋರುತ್ತದೆ. ಪೊಲೀಸ್​ ಮತ್ತು ಸರ್ಕಾರ ಸಂವಿಧಾನಕ್ಕೆ ಸ್ವಲ್ಪವಾದರೂ ನಿಷ್ಠೆಯನ್ನು ತೋರಿಸಿದ್ದರೆ, ಕರೌಲಿ ರಾಜಸ್ಥಾನದಲ್ಲಿ ಮುಸ್ಲಿಮರನ್ನು ಗುರಿಯಾಗಿಸುತ್ತಿರಲಿಲ್ಲ ಅಥವಾ ಖಾರ್ಗೋನ್‌ನಲ್ಲಿರುವ ಅವರ ಮನೆಗಳು ಮತ್ತು ವ್ಯಾಪಾರಗಳನ್ನು ನಾಶಪಡಿಸುತ್ತಿರಲಿಲ್ಲ. ಈ ಗಲಭೆಗಳು ನಡೆಯುವುದಲ್ಲ, ಷಡ್ಯಂತ್ರ ರೂಪಿಸಲಾಗುತ್ತಿದೆ. ಇದರ ಬಗ್ಗೆ ಈಗಾಗಲೇ ನಮಗೆ ಸಾವಿರಾರು ಅನುಭವಗಳಾಗಿವೆ ಎಂದರು.

ಸರ್ಕಾರ ಮತ್ತು ಆಡಳಿತಗಾರರು ಮನಸ್ಸು ಮಾಡಿದರೆ ಭಾರತದಲ್ಲಿ ಎಲ್ಲಿಯೂ ಗಲಭೆಗಳು ನಡೆಯದಂತೆ ನೋಡಿಕೊಳ್ಳಬಹುದು. ಎಲ್ಲಾ ಗಲಭೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿಷಯವೆಂದರೆ ಮುಸ್ಲಿಮರ ಮೇಲೆ ದಾಳಿ ಮಾಡುವುದು, ಮುಸ್ಲಿಮರನ್ನು ಕೊಲ್ಲುವುದು ಮತ್ತು ಅವರ ಮನೆ ಮತ್ತು ಅಂಗಡಿಗಳನ್ನು ತೆರವು ಮಾಡುವುದು ಮತ್ತು ಅಷ್ಟಾದ ನಂತರವೂ ನಂತರವೂ ಮುಸ್ಲಿಮರನ್ನೇ ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ದುರಂತವೆಂದರೆ ಒಂದೇ ಒಂದು ಗಲಭೆಯಲ್ಲಿ ಕಾನೂನು ಮತ್ತು ನ್ಯಾಯದ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ಆದ್ದರಿಂದಲೇ ಕಾಲ ಕಳೆದಂತೆ ಪಂಥೀಯರ ಮನೋಬಲ ಹೆಚ್ಚತೊಡಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ತುಳಿತಕ್ಕೊಳಗಾದ ಜನರಿಗೆ ನ್ಯಾಯ ದೊರಕಿಸಿಕೊಡಲು ಮತ್ತು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ನಾವು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ. ಇದರೊಂದಿಗೆ ಇನ್ನುಳಿದ ವಿಷಯದಲ್ಲೂ ನ್ಯಾಯ ಸಿಗುತ್ತದೆ ಎಂಬ ಭರವಸೆ ನಮಗಿದೆ ಎಂದರು.

ಇದನ್ನೂ ಓದಿ: ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಲಿ: ರಾಜ್ ಠಾಕ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.