ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಲಸಿಕೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ‘ರಾಜಕೀಯ ರಾಜಕಾರಣ’ದಲ್ಲಿ ಭಾಗಿಯಾಗಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗಿನ ಭೇಟಿಯ ನಂತರ ಮಾಧ್ಯಮಗಳ ಉದ್ದೇಶಿಸಿ ಮಾತನಾಡಿದ ಜೈಶಂಕರ್, ಪ್ರತಿಪಕ್ಷಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿಯವರ 'ಲಸಿಕೆ ರಾಜತಾಂತ್ರಿಕತೆ' ಟೀಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿಲು ನಿರಾಕರಿಸಿದರು.
ಇದು ಅಮೆರಿಕದ ಭೇಟಿ, ನಾವು ಗಂಭೀರ ವಿಷಯದ ಚರ್ಚೆಯಲ್ಲಿದ್ದೇವೆ. ರಾಜಕೀಯ ವಿನಿಮಯ ಮಾಡಿಕೊಳ್ಳಲು ನಾನು ಇಲ್ಲಿಲ್ಲ. ನಾನು ವಿದೇಶ ಪ್ರವಾಸದಲ್ಲಿ ಆ ರೀತಿ ಎಂದಿಗೂ ಮಾಡುವುದಿಲ್ಲ ಎಂದಿದ್ದಾರೆ.
ಅಮೆರಿಕ ನಿರ್ದಿಷ್ಟ ಪ್ರಮಾಣದ ಲಸಿಕೆಗಳನ್ನು ಕಳುಹಿಸಲು ಸಿದ್ಧವಿದೆ ಎಂದು ಸ್ವತಃ ಅಧ್ಯಕ್ಷ ಬೈಡನ್ ಹೇಳಿದ್ದರು ಎಂದು ನಾನು ಭಾವಿಸುತ್ತೇನೆ. ಲಸಿಕೆ ಆಮದು ಇಚ್ಛೆಯನ್ನ ಅಮೆರಿಕದ ಎಫ್ಡಿಎ ಸಂಸ್ಥೆಗೆ ಮನವರಿಕೆ ಮಾಡಿರುತ್ತೇವೆ. ಸದ್ಯದಲ್ಲೇ ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
ನಿನ್ನೆ ಕಾಂಗ್ರೆಸ್ ಮುಖಂಡರು, ಬಿಜೆಪಿ ಲಸಿಕೆ ರಾಜತಾಂತ್ರಿಕತೆಯಲ್ಲಿ ತೊಡಗಿದೆ. ದೇಶದ ಬಹುಪಾಲು ಜನರಿಗೆ ಲಸಿಕೆ ನೀಡದೆ ಕೊರೊನಾ ರೂಪಾಂತರಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದರು.
ಓದಿ: ಮನೆಯಲ್ಲಿ ಹಠಾತ್ತನೇ ಏರಿದ ತಾಪಮಾನ.. ಇದ್ದಕ್ಕಿದ್ದಂತೆ ನೀರೂ ಬಿಸಿ .. ಯಾಕೆ ಅಂತ್ ಇಲ್ನೋಡಿ..!!