ಜೈಪುರ : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಒಂದರ ಹಿಂದೆ ಒಂದರಂತೆ ಸಿಕ್ಕಿ ಬೀಳುತ್ತಿವೆ. ಕಳೆದ ಒಂದು ವರ್ಷದಲ್ಲಿ ಮಾತ್ರ ವಿಚಿತ್ರ ರೀತಿಯಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚೆಗೆ ಕಳ್ಳಸಾಗಣೆದಾರರು ಶೂನಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದರು. ಕಸ್ಟಮ್ಸ್ ಇಲಾಖೆ ತಂಡವು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿಯೇ ಸೆರೆ ಹಿಡಿದಿದ್ದಾರೆ.
ಏನಿದು ಘಟನೆ? : ಪ್ರಯಾಣಿಕರು ದುಬೈಯಿಂದ ಗುರುವಾರ ಸ್ಪೈಸ್‌ಜೆಟ್ ವಿಮಾನ ಸಂಖ್ಯೆ SG-713ನಲ್ಲಿ ಜೈಪುರ ವಿಮಾನ ನಿಲ್ದಾಣ ತಲುಪಿದ್ದರು. ಪ್ರಯಾಣಿಕರ ಚಲನವಲನ ಅನುಮಾನಾಸ್ಪದವಾಗಿದ್ದರಿಂದ ಕಸ್ಟಮ್ ಇಲಾಖೆ ತಂಡ ಅವರ ಮೇಲೆ ನಿಗಾವಹಿಸಿತ್ತು. ಇನ್ನೊಬ್ಬ ವ್ಯಕ್ತಿ ಪ್ರಯಾಣಿಕರ ವಸ್ತುಗಳನ್ನು ಸಂಗ್ರಹಿಸಲು ವಿಮಾನ ನಿಲ್ದಾಣದ ಹೊರಗೆ ಬಂದಿದ್ದರು.
ಓದಿ: ಆಸ್ತಿ ವಿವಾದದಲ್ಲಿ ತಂದೆಯನ್ನು ಗುಂಡುಹಾರಿಸಿ ಕೊಂದ ಮಗ
ದ್ರವರೂಪದಲ್ಲಿ ಚಿನ್ನ : ಪ್ರಯಾಣಿಕನು ತಮ್ಮ ಲಗೇಜ್ ಹೊರಗಿರುವ ಮತ್ತೊಬ್ಬನಿಗೆ ನೀಡುತ್ತಿದ್ದ ಕಸ್ಟಮ್ಸ್ ತಂಡವು ಆರೋಪಿಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಆಗ ಪ್ರಯಾಣಿಕ ಮತ್ತು ರಿಸೀವ್ಗೆ ಬಂದಿದ್ದ ಮತ್ತೊಬ್ಬ ವ್ಯಕ್ತಿ ತಬ್ಬಿಬ್ಬಾದರು. ಆಗ ಕಸ್ಟಮ್ ಇಲಾಖೆ ತಂಡವು ಪ್ರಯಾಣಿಕರ ಲಗೇಜ್ ಪರಿಶೀಲಿಸಿತು. ಹುಡುಕಾಟದ ಸಮಯದಲ್ಲಿ ಪ್ರಯಾಣಿಕರ ಶೂಗಳೊಳಗೆ ಗಟ್ಟಿಯಾದ ಕಾಗದದಿಂದ ಸುತ್ತಿದ ಎರಡು ಪಾರದರ್ಶಕ ಪಾಲಿಥಿನ್ ಕ್ಯಾಪ್ಸುಲ್ಗಳು ಪತ್ತೆಯಾಗಿವೆ. ಅದರಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಮರೆಮಾಡಲಾಗಿತ್ತು. ನಂತರ ಅವರಿಬ್ಬರನ್ನು ಬಂಧಿಸಲಾಯಿತು.
ವಿಚಾರಣೆ ವೇಳೆ ಪ್ರಯಾಣಿಕ ತಾನು ಯಾರಿಗೆ ಸರಕನ್ನು ಹಸ್ತಾಂತರಿಸುತ್ತಿದ್ದನೋ ಆ ವ್ಯಕ್ತಿ ಚಿನ್ನವನ್ನು ತೆಗೆದುಕೊಳ್ಳಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಕಸ್ಟಮ್ ಇಲಾಖಾ ತಂಡವು ಚಿನ್ನವನ್ನು ತೂಕ ಮಾಡಿದಾಗ 369.900 ಗ್ರಾಂ ತೂಗುತ್ತಿತ್ತು. ಅದರ ಮೌಲ್ಯ ಸುಮಾರು 19.45 ಲಕ್ಷ ಎಂದು ಹೇಳಲಾಗಿದೆ. ಕಸ್ಟಮ್ಸ್ ಆ್ಯಕ್ಟ್ 1962ರ ನಿಬಂಧನೆಗಳ ಅಡಿ ಕಸ್ಟಮ್ಸ್ ಇಲಾಖೆ ಚಿನ್ನವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆರೋಪಿಗಳಿಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ.