ETV Bharat / bharat

ಪತ್ನಿ ಮೇಲಿನ ಪ್ರೀತಿಗಾಗಿ 50 ವರ್ಷದ ಹಳೆಯ ಸ್ಕೂಟರ್​ ಆಯ್ತು 'ಸೂಪರ್​ ಸ್ಕೂಟರ್​' - ಪತ್ನಿಗಾಗಿ ತಯಾರಾದ ಸೂಪರ್ ಸ್ಕೂಟರ್

ಪತ್ನಿ ಇನ್ನು ಮುಂದೆ ಹಳೆಯ ಸ್ಕೂಟರ್​ ಮೇಲೆ ಕೂರಲ್ಲ ಎಂದಿದ್ದಕ್ಕೆ ಪತಿ ಮಹಾಶಯನೊಬ್ಬ 80 ಸಾವಿರ ಖರ್ಚು ಮಾಡಿ ಸ್ಕೂಟರ್​ಗೆ ಹೊಸ ಲುಕ್​ ನೀಡಿದ್ದಾರೆ. ಆ ಸ್ಕೂಟರ್​ 50 ವರ್ಷದ ಹಳೆಯದ್ದು ಎಂಬುದು ಇನ್ನೂ ವಿಶೇಷ.

scooter
ಸೂಪರ್​ ಸ್ಕೂಟರ್​
author img

By

Published : May 2, 2022, 9:00 PM IST

Updated : May 2, 2022, 9:18 PM IST

ಜಬಲ್‌ಪುರ(ಮಧ್ಯಪ್ರದೇಶ): ಕಟ್ಟಿಕೊಂಡ ಹೆಂಡತಿ ಏನೇ ಹೇಳಿದರೂ ಗಂಡನೆಂಬ ಜೀವಿ ಮಾಡಿಕೊಡಲೇಬೇಕು. ಅದರಲ್ಲೂ ಪತ್ನಿ ಮುನಿಸಿಕೊಂಡರೆ ಅವಳನ್ನು ಸಮಾಧಾನಿಸುವುದು ಕಷ್ಟ ಕಷ್ಟ. ಮಧ್ಯಪ್ರದೇಶದ ಜಬಲ್​ಪುರದಲ್ಲಿ ಪತ್ನಿಯೊಬ್ಬಳು ಹಳೆಯ ಸ್ಕೂಟರ್​ ಮೇಲೆ ಕೂರಲ್ಲ ಎಂದು ಹೇಳಿ ಕೋಪಗೊಂಡಿದ್ದಕ್ಕೆ ವ್ಯಕ್ತಿಯೊಬ್ಬ ಇಡೀ ಸ್ಕೂಟರನ್ನೇ ಮರುರೂಪಿಸಿದ್ದಲ್ಲದೇ, ಅದನ್ನು ಕಂಡ ಪ್ರತಿಯೊಬ್ಬರೂ ಕಣ್ ಕಣ್ ಬಿಡುವಂತೆ ಮಾಡಿದ್ದಾರೆ.

ಪತ್ನಿ ಮೇಲಿನ ಪ್ರೀತಿಗಾಗಿ 50 ವರ್ಷದ ಹಳೆಯ ಸ್ಕೂಟರ್​ ಆಯ್ತು 'ಸೂಪರ್​ ಸ್ಕೂಟರ್​'

ಜಬಲ್‌ಪುರದ ಸತ್ಪುಲಾ ಬಜಾರ್ ನಿವಾಸಿಯಾದ, ಗ್ಯಾರೇಜ್​ ನಡೆಸುತ್ತಿರುವ ಮಿಸ್ತ್ರಿ ಮೊಹಮ್ಮದ್ ಅಕ್ರಮ್ 'ಸೂಪರ್​ ಸ್ಕೂಟರ್​'ನ ಮಾಲೀಕ. ಹಳೆಯ ಸ್ಕೂಟರ್​ ಬಳಸುತ್ತಿದ್ದ ಅಕ್ರಮ್​ ತನ್ನ ಪತ್ನಿಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ, ಕೋಪಿಸಿಕೊಂಡ ಹೆಂಡತಿ ಇನ್ಮುಂದೆ ಈ ಹಳೆಯ ಸ್ಕೂಟರ್​ ಮೇಲೆ ಕೂರಲ್ಲ ಎಂದು ರೇಗಾಡಿದ್ದಾಳೆ.

ಇದರಿಂದ ನೊಂದ ಅಕ್ರಮ್​ ತನ್ನ ಪ್ರೀತಿಯ ಹಳೆ ಸ್ಕೂಟರ್​ ಅನ್ನು ಬಿಸಾಡುವ ಬದಲು ಅದನ್ನೇ ಹೊಸದಾಗಿ ಮಾಡಲು ಯೋಚಿಸಿ, ತನ್ನ ಗ್ಯಾರೇಜ್​ನಲ್ಲಿದ್ದ ಬಿಡಿ ಭಾಗಗಳನ್ನೇ ಬಳಸಿ ಹಳೆಯ ಸ್ಕೂಟರ್​ಗೆ ಹೊಸ ಲುಕ್​ ನೀಡಿದ್ದಾರೆ.

ಮೊಹಮ್ಮದ್​ ಅಕ್ರಮ್​ರ ಸೂಪರ್​ ಸ್ಕೂಟರ್
ಮೊಹಮ್ಮದ್​ ಅಕ್ರಮ್​ರ ಸೂಪರ್​ ಸ್ಕೂಟರ್

4 ತಿಂಗಳು, 80 ಸಾವಿರ ಖರ್ಚು: 50 ವರ್ಷಗಳ ಹಳೆಯ ಸ್ಕೂಟರ್​ ಅನ್ನು ಮರು ರೂಪಿಸಲು ಅಕ್ರಮ್​ 4 ತಿಂಗಳು ಶ್ರಮಿಸಿ, 80 ಸಾವಿರ ರೂಪಾಯಿ ಖರ್ಚು ಮಾಡಿದ್ದಾರಂತೆ. ಸ್ಕೂಟರ್​ಗೆ ರೇಡಿಯಂ ಮೂಲಕ ಬೆಳಕು ಮೂಡುವ ದೀಪಗಳನ್ನು ಅಳವಡಿಸಿದ್ದಾರೆ. ಇದು ರಾತ್ರಿಯ ವೇಳೆ ವಿವಿಧ ಬಣ್ಣಗಳಲ್ಲಿ ಝಗಮಗ ಎಂದು ಹೊಳೆಯುತ್ತದೆ. ಅಲ್ಲದೇ, ಸ್ಕೂಟರ್​ನಲ್ಲಿ ಹಾಡುಗಳನ್ನು ಕೇಳುವಂತೆ ಚಿಕ್ಕದಾದ ಮೊಬೈಲ್​ ಅನ್ನು ಕೂಡಿಸಿದ್ದಾರೆ. ಇದನ್ನು ನಿರ್ವಹಿಸಲು ಬಟನ್​ಗಳನ್ನು ಅಳವಡಿಸಿದ್ದಾರೆ.

ಇನ್ನೂ ವಿಶೇಷ ಅಂದ್ರೆ ಸ್ಕೂಟರ್‌ನ ಹಿಂಬದಿಯಲ್ಲಿ ಕ್ಯಾಮೆರಾ ಕೂಡ ಇದೆ. ಬಣ್ಣಗಳಿಂದ ಹೊಳೆಯುವ ಈ ಸ್ಕೂಟರ್​ ಥೇಟ್​ ಹೊಸ ಮಾದರಿಯ ಸ್ಕೂಟರ್​ನಂತಾಗಿದೆ. ಪ್ರಸ್ತುತ ಈ ಹಳೆಯ ಸ್ಕೂಟರ್ ಪ್ರತಿ ಲೀಟರ್‌ಗೆ ಸರಾಸರಿ 50 ಕಿಲೋಮೀಟರ್ ಮೈಲೇಜ್​ ಕೊಡುತ್ತಿದೆ. ಶೀಘ್ರದಲ್ಲೇ ಸ್ಕೂಟರ್‌ನಲ್ಲಿ ಬ್ಯಾಟರಿಯನ್ನೂ ಅಳವಡಿಸುವುದಾಗಿ ಅಕ್ರಮ್​ ಹೇಳಿಕೊಂಡಿದ್ದಾರೆ.

ಝಗಮಗ ಹೊಳೆಯುತ್ತಿರುವ ಸೂಪರ್​ ಸ್ಕೂಟರ್​
ಝಗಮಗ ಹೊಳೆಯುತ್ತಿರುವ ಸೂಪರ್​ ಸ್ಕೂಟರ್​

ಲಕ್ಷ ರೂಪಾಯಿಗಳಿಗೆ ಖರೀದಿ ಬೇಡಿಕೆ: ಇನ್ನು ಹಳೆಯ ಸ್ಕೂಟರ್​ಗೆ ಹೊಸ ಲುಕ್​ ನೀಡಿದ ಬಳಿಕ ಜನರು ಇದನ್ನು ಖರೀದಿ ಮಾಡಲು ಲಕ್ಷಗಟ್ಟಲೇ ಹಣವನ್ನು ನೀಡಲು ಮುಂದಾಗಿದ್ದಾರೆ. 3 ಲಕ್ಷಕ್ಕೆ ಮಾರಾಟ ಮಾಡಲು ಅಕ್ರಮ್​ನನ್ನು ಕೇಳಿದ್ದಾರೆ. ಆದರೆ, ಇದನ್ನು ಅಕ್ರಮ್​ ಮಾರಾಟ ಮಾಡಲು ಸುತಾರಾಂ ಒಪ್ಪುತ್ತಿಲ್ಲ.

ಸ್ಕೂಟರ್​ನಲ್ಲಿ ವರನ ಮೆರವಣಿಗೆ: ಇನ್ನು ಝಗಮಗಿಸುವ ಈ ಸ್ಕೂಟರ್​ನಲ್ಲಿ ಹೊಸದಾಗಿ ಮದುವೆಯಾದ ವರನನ್ನು ಮೆರವಣಿಗೆ ಮಾಡಲಾಗುತ್ತಿದೆ. ಮೆರವಣಿಗಾಗಿ ಸ್ಕೂಟರ್​ ಅನ್ನು ಬಾಡಿಗೆ ಪಡೆದುಕೊಂಡು ಹೋಗುತ್ತಾರಂತೆ. ಪತ್ನಿ ಕೋಪ ತಣಿಸಲು ಪತಿರಾಯ ಮಾಡಿದ ಈ ಐಡಿಯಾದಿಂದ ಹೆಂಡತಿಯೂ ಖುಷ್​, ಜೊತೆಗೆ ಸ್ಕೂಟರ್​ನಿಂದ ಆದಾಯವೂ ಬರುತ್ತಿದೆ.

ಓದಿ: TO-LET ಬೋರ್ಡ್​​ ನೋಡಿ ಬಾಡಿಗೆ ಕೇಳಲು ಬಂದ ಜೋಡಿ.. ಒಳಹೋಗಿ ಮಾಡಿದ್ದೇನು ಗೊತ್ತಾ!?

Last Updated : May 2, 2022, 9:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.