ಜಬಲ್ಫುರ್ (ಮಧ್ಯ ಪ್ರದೇಶ): ವಿದೇಶಗಳಲ್ಲಿ ಬೆಳೆಯುತ್ತಿದ್ದ ವಿಶೇಷ ತಳಿಯ ಮಾವು ಬೆಳೆಯನ್ನು ಇದೀಗ ಭಾರತದಲ್ಲಿಯೂ ಕಾಣಬಹುದು. ಮಧ್ಯಪ್ರದೇಶದ ಜಬಲ್ಫುರ್ನಲ್ಲಿ ದುಬಾರಿ ತಳಿಯ ವಿದೇಶಿ ಮಾವುಗಳನ್ನು ಬೆಳೆಯಲಾಗುತ್ತಿದೆ. ಈ ಹಣ್ಣುಗಳನ್ನು ಬೆಳೆಯಲು ಇಲ್ಲಿ ಪೂರಕ ವಾತಾವರಣವಿದ್ದು, ಅಮೆರಿಕ, ಚೀನಾ, ಜಪಾನ್, ನೇಪಾಳದ ಮಾವುಗಳನ್ನು ಇಲ್ಲಿನ ರೈತರೊಬ್ಬರು ಬಿಗಿ ಭದ್ರತೆಯಲ್ಲಿ ಬೆಳೆಯುತ್ತಿದ್ದಾರೆ. ದುಬಾರಿ ಮಾವು ರಕ್ಷಣೆಗೆ ಅವರು ವಿದೇಶಿ ತಳಿಯ ಆಕ್ರಮಣಮಕಾರಿ ನಾಯಿಗಳನ್ನು ಕಾವಲು ಇಡುವುದರ ಜೊತೆಗೆ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಅಳವಡಿಸಿದ್ದಾರೆ. ಈ ಮೂಲಕ ಮಾವು ಕಳುವಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಒಂದು ರೀತಿಯಲ್ಲಿ ಜೆಡ್ ಪ್ಲಸ್ ಮಾದರಿಯಲ್ಲಿ ಈ ಮಾವುಗಳ ರಕ್ಷಣೆ ನಡೆಯುತ್ತಿದ್ದು, ಯಾಕಾಗಿ ವಿವಿಐಪಿ ರಕ್ಷಣೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಕುರಿತು ಮಾತನಾಡಿರುವ ಜಬಲ್ಪುರ್ನ ಹಿನೌಟಾ ರೈತ ಸಂಕಲ್ಪ್ ಸಿಂಗ್ ಪರಿಹಾರ್, "ನೆರೆಯ ನೇಪಾಳ, ಜಪಾನ್, ಚೀನಾ ಮತ್ತು ಅಮೆರಿಕ ಸೇರಿದಂತೆ ಒಟ್ಟು 8 ವಿದೇಶಿ ತಳಿಗಳ ಮಾವನ್ನು ಇಲ್ಲಿ ಬೆಳೆಯಲಾಗುತ್ತಿದೆ. ಹಣ್ಣಿಗೆ ವಿದೇಶಿ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ ಮೌಲ್ಯ ಇದೆ. ಕಳೆದ ವರ್ಷ ಕೂಡ ಈ ಹಣ್ಣುಗಳನ್ನು ಬೆಳೆಯಲಾಗಿದ್ದು, ಭದ್ರತೆಯ ಕೊರತೆಯಿಂದ ಸಾಕಷ್ಟು ಹಣ್ಣುಗಳು ಕಳುವಾಗಿದ್ದವು" ಎಂದು ಹೇಳಿದರು.
ಈ ಬಾರಿ 12ಕ್ಕೂ ಹೆಚ್ಚು ಜರ್ಮನ್ ಶೆಫರ್ಡ್ ಶ್ವಾನಗಳು, ಸಿಸಿಟಿವಿ ಕ್ಯಾಮರಾ ಸೇರಿದಂತೆ ನಾಲ್ವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಮಾವಿನ ಹಣ್ಣಿನ ರಕ್ಷಣೆಗೆ ದಿನದ 24 ಗಂಟೆಗಳ ಕಾಲವೂ ನೇಮಿಸಲಾಗಿದೆ. 8 ವಿದೇಶಿ ತಳಿಯ ಮಾವು ಸೇರಿದಂತೆ 24 ತಳಿಯ ಮರಗಳನ್ನು ಶ್ರೀ ಮಹಾಕಳೇಶ್ವರ್ ಹೈಬ್ರಿಡ್ ಫಾರ್ಮ್ಹೌಸ್ನಲ್ಲಿ ಕಾಣಬಹುದು. ಇದರಲ್ಲಿ ಮಿಯಾಜಾಕಿ ಮಾವು ವಿಶೇಷ ಮಾವು ಆಗಿದೆ.
ಸ್ವದೇಶಿ- ವಿದೇಶಿ ಹಣ್ಣುಗಳು: ಈಟಿವಿ ಭಾರತ್ನೊಂದಿಗೆ ಮಾತನಾಡಿದ ಸಂಕಲ್ಪ್ ಸಿಂಗ್, "ಒಂದು ಕೆಜಿ ಮಿಯಾಜಾಕಿ ಹಣ್ಣಿನ ಬೆಲೆ 2 ಲಕ್ಷದ 70 ಸಾವಿರ ರೂ ಆಗಿದೆ. ಇದರ ಹೊರತಾಗಿ ಬಂಬೊ ಗ್ರೀನ್ ಮಾವು ಕೂಡ ತಲಾಲಾ ಗಿರ್ ಕೇಸರ್ ಮಾವು ಎಂದು ಪ್ರಖ್ಯಾತಿ ಹೊಂದಿದೆ. ಇದರ ಜೊತೆಗೆ ಜಪಾನಿನ ಬ್ರಿಂಜಲ್, ಟೈಯೊ ನೊ ತಮಾಂಗೋ ಬೆಳೆಯಲಾಗುತ್ತಿದೆ. ಟೈಯೊ ನೊ ತಮಾಂಗೋ ಅನ್ನು ಮಿಯಾಜಾಕಿ ಎಂದು ಕರೆಲಾಗುವುದು. ಇದು ಸೂರ್ಯನ ಮೊಟ್ಟೆ ಎಂದೂ ಕೂಡ ಪರಿಚಿತ. ಜಪಾನಿನ ಮಿಯಾಜಾಕಿಯಲ್ಲಿ ಇದನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ.
ನೇಪಾಳದ ಕೇಸರ್ ಬಾದಾಮಿ ಮಾವು, ಚೀನಾದ ಐವೊರಿ ಐವೊರಿ, ಪ್ಲೋರಿಡಾದ ಮ್ಯಾಂಗಿಫೆರಾ ಟೊಮ್ಮಿ, ಅಮೆರಿಕದ ಬ್ಲಾಕ್ ಮಾವು ಎಂದು ಪರಿಚಿತವಾಗಿರುವ ಅಟಕಿನ್ಸ್ ಕೂಡ ಇವರ ತೋಟದಲ್ಲಿದೆ. ಇದರ ಜೊತೆಗೆ 8 ಅಂತಾರಾಷ್ಟ್ರೀಯ ಮಾವಿನ ತಳಿ, 24ಕ್ಕೂ ಹೆಚ್ಚು ಭಾರತದ ತಳಿಯ ಹಣ್ಣುಗಳನ್ನು ಇಲ್ಲಿ ಕಾಣಬಹುದು.
ಈ ಮೌಲ್ಯಯುತ ಹಣ್ಣುಗಳಿಗೆ ಇದೀಗ ಜೆಡ್ ಪ್ಲಸ್ ಸೆಕ್ಯೂರಿಟಿಗೂ ಕಡಿಮೆ ಇಲ್ಲದ ರಕ್ಷಣೆ ಒದಗಿಸಲಾಗಿದೆ. "ಮಾವಿನ ಹಣ್ಣುಗಳು ನಮಗೆ ಮಕ್ಕಳ ರೀತಿ. ಅವುಗಳನ್ನು ಜತನದಿಂದ ಸಾಕುತ್ತಿದ್ದೇವೆ. ಜನರು ಒಲ್ಲಿನ ಬ್ಲಾಕ್ ಮಾವು, ಜಂಬೂ ಗ್ರೀನ್ ಮತ್ತು ಮಿಯಾಜಾಕಿ ನೋಡಲು ಆಗಮಿಸುತ್ತಾರೆ. ಅವುಗಳೊಂದಿಗೆ ಸೆಲ್ಫಿ ಕೂಡ ತೆಗೆಸಿಕೊಳ್ಳುತ್ತಾರೆ. ಅವುಗಳನ್ನು ಮುಟ್ಟದಂತೆ ಜನರಿಗೆ ನಾವು ಮನವಿ ಮಾಡುತ್ತೇವೆ" ಎನ್ನುತ್ತಾರೆ ಸಂಕಲ್ಪ್ ಸಿಂಗ್.
ಇದನ್ನೂ ಓದಿ: 13 ಕೋಟಿ ರೂ. ಮೌಲ್ಯದ ಹಾವಿನ ವಿಷ ವಶಕ್ಕೆ ಪಡೆದ ಬಿಎಸ್‌ಎಫ್