ಶ್ರೀನಗರ : ಜಮ್ಮು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಭದ್ರತಾ ಪಡೆಗಳ ಎನ್ ಕೌಂಟರ್ನಲ್ಲಿ ಓರ್ವ ಉಗ್ರನನ್ನು ಹತನಾಗಿದ್ದು, ತಪ್ಪಿಸಿಕೊಂಡಿದ್ದ ಇನ್ನೋರ್ವನನ್ನು 20 ಕಿ.ಮೀ ದೂರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುದ್ಗಾಮ್ ಜಿಲ್ಲೆಯ ಮೊಚುವಾ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ, ಭದ್ರತಾ ಪಡೆಯ ಯೋಧರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಸೈನಿಕರ ಮೇಲೆ ಉಗ್ರರು ಗುಂಡು ಹಾರಿಸಿದರು. ಹಾಗಾಗಿ, ಭದ್ರತಾ ಪಡೆಗಳು ಎನ್ಕೌಂಟರ್ ಕಾರ್ಯಾಚರಣೆ ನಡೆಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಓದಿ : ಆ.15ರಂದು ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಯುಪಿ ಸಿಎಂ ಯೋಗಿಗೆ ಬೆದರಿಕೆ
ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಆತನಿಂದ ಒಂದು ಎಕೆ 47 ರೈಫಲ್ ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಟ್ರಕ್ ಚಾಲಕನಾಗಿರುವ ಇನ್ನೋರ್ವ ಉಗ್ರನನ್ನು ಮೊಚುವಾದಿಂದ 20 ಕಿ.ಮೀ ದೂರ ಖ್ರೂ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಆತನ ಟ್ರಕ್ನಲ್ಲಿ ಪಿಸ್ತೂಲ್ ಮತ್ತು ಗ್ರೆನೇಡ್ ಪತ್ತೆಯಾಗಿವೆ ಎಂದು ಕಾಶ್ಮೀರ ವಲಯ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
-
#BudgamEncounterUpdate: 2nd #terrorist who escaped from #encounter site, after following a lead, has been #arrested in Khrew. A pistol & a grenade has been recovered from his possession. Truck driver also arrested: IGP Kashmir@JmuKmrPolice
— Kashmir Zone Police (@KashmirPolice) August 7, 2021 " class="align-text-top noRightClick twitterSection" data="
">#BudgamEncounterUpdate: 2nd #terrorist who escaped from #encounter site, after following a lead, has been #arrested in Khrew. A pistol & a grenade has been recovered from his possession. Truck driver also arrested: IGP Kashmir@JmuKmrPolice
— Kashmir Zone Police (@KashmirPolice) August 7, 2021#BudgamEncounterUpdate: 2nd #terrorist who escaped from #encounter site, after following a lead, has been #arrested in Khrew. A pistol & a grenade has been recovered from his possession. Truck driver also arrested: IGP Kashmir@JmuKmrPolice
— Kashmir Zone Police (@KashmirPolice) August 7, 2021
ಹತನಾದ ಮತ್ತು ಸೆರೆ ಹಿಡಿಯಲಾದ ಉಗ್ರರು ಮತ್ತು ಅವರ ಸಂಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಮೊಚುವಾ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.