ETV Bharat / bharat

ಕಾಶ್ಮೀರದ ಇಬ್ಬರು ಮಾಜಿ ವಿಭಾಗೀಯ ಅಧಿಕಾರಿಗಳ ನಿವಾಸದ ಮೇಲೆ CBI ದಾಳಿ: ಮಹತ್ವದ ದಾಖಲೆ ವಶಕ್ಕೆ - ಕೇಂದ್ರ ತನಿಖಾ ದಳ

ರೋಶಿನಿ ಕಾಯ್ದೆಯ ಮೂಲಕ ಭೂಮಿ ಪಡೆದವರ ವಿರುದ್ಧ ಮತ್ತು ಭೂಮಿ ಪಡೆಯಲು ಸಹಕರಿಸಿದವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

J-K: CBI raids residences of two former Kashmir Divisional Commissioners
ಕಾಶ್ಮೀರದ ಇಬ್ಬರು ಮಾಜಿ ವಿಭಾಗೀಯ ಅಧಿಕಾರಿಗಳ ನಿವಾಸದ ಮೇಲೆ ಸಿಬಿಐ ದಾಳಿ: ಮಹತ್ವದ ದಾಖಲೆ ವಶಕ್ಕೆ
author img

By

Published : Jul 16, 2021, 11:17 PM IST

ಶ್ರೀನಗರ, ಜಮ್ಮು ಕಾಶ್ಮೀರ: ರೋಶಿನಿ ಹಗರಣದ ತನಿಖೆ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಸೂಚಿಸಿದಂತೆ ದೂರು ದಾಖಲಿಸಿಕೊಂಡಿರುವ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಶ್ರೀನಗರ ಮತ್ತು ಜಮ್ಮುವಿನ ಸುಮಾರು 9 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಕಾಶ್ಮೀರದ ಇಬ್ಬರು ಮಾಜಿ ವಿಭಾಗೀಯ ಆಯುಕ್ತರು, ಶ್ರೀನಗರದ ಡೆಪ್ಯುಟಿ ಕಮೀಷನರ್​, ನಾಜೂಲ್​​ನ ಅಸಿಸ್ಟೆಂಟ್ ಕಮೀಷನರ್​ ಹಾಗೂ ತಹಶೀಲ್ದಾರ್ ಮುಂತಾದವರಿಗೆ ಸಂಬಂಧಿಸಿ 9 ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿ, ಮಾಹಿತಿ ಸಂಗ್ರಹಿಸಿದೆ.

ಸಿಬಿಐ ಶೋಧ ಕಾರ್ಯದಲ್ಲಿ, ಆಸ್ತಿ ಮಾಲೀಕತ್ವದ ಹಕ್ಕುಗಳು, ಶ್ರೀನಗರ, ಜಮ್ಮು ಮತ್ತು ನವದೆಹಲಿಯಲ್ಲಿರುವ ಹಲವಾರು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು, 25 ಲಕ್ಷ ರೂಪಾಯಿಗಿಂತ ಹೆಚ್ಚಿನ ಸ್ಥಿರ ಠೇವಣಿ, 2 ಲಕ್ಷ ನಗದು, 6 ಬ್ಯಾಂಕ್​ ಲಾಕರ್​​ಗಳ ಕೀಗಳು ಮತ್ತು ಹಲವಾರು ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲಾಗಿದೆ.

ಏನಿದು ರೋಶಿನಿ ಹಗರಣ..?

ಜಮ್ಮು ಮತ್ತು ಕಾಶ್ಮೀರ ಭೂಮಿ (ಭೂಮಿ ಆಕ್ರಮಿಸಿಕೊಂಡವರಿಗೆ ಮಾಲೀಕತ್ವವನ್ನು ಹಸ್ತಾಂತರಿಸುವುದು) ಕಾಯ್ದೆಯನ್ನು 2001ರಲ್ಲಿ ಜಾರಿಗೊಳಿಸಲಾಗಿದ್ದು, ಇದೇ ಕಾಯ್ದೆಯನ್ನು ರೋಶಿನಿ ಕಾಯ್ದೆ ಎಂದು ಕರೆಯಲಾಗುತ್ತದೆ. ಈ ಕಾಯ್ದೆಯಡಿಯಲ್ಲಿ ಸುಮಾರು 24 ಲಕ್ಷ ಎಕರೆಯಷ್ಟು ಭೂಮಿಯನ್ನು ಆಕ್ರಮಿಸಿಕೊಂಡವರ ಮಾಲೀಕತ್ವಕ್ಕಾಗಿ ಬಿಟ್ಟುಕೊಡಬೇಕಾಯಿತು.

ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಬೆಟ್ಟ, ಗುಡ್ಡ, ನದಿಗಳ ಅಕ್ಕಪಕ್ಕದ ಜಮೀನು ರಾಜಕಾರಣಿಗಳ, ಉನ್ನತ ಅಧಿಕಾರಿಗಳ ಕೈವಶವಾಗಿದೆ, ಅರ್ಹರಿಗೆ ಭೂಮಿ ಸಿಕ್ಕಿಲ್ಲ ಎಂದು ಆರೋಪಿಸಲಾಗಿದ್ದು, ರೋಶಿನಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಅನೂರ್ಜಿತಗೊಳಿಸಿತು.

ಈಗ ಈ ಕಾಯ್ದೆಯ ಮೂಲಕ ಭೂಮಿ ಪಡೆದವರ ವಿರುದ್ಧ ಮತ್ತು ಭೂಮಿ ಪಡೆಯಲು ಸಹಕರಿಸಿದವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಸಿಬಿಐ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.