ETV Bharat / bharat

ಇಬ್ಬರು ಉಗ್ರ ಸಹೋದರರ ಬಂಧನ: ಪ್ರಮುಖ ಗೆಲುವು ಎಂದ ಭದ್ರತಾ ಪಡೆ

author img

By

Published : Dec 27, 2020, 8:13 PM IST

ಜಮ್ಮು ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕ ಸಹೋದರರನ್ನು ಭದ್ರತಾ ಪಡೆ ಬಂಧಿಸಿದ್ದು, ಇದನ್ನು ಪ್ರಮುಖ ಯಶಸ್ಸು ಎಂದು ಸೇನೆ ಬಣ್ಣಿಸಿದೆ.

army operation
ಸೇನಾ ಕಾರ್ಯಾಚರಣೆ

ಪೂಂಚ್ (ಜಮ್ಮು ಕಾಶ್ಮೀರ): ಇಬ್ಬರು ಭಯೋತ್ಪಾದಕರನ್ನು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂದಾರ್ ಸೆಕ್ಟರ್​​ನಲ್ಲಿ ಭದ್ರತಾ ಪಡೆ ಬಂಧಿಸಿದ್ದು, ಅವರಿಂದ 6 ಗ್ರೆನೇಡ್​ಗಳನ್ನು ಭಾನುವಾರ ವಶ ಪಡಿಸಿಕೊಂಡಿದೆ.

ಬಂಧಿತರನ್ನು ಮುಸ್ತಾಫಾ ಇಕ್ಬಾಲ್ ಮತ್ತು ಮುರ್ತಝಾ ಇಕ್ಬಾಲ್ ಎಂದು ಗುರುತಿಸಲಾಗಿದ್ದು, ಅವರಿಬ್ಬರೂ ಸಹೋದರರಾಗಿದ್ದಾರೆ. ಅವರು ಅರಿ ಎಂಬ ಗ್ರಾಮದ ದೇವಸ್ಥಾನದ ಮೇಲೆ ದಾಳಿ ಮಾಡಲು ಯೋಜನೆ ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಜೆ-ಕೆ ತನ್ನ ಎಲ್ಲ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆ ತಲುಪಿಸುವಲ್ಲಿ ಮೊದಲ ಸ್ಥಾನ : ಅಮಿತ್‌ ಶಾ

ಗಲ್ಹುಟಾ ಗ್ರಾಮದಲ್ಲಿ ಭದ್ರತಾ ಕಾರ್ಯಾಚರಣೆ ವೇಳೆ ಅವರಿಬ್ಬರನ್ನೂ ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಂತರ ತಮ್ಮ ಮನೆಯಲ್ಲಿ ಶಸ್ತ್ರಗಳನ್ನು ಬಚ್ಚಿಟ್ಟಿರುವುದಾಗಿ ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಂಕಿತ ಉಗ್ರರ ಹೇಳಿಕೆಯಂತೆ ಅವರ ಮನೆಯನ್ನು ಪರಿಶೀಲನೆ ನಡೆಸಿ ಆರು ಗ್ರೆನೇಡ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಭಯೋತ್ಪಾದಕ ಸಂಘಟನೆಗಳ ಕೆಲವು ಪೋಸ್ಟರ್​ಗಳನ್ನು ಕೂಡಾ ಜಪ್ತಿ ಮಾಡಲಾಗಿದೆ.

ಶಂಕಿತ ಉಗ್ರರ ಮೊಬೈಲ್​ನಲ್ಲಿ ಪಾಕಿಸ್ತಾನಿ ನಾಗರಿಕರ ಮೊಬೈಲ್ ಸಂಖ್ಯೆ ಪತ್ತೆಯಾಗಿದ್ದು, ಈ ಇಬ್ಬರ ಬಂಧನವನ್ನು ಪ್ರಮುಖ ಗೆಲುವು ಎಂದು ಭದ್ರತಾ ಪಡೆಗಳು ಬಣ್ಣಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.