ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಪಾಕ್ ಭಯೋತ್ಪಾದಕರು ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸುತ್ತಿದ್ದರು ಎಂದು ಶಂಕಿಸಲಾದ ಭೂಗತ ಸುರಂಗವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬುಧವಾರ ಪತ್ತೆ ಮಾಡಿದೆ. ನಿನ್ನೆ ಸಂಜೆ 5.30 ರ ಸುಮಾರಿಗೆ ಸಾಂಬಾ ಜಿಲ್ಲೆಯ ಚಕ್ ಫಕೀರಾದ ಗಡಿಯ ಸಾಮಾನ್ಯ ಪ್ರದೇಶದಲ್ಲಿ ಈ ಸುರಂಗ ಕಾಣಿಸಿದೆ.
ಅಂತರರಾಷ್ಟ್ರೀಯ ಗಡಿಯಿಂದ 150 ಮೀಟರ್ ಹಾಗೂ ಗಡಿ ಬೇಲಿಯಿಂದ 50 ಮೀಟರ್, ಭಾರತದ ಕಡೆಯಿಂದ 900 ಮೀಟರ್ ದೂರದಲ್ಲಿರುವ ಪಾಕಿಸ್ತಾನದ ಚಮನ್ ಖುರ್ದ್ (ಫಿಯಾಜ್) ಚೌಕಿ ಎದುರು ಸುರಂಗ ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.
ಜಮ್ಮುವಿನ ಸುಂಜ್ವಾನ್ ಸೇನೆ ನೆಲೆ ಬಳಿ ಕಳೆದ 15 ದಿನಗಳ ಹಿಂದೆ ನಡೆದ ನುಸುಳುಕೋರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆಯು ಜಮ್ಮುವಿನ ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ಗಡಿಯಾಚೆಗಿನ ಭೂಗತ ಸುರಂಗ ಪತ್ತೆಗೆ ಬೃಹತ್ ಕಾರ್ಯಾಚರಣೆ ಆರಂಭಿಸಿದೆ. ಕಳೆದ ವರ್ಷ ಜನವರಿಯಲ್ಲಿ ಕಥುವಾ ಜಿಲ್ಲೆಯ ಹೀರಾನಗರ ವಲಯದಲ್ಲಿ ಭದ್ರತಾ ಪಡೆ ಎರಡು ಸುರಂಗಗಳನ್ನು ಪತ್ತೆ ಹಚ್ಚಿತ್ತು.
ಇದನ್ನೂ ಓದಿ: 'ವಿನೀತ, ಸರಳ ವ್ಯಕ್ತಿತ್ವ..': ರಾಹುಲ್ ಗಾಂಧಿ ಜೊತೆಗಿನ ಫೋಟೋ ಹಂಚಿಕೊಂಡ ನೇಪಾಳಿ ಗಾಯಕಿ